ಅನಧಿಕೃತ ಬಸ್ ಪಾಸ್ ತೋರಿಸಿ ಪ್ರಯಾಣಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ

 ವಿದ್ಯಾರ್ಥಿ ರಿಯಾಯಿತಿ ಬಸ್‌ಪಾಸನ್ನು ದುರುಪಯೋಗ ಪಡೆಯುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
  ಈ.ಕ.ರ.ಸಾ.ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ವಿವಿಧ ದರ್ಜೆಯ ರಿಯಾಯತಿ ಮತ್ತು ಉಚಿತ ಬಸ್ ಪಾಸುಗಳನ್ನು ವಿತರಿಸುತ್ತಿದ್ದು, ಆದರೆ ವಿದ್ಯಾರ್ಥಿಗಳಲ್ಲದವರೂ ಸಹ ಅನಧಿಕೃತವಾಗಿ ವಿದ್ಯಾರ್ಥಿ ರಿಯಾಯತಿ ಬಸ್ ಪಾಸ್ ಪಡೆದು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿರುತ್ತದೆ.  ಅಂತಹವರ ವಿರುದ್ಧ ಈಗಾಗಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಾಗಿದೆ.  ವಿದ್ಯಾರ್ಥಿಗಳು ತಮಗೆ ವಿತರಿಸಿದ ಬಸ್ ಪಾಸುಗಳನ್ನು ಫೋಟೊ ಕಾಪಿ ಮಾಡಿ ಪ್ರಯಾಣಿಸುತ್ತಿರುವುದು ಸಹ ಬೆಳಕಿಗೆ ಬಂದಿರುತ್ತದೆ. ಸಂಸ್ಥೆಯ ವತಿಯಿಂದ ವಿತರಿಸಿದ ಬಸ್ ಪಾಸಗಳ ಮೂಲ ಪ್ರತಿಗಳನ್ನು ಹೊಂದಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಯಾವುದೇ ಕಾರಣಕ್ಕೂ ಬಸ್ ಪಾಸುಗಳ ಫೋಟೊ ಕಾಪಿ, ಛಾಯಾ ಪ್ರತಿ ಹಾಗೂ ವಿದ್ಯಾರ್ಥಿಗಳಲ್ಲದವರು ಅನಧಿಕೃತವಾಗಿ ಬಸ್ ಪಾಸ್ ಪಡೆದು ಪ್ರಯಾಣಿಸುತ್ತಿರುವುದು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳ ವಿರುದ್ಧ, ಈ ರೀತಿ ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧವು ಸಹ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೇಂದ್ರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು  ಎಚ್ಚರಿಕೆ ನೀಡಿದ್ದಾರೆ. 

Leave a Reply