ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ – ಕೆ.ಎಂ.ಸಯ್ಯದ್
ಕೊಪ್ಪಳ : ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ. ನಮ್ಮ ಜಿಲ್ಲೆಯಲ್ಲಿ ಅದ್ಭುತವಾದ ಪ್ರತಿಭೆಯುಳ್ಳ ನೂರಾರು ಯುವಕ್ರೀಡಾಳುಗಳಿದ್ದಾರೆ ಅವರಿಗೆ ಸೂಕ್ತವಾದ ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವಿದೆ. ನಮ್ಮ ಜಿಲ್ಲೆಯ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಮೆರೆಯುವಂತಾಗಲಿ. ಅದಕ್ಕೆ ಬೇಕಾಗುವ ಸಹಾಯ ಮತ್ತು ಸಹಕಾರವನ್ನು ಸೈಯದ್ ಪೌಂಡೇಷನ್ ವತಿಯಿಂದ ನೀಡಲಾಗುವುದು ಎಂದು ಉದ್ಯಮಿ, ಸಯ್ಯದ್ ಪೌಂಡೇಷನ್ ನ ಅಧ್ಯಕ್ಷರಾದ ಕೆ.ಎಂ.ಸಯ್ಯದ ಹೇಳಿದರು. ಅವರು ನಗರದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಆಟದ ಮೈದಾನದಲ್ಲಿ ನಡೆದ ಶ್ರೀಮತಿ ರೇಣುಕಮ್ಮ ಬಸಪ್ಪ ದಿವಟರ್ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಕಾಲೇಜು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕ ಮಟ್ಟದ ಕ್ರೀಡೆಗಳ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಇದಕ್ಕೂ ಮೊದಲು ಮಾತನಾಡಿದ ಪ್ರಾಚಾರ್‍ಯರಾದ ಅಲ್ಲಮಪ್ರಭು ಬೆಟ್ಟದೂರರು ಕ್ರೀಡಾಪಟುಗಳಿಗೆ ಶ್ರದ್ಧೆ ಅಗತ್ಯ. ಸತತ ಪರಿಶ್ರಮದಿಂದ ಯಾವುದೂ ಅಸಾಧ್ಯವಲ್ಲ . ಸೋಲು ಗೆಲುವನ್ನು ಸಮಾನ ಚಿತ್ತದಿಂದ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆಯ ಮೇಲೆ ಶ್ರೀಮತಿ ರೇಣುಕಮ್ಮ ಬಸಪ್ಪ ದಿವಟರ್ ಸಂಸ್ಥೆಯ ವೈಜನಾಥ ಪಾಟೀಲ್, ಮಂಜುನಾಥ ದಿವಟರ್ ಹಾಗೂ ಶಿವಣ್ಣ ಮೂಲಿಮನಿ, ಎಸ್.ಎಂ.ಪಾಟೀಲ್ , ಮಲ್ಲಣ್ಣ ಬತ್ತಿ ಉಪಸ್ಥಿತರಿದ್ದರು. ಹಲವಾರು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ವಾಗತವನ್ನು ಉಪನ್ಯಾಸಕರಾದ ರಾಚಪ್ಪ ಮಾಡಿದರೆ ಕಾರ್‍ಯಕ್ರಮದ ನಿರೂಪಣೆಯನ್ನು ಖಾಜಾವಲಿ ನಡೆಸಿಕೊಟ್ಟರು. ಪ್ರಾರ್ಥನಾಗೀತೆಯನ್ನು ತಿಮ್ಮನಗೌಡರ ಮಾಡಿದರು.

Leave a Reply