You are here
Home > Koppal News > ಸ್ವಾಬಿಮಾನಿ ಜೀವನಕ್ಕೆ ವೈಯಕ್ತಿಕ ಶೌಚಾಲಯ ಅತ್ಯವಶ್ಯಕ -ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಸ್ವಾಬಿಮಾನಿ ಜೀವನಕ್ಕೆ ವೈಯಕ್ತಿಕ ಶೌಚಾಲಯ ಅತ್ಯವಶ್ಯಕ -ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ,ಜ:೨೨ ಕ್ಷೇತ್ರದ ವದಗನಾಳ, ಹಂದ್ರಾಳ, ಹಣವಾಳ, ಬಿಕನಳ್ಳಿ, ಮೈನಳ್ಳಿ, ಬಿಸರಳ್ಳಿ, ಬುದಿಹಾಳ, ಡಂಬರಳ್ಳಿ, ಹಾಗೂ ಬೇಳೂರು ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹೆಚ್.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ಸುಮಾರು ಅಂದಾಜು ಮೊತ್ತ ರೂ. ೪೦ ಲಕ್ಷದ ಸಿ.ಸಿ. ರಸ್ತೆ, ಶಾಲಾ ಕೊಠಡಿ, ಅಂಗನವಾಡಿ ಕಟ್ಟಡಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಗ್ರಾಮಗಳ ವಿಕಾಸನ ಅಡಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ಸಿ.ಸಿ. ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕಗಳು, ಸಮುದಾಯ ಭವನ, ಆರೋಗ್ಯ ಕೇಂದ್ರ, ಶಾಲಾ ಕೊಠಡಿಗಳ ಕಾಮಗಾರಿಗಳು ಹಂತ ಹಂತವಾಗಿ ಪ್ರತಿಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರವೇ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ದೈನಂದಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವೆನು ಇಡೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಕೊಪ್ಪಳ ಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡುವೆನು. ಹಂದ್ರಾಳ ಮತ್ತು ಕೋಳೂರಿನಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ೩.೮೦ ಲಕ್ಷ ಅನುದಾನವನ್ನು ಮಂಜೂರುಗೊಳಿಸಲಾಗಿದೆ. ಗ್ರಾಮಗಳ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು. ಗ್ರಾಮಗಳ ನೈರ್ಮಲ್ಯಕರಣಕ್ಕೆ ಎಲ್ಲರೂ ಸಹಕರಿಸಿ ರೋಗಮುಕ್ತ ಗ್ರಾಮಗಳನ್ನಾಗಿ ಮಾಡಲು ಪ್ರತಿಯೊಬ್ಬರೂ ವೈಯಕ್ತಿಕ ಶೌಚಾಲಯ ಹೊಂದಲು ಅವಶ್ಯಕವಾಗಿದೆ. ಇದರಿಂದ ಗ್ರಾಮಗಳಲ್ಲಿ ಡೆಂಗೂ, ಮಲ್ಭೆರಿಯಾ, ಕಾಲಾರಾಗಳಂತ ರೋಗಗಳು ಉಲ್ಬಣಗೊಳ್ಳುವುದಿಲ್ಲ ಅದಕ್ಕಾಗಿ ಸ್ವಾಭಿಮಾನ ಜೀವನಕ್ಕೆ ವೈಯಕ್ತಿಕ ಶೌಚಾಲಯ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್.ಎಲ್.ಹಿರೇಗೌಡರು, ಕೇಶವರೆಡ್ಡಿ, ಮುದೇಗೌಡ್ರು ಬೇಳೂರು, ಗಾಳೆಪ್ಪ ಪೂಜಾರ, ಯಮನೂರಪ್ಪ ನಾಯಕ್, ವಿರುಪಾಕ್ಷಗೌಡ್ರು ಬಿಸರಳ್ಳಿ, ಶಿವಣ್ಣ ಹಂದ್ರಾಳ, ಶಂಕ್ರಪ್ಪ ಮೈನಳ್ಳಿ, ನಾಗಪ್ಪ ವದಗನಾಳ, ನಾರಾಯಣ ರಡ್ಡಿ, ಬಸನಗೌಡ ಡಂಬ್ರಳ್ಳಿ, ಶಿವಣ್ಣ ಬುದಿಹಾಳ, ಮುಸ್ತಫಾ ಅತ್ತಾರ, ತಾಲೂಕು ಪಂಚಾಯತಿ ಇ.ಓ.ಕೃಷ್ಣಮೂರ್ತಿ, ಕ್ಷೇತ್ರದ ಶಿಕ್ಷಣ ಅಧಿಕಾರಿಗಳಾದ ಉಮೇಶ ಪೂಜಾರ, ನಿಂಗಪ್ಪ ಯತ್ನಟ್ಟಿ, ವಕ್ತಾರ ಅಕ್ಬರಪಾಷಾ ಪಲ್ಟನ ಇನ್ನೂ ಅನೇಕ ಕಾಂಗ್ರೇಸ್ ಮುಖಂಡರು ಪಂಚಾಯತಿಯ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Leave a Reply

Top