ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ರನ್ನು ಅಮಾನತ್ತು ಮಾಡುವಂತೆ ಪ್ರತಿಭಟನೆ

ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಕರನ್ನು ಅನ್ಯ ಇಲಾಖೆಗಳಿಗೆ ನಿಯೋಜನೆಮೇಲೆ ಕಳುಹಿಸಿರುವುದು ಹಾಗೂ ಅವರನ್ನು ವಾಪಾಸ್ಸು ಕರೆಸುವಂತೆ ಆಗ್ರಹಿಸಿ ಕನಸೇ ಸಂಘಟನೆಯು  ಈ ಹಿಂದೆ ಮನವಿಯನ್ನು ಸಲ್ಲಿಸಲಾಯಿತು. ಅದೇರಿತಿ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಹಾಗೂ ಆಯುಕ್ತರ ನಿರ್ದೇಶನದಂತೆ ವಾಪಸ್ಸು ಕರೆಸುವಂತೆ ಮನವಿ ಮಾಡಿಕೊಳ್ಳಲಾಯಿತು. ಆದರೆ ಡಿಡಿಪಿಐ ರವರು ನಿಯೋಜನೆ ಶಿಕ್ಷಕರ ಕುರಿತು ತಪ್ಪು ಮಾಹಿತಿ ನೀಡುವುದರ ಮೂಲಕ ಸಂಘಟನೆ ಹಾಗೂ ಸರಕಾರಕ್ಕೂ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಕನಸೇ ಸಂಘಟನೆಯು ಮಾಹಿತಿಯನ್ನು ಪಡೆದಿದ್ದು, ಅದರಂತೆ ೧೨ ಜನ ಶಿಕ್ಷಕರು ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡು ೧೨ ಜನ ಶಿಕ್ಷಕರ ಪೈಕಿ ಒಬ್ಬ ಶಿಕ್ಷಕರನ್ನು ಮಾತ್ರ ಮರಳಿ ಇಲಾಖೆಗೆ ಕರೆಹಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ವಿದಾನಪರಿಷತ್ತ ಸದಸ್ಯರಾದ  ಹಾಲಪ್ಪ ಆಚಾರ ಅವರು ಸದರಿ ಮಾಹಿತಿಯನ್ನು ಪಡೆದಿದ್ದು, ೧೨ ಜನ ಶಿಕ್ಷಕರ ಪೈಕಿ ಮೂರುಜನ ಶಿಕ್ಷಕರನ್ನು ಮರಳಿ ಇಲಾಖೆಗೆ ಕರೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ವಿಚಿತ್ರ ಎಂದರೆ ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸ್ವತಃ ಶಿಕ್ಷಣ ಸಚಿವ ಕಿಮ್ಮನೇ ರತ್ನಾಕರ ಅವರು ವಿದಾನಪರಿಷತ್ತ ಸದಸ್ಯ  ಹಾಲಪ್ಪ ಆಚಾರ ಅವರಿಗೆ ಒದಗಿಸಿರುವ ಮಾಹಿತಿ ಬೇರೆಯಾಗಿದೆ. ಅಂದರೆ ಕೇವಲ ನಾಲ್ಕುಜನ ಶಿಕ್ಷಕರನ್ನು ಮಾತ್ರ ಬೇರೆ ಇಲಾಖೆಗೆ ನಿಯೋಜನೆ ಮಾಡಿದ್ದಾಗಿ ಸಚಿವರು ಮಾಹಿತಿನೀಡಿದ್ದಾರೆ. ಒಂದೆಡೆ ಸರ್ಮೋಚ್ಚನ್ಯಾಯಾಲಯದ ಆದೇಶವನ್ನು ಉಲ್ಲಂಗಿಸಿ ನಿಯೋಜನೆ ಮಾಡಿದ್ದು ಅದರಂತೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಮಾಹಿತಿ ನೀಡುವ ಮೂಲಕ ದಿಕ್ಕು ತಪ್ಪಿಸುವ ಕೆಲಸವನ್ನು ಕೊಪ್ಪಳದ ಡಿಡಿಪಿಐ ಶ್ಯಾಮಸುಂದರ ಅವರು ಮಾಡುತ್ತಿದ್ದಾರೆ. ಈ ಕೂಡಲೇ ಶ್ಯಾಮಸುಂದರ ಅವರನ್ನು ಅಮಾನತ್ತು ಮಾಡಬೇಕು. ಹಾಗೂ ನಿಯೋಜನೆ ಗೊಂಡಂತಹ ೧೨ ಜನ ಶಿಕ್ಷಕರನ್ನು ಮಾತೃ ಇಲಾಖೆಗೆ ಕಳುಹಿಸಿಕೊಡಬೇಕು.  ಎಂದು ಒತ್ತಾಯಿಸಿ ಕನಸೇ ಸಂಘಟನೆ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿತು.
Please follow and like us:
error