ದಲಿತರಿಗೆ ಭೂಮಿ ಹಂಚುವ ಘೋಷಣೆಯ ಜಾರಿಗೆ ಒತ್ತಾಯ

ದಲಿತರಿಗೆ ಭೂಮಿ ಹಂಚುವ ಘೋಷಣೆಯನ್ನು ಜಾರಿಗೆ ಒತ್ತಾಯಿಸಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯಿಂದ ಪ್ರತಿಭಟನೆ ಮೆರವಣಿಗೆ 
ಕೊಪ್ಪಳ :-  ಡಾ|| ಬಾಬಾ ಸಾಹೇಬ ಅಂಬೇಡ್ಕರ್‌ರವರ  ಜನ್ಮ ದಿನದ ಶತಮಾನತ್ಸೋವದಿನದಂದು  ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜ್ಯದ ಒಟ್ಟು ಹೆಚ್ಚುವರಿ ಭೂಮಿಯಲ್ಲಿ ಶೇ೭೫ ರಷ್ಟು ಭೂಮಿಯನ್ನು  ಜಾರಿಗೆ ತನ್ನಿ ಮತ್ತು ಡಾ|| ಬಾಬಾ ಸಾಹೇಬ ಅಂಬೇಡ್ಕರ್‌ರವರ ಜಯಂತಿಯನ್ನು ಅರ್ಥಪೂರ್ಣವಾಗಿ  ಆಚರಿಸಲು ಒತ್ತಾಯಿಸಿ  ಹಾಗೂ ವಿವಿಧ ಭೂಮಿಯ ಹಕ್ಕೊತ್ತಾಯಕ್ಕಾಗಿ  ವೇದಿಕೆ ಪ್ರತಿಭಟನೆ ಮೆರವಣಿಗೆ ನಡೆಸಿತು ಈ ಸಂದರ್ಭದಲ್ಲಿ  ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕರಾದ  ಹನುಮಂತಪ್ಪ  ಮ್ಯಾಗಳಮನಿ,  ಜಿಲ್ಲಾ ಸಂಘಟನಾ ಸಂಚಾಲಕರಾದ ಮೈಲ್ಲಪ್ಪ ಬಿಸರಳ್ಳಿ, ಹಾಗೂ ತಾಲೂಕ ಸಂಚಾಲಕರಾದ ಮಲ್ಲಿಕಾರ್ಜುನ ಪೂಜಾರ,  ಹೇಮರಾಜ ವಿರಾಪೂರ, ಮಹಿಳಾ ಘಟಕದ ಸಂಚಾಲಕರಾದ ಕಮಲಾಕ್ಷಿ ದೊಡ್ಡಮನಿ, ದುರಗವ್ವ ಹನಕುಂಟಿ,  ಹಾಗೂ  ಪ್ರಗತಿಪರ ಸಂಘನೆಗಳ ಮುಖಂಡರಾದ ಬಸವರಾಜ ಸಿಲವಂತರ, ಎಸ್.ಎ.ಗಫಾರ್, ಶಿವಾನಂದ ಹೊದ್ಲೂರ, ದಲಿತ ಸಂಘಟನೆಗಳ ಮುಖಂಡರಾದ ಗಾಳೇಪ್ಪ ಪೂಜಾರ,  ಪ್ರಭುರಾಜ  ಬೋಚನಹಳ್ಳಿ, ಪ್ರಕಾಶ ಪೂಜಾರ, ರಮೇಶ ಓಜನಹಳ್ಳಿ,  ಲಕ್ಷ್ಮಣ ಮಾದಿನೂರ, ಡಾ. ಜ್ಞಾನಸುಂದರ, ದುರಗಪ್ಪ ಅಲ್ಲಾನಗರ, ಮರಿಯಪ್ಪ.ಎನ್.ದದೇಗಲ್, ಮರಿಯಪ್ಪ ಯತ್ನಟ್ಟಿ ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು  
Please follow and like us:
error