ಕನ್ನಡ ಸಾಹಿತ್ಯ ಪರಿಷತ್ ಪರೀಕ್ಷೆ

ಕೊಪ್ಪಳ ಡಿ.   ಕನ್ನಡ ಸಾಹಿತ್ಯ ಪರಿಷತ್ತಿನ ೨೦೧೧-೧೨ ನೇ ಸಾಲಿನ ವಿವಿಧ ಪರೀಕ್ಷೆಗಳು ಡಿ. ೩೦ ರಿಂದ ಮೂರು ದಿನಗಳ ಕಾಲ ರಾಜ್ಯದ ೨೦ ಕೇಂದ್ರಗಳಲ್ಲಿ ನಡೆಯಲಿವೆ.
  ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಕ್ತ ಸಆಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿಸೆಂಬರ್ ೩೦, ೩೧ ಮತ್ತು ಜನವರಿ ೦೧ ರಂದು ಒಟ್ಟು ಮೂರು ದಿನಗಳ ಕಾಲ ರಾಜ್ಯದ ೨೦ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಪ್ರವೇಶ ಪತ್ರಗಳನ್ನು ಈಗಾಗಲೆ ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ.  ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮ ಇವರಲ್ಲಿ ವಿಚಾರಿಸಬಹುದಾಗಿದೆ.  ಬೇರೆ ಜಿಲ್ಲೆಯವರಿಗೆ ಪ್ರವೇಶ ಪತ್ರ ತಲುಪದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು.  ಪರೀಕ್ಷಾ ಕೇಂದ್ರದ ವಿಳಾಸವನ್ನು ದೂರವಾಣಿ ಸಂಖ್ಯೆ ೦೮೦- ೨೬೬೨೩೫೮೪ ಕ್ಕೆ ಕರೆ ಮಾಡಿ ಪಡೆಯಬಹುದಾಗಿದೆ .
Please follow and like us:
error