ಗ್ರಾಮ ಪಂಚಾಯತಿಯ ೬ ಕ್ಷೇತ್ರಗಳಿಗೆ ಉಪಚುನಾವಣೆ

ಕೊಪ್ಪಳ ಡಿ.: ಕೊಪ್ಪಳ ತಾಲೂಕಿನಲ್ಲಿ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಗ್ರಾಮ ಪಂಚಾಯತಿಯ ವಿವಿಧ ಕ್ಷೇತ್ರಗಳ ೦೬ ಸದಸ್ಯ ಸ್ಥಾನಗಳಿಗೆ  ಸಂಬಂಧಿಸಿದ ಉಪಚುನಾವಣೆಯ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೊರಡಿಸಿದ್ದಾರೆ.
  ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿ, ಕ್ಷೇತ್ರದ ಹೆಸರು ಹಾಗೂ ಸ್ಥಾನದ ಮೀಸಲಾತಿ ವಿವರ ಇಂತಿದೆ.  ಕೊಪ್ಪಳ ತಾಲೂಕು ಕವಲೂರು ಗ್ರಾಮ ಪಂಚಾಯತಿಯ ಕವಲೂರು ಕ್ಷೇತ್ರ (ಪರಿಶಿಷ್ಟ ಜಾತಿ(ಮಹಿಳೆ)), ಅಗಳಕೇರಾ ಗ್ರಾ.ಪಂ., ಅಗಳಕೇರಾ ಕ್ಷೇತ್ರ (ಸಾಮಾನ್ಯ), ಗಿಣಿಗೇರಾ ಗ್ರಾ.ಪಂ. ಬಸಾಪುರ ಕ್ಷೇತ್ರ (ಹಿಂ.ವರ್ಗ-ಅ(ಮಹಿಳೆ)), ಗಿಣಿಗೇರಾ ಕ್ಷೇತ್ರ (ಹಿಂ.ವರ್ಗ-ಅ), ಕಾತರಕಿ ಗುಡ್ಲಾನೂರ ಗ್ರಾ.ಪಂ. ಬೇಳೂರು ಕ್ಷೇತ್ರ (ಹಿಂ.ವರ್ಗ-ಬ) ಹಾಗೂ ಗುಳದಳ್ಳಿ ಗ್ರಾ.ಪಂ., ಕೆರೆಹಳ್ಳಿ ಕ್ಷೇತ್ರ (ಹಿಂ.ವರ್ಗ-ಅ) ಸೇರಿದಂತೆ ಒಟ್ಟು ೦೬ ಸದಸ್ಯ ಸ್ಥಾನಗಳಿಗಾಗಿ ಉಪಚುನಾವಣೆ ಘೋಷಿಸಲಾಗಿದೆ.  ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳನ್ನು ಸಲ್ಲಿಸಲು ಡಿ. ೨೮ ಕೊನೆಯ ದಿನಾಂಕವಾಗಿದ್ದು, ಡಿ. ೨೯ ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು, ಉಮೇದುವಾರಿಕೆ ಹಿಂಪಡೆಯಲು ಡಿ. ೩೧ ಕೊನೆಯ ದಿನವಾಗಿರುತ್ತದೆ.  ಮತದಾನ ಅವಶ್ಯವಿದ್ದರೆ ಜ. ೧೦ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಸಲಾಗುವುದು.  ಚುನಾವಣೆ ಪ್ರಕ್ರಿಯೆ ಜ. ೧೪ ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Please follow and like us:
error