ರಾಜ್ಯಮಟ್ಟದ ಗ್ರಾಮೀಣ(ಪೈಕಾ)ಕ್ರೀಡಾಕೂಟ

ಕೊಪ್ಪಳ ಡಿ. ೧೪ : ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ) ಗ್ರಾಮೀಣ ಕ್ರೀಡಾಕೂಟ ಗುಂಪು-೪ರ ಕ್ರೀಡಾಕೂಟ ಡಿ. ೧೮ ರಿಂದ ೨೦ ರವರೆಗೆ ಬಾಲಕ ಮತ್ತು ಬಾಲಕೀಯರಿಗೆ ವಿಜಾಪುರ ಜಿಲ್ಲೆಯ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಲಿದೆ. 
  ಈ ಕ್ರೀಡಾಕೂಟದಲ್ಲಿ ಹಾಕಿ, ಜುಡೋ, ಕುಸ್ತಿ ಸ್ಪರ್ಧೆಯ ಕ್ರೀಡಾಪಟುಗಳು ಪಾಲ್ಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳ ಹಾಗೂ ತಂಡಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ದಿನಾಂಕ ೧೮-೧೨-೨೦೧೧ರ ಮಧ್ಯಾಹ್ನ ೧೨ ಗಂಟೆಯೊಳಗಾಗಿ ವಿಜಾಪುರ ಜಿಲ್ಲೆಯ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ತಮ್ಮ ಹೆಸರನ್ನು ವಯೋಮಿತಿ ಧೃಢೀಕರಣ ಹಾಗೂ ಗುರುತಿನಚೀಟಿಯೊಂದಿಗೆ ನೊಂದಾಯಿಸಲು ಸೂಚಿಸಲಾಗಿದೆ. 
ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆಯನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ನೀಡಲಾಗುವುದು ಮತ್ತು ದಿನಭತ್ಯೆಯನ್ನು ಈ ೩ ಕ್ರೀಡಾಕೂಟದ ಸಂಘಟಿಕರಲ್ಲಿ ಸಂದಾಯ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಸಿ.ಎ.ಪಾಟೀಲ್, ವ್ಹಾಲಿಬಾಲ್ ತರಬೇತುದಾರರು, ಹಾಗೂ ೯೪೮೬೩೩೧೪೬ ಎ.ಯತಿರಾಜು ಖೋಖೋ ತರಬೇತಿದಾರರು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ. 
Please follow and like us:
error