ವಿಚಾರ ಸಂಕೀರಣದಲ್ಲಿ ಜಾಕೀರ ಹುಸೇನ್ ಕುಕನೂರ ಜಿಲ್ಲಾ ವ್ಯವಸ್ಥಾಪಕರು ಕೆಎಂಡಿಸಿ ಕೊಪ್ಪಳ ಇವರು ಮಾತನಾಡಿ ಸಾಚಾರ್ ವರದಿಯ ಅನುಕೂಲಕತೆಗಳ ಬಗ್ಗೆ ವಿವರಣೆ ನೀಡಿದರು. ರಾಹೇ ತಸ್ಕೀನ್ ಪತ್ರಿಕೆಯ ಸಂಪಾದಕರಾದ ಸೈಯದ್ ಗೌಸ್ ಪಾಶಾ ಮಾತನಾಡಿ ಮುಸ್ಲಿಂರು ಈ ನಿಟ್ಟಿನಲ್ಲಿ ಹೋರಾಟ ಮಾಡವುದು ಅನಿವಾರ್ಯ ಎಂದು ಕರೆ ನೀಡಿದರು. ಹಾಫೀಜ್ ಮುಸ್ತಪಾ ಕಮಾಲ್ ರವರು ಸಮುದಾಯದ ಸ್ಥಿತಿಗತಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿ ಸಂಘಟಿತರಾಗಲು ಕರೆನೀಡಿದರು. ಈ ವಿಚಾರ ಸಂಕೀರಣವನ್ನು ಸಂಘಟಿಸಿದ ಸೇವಾ ಸಂಸ್ಥೆ ಕೊಪ್ಪಳ ಹಾಗೂ ದೇವ್ಸ್ ಸಂಸ್ಥೆ ಕೊಪ್ಪಳ ಪರವಾಗಿ ರಾಜಾಬಕ್ಷಿ ಎಚ್.ವಿಯವರು ಪ್ರಧಾನಿಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ಹಾಫೀಜ್ ನಜೀರ್ ಪ್ರಾರ್ಥಿಸಿದರೆ ಅಕ್ಬರ್ ಅಲಿ ಖಾದ್ರಿ ನಿರೂಪಣೆ ಮಾಡಿದರು.
Please follow and like us: