ಬೈರಾಪೂರ ಗ್ರಾಮ ವನಮಹೋತ್ಸವ ಕಾರ್ಯಕ್ರಮ.

ಕೊಪ್ಪಳ : ಕೊಪ್ಪಳ ತಾಲೂಕಿನ ಬೈರಾಪೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀರಾಮ್ ದೇವಸ್ಥಾನ ಟ್ರಸ್ಟ್ (ರಿ), ಶ್ರೀ ರಾಧಾಕೃಷ್ಣನ್ ಗ್ರಾಮೀಣ ಅಭಿವೃದ್ದಿ ಹಾಗೂ ಕಲ್ಯಾಣ ಸಂಸ್ಥೆಯಡಿ, ರೋಟರಿ ಕ್ಲಬ್ ಕೊಪ್ಪಳ, ರೋಟ್ರ್ಯಾಕ್ಟ್ ಕ್ಲಬ್ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಆರ್ಶಿವಚನ ನಿಡಿದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಚೈತ್ಯಾನಂದ ಸ್ವಾಮಿಜಿ ಮತನಾಡುತ್ತಾ ಕುಟುಂಬದಲ್ಲಿ ಮಕ್ಕಳು ಕಡೆಮೆ ಆದಂತೆ ಪಕೃತಿಯಲ್ಲಿ ಗಿಡಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತು ಪರಿಸರ ರಕ್ಷಣಗೆ ಎಲ್ಲರೂ ಕೈಜೊಡಿಸಬೇಕೆಂದು ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮೊಹನ ಭಟ್ಟ ಚಿಕ್ಕಭಟ್ಟ ಜೋಷಿಯವರು ಗಿಡಗಳ ಮಹತ್ವದ ಹಿನ್ನಲೆಯನ್ನು ಮತ್ತು ಇಂದಿನ ದಿನಮಾನಗಳಲ್ಲಿ  ನಮ್ಮೆಲರಿಗೂ ಗಿಡಮರಗಳು ಬೇಕೆ ಬೇಕು ಮತ್ತು ಅದರ ವಾತವರಣದಲ್ಲಿ ನಾವು ಬಾಳಕೆ ಎಂದು ಮಾತನಾಡಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್ ಕೊಪ್ಪಳ ಮಾಜಿ ಅಧ್ಯಕ್ಷರು ಮತ್ತು ಖ್ಯಾತ ವೈದ್ಯರಾದ ಡಾ.ಕೆ.ಜಿ ಕುಲಕರ್ಣಿ ಯವರು ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ  ಬಹಳ ಮಹತ್ವದ್ದು ಎಂದು ಹೇಳಿದರು.
    ರೋಟರಿ ಕ್ಲಬ್ ನೂತನ ಅಧ್ಯಕ್ಷರಾದ ಚಂದ್ರುಶೇಖರಗೌಡ ಪಾಟೀಲ ಹಲಗೇರಿ ಮಾತನಾಡುತ್ತಾ ಮಕ್ಕಳನ್ನು ಪೋಷಣೆ ಮಾಡುವಂತೆ ನಾವು ಗಿಡ ಮರಗಳನ್ನು ಪೋಷಣೆ ಮಾಡಬೇಕು. ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಮಮತಾ ಕುದರಿಮೋತಿ, ಗ್ರಾ.ಪಂ ಸದಸ್ಯರಾದ ಪರಸಪ್ಪ ಮೇಟಿ, ನಿಂಗಪ್ಪ ಮೇಟಿ, ರೋಟ್ರ್ಯಾಕ್ಸ್ ಕ್ಲಬ್ ಕೊಪಪ ಅಧ್ಯಕ್ಷರಾದ ನಾಗರಾಜ ಪಾಟೀಲ, ರೋಟ್ರ್ಯಾಕ್ಸ್ ಕ್ಲಬ್ ಸರ್ವ ಸದಸ್ಯರು ಮತ್ತು ರೋಟರಿ ಕ್ಲಬ್ ನ ಸರ್ವ ಸದಸ್ಯರು ಗ್ರಾಮದ ಯುವಕರು, ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment