ಜಯಾ ಫೌಡೆಂಶನ್ (ರಿ) ಕೊಪ್ಪಳ ವತಿಯಿಂದ ಆದ್ಯಾತ್ಮೀಕ ಕಾರ್ಯಗಾರ

 ೧೩.೦೫.೨೦೧೪ ರಂದು ಸಂಜೆ ೫ ಗಂಟೆಗೆಯಿಂದ ರಾತ್ರಿ ೦೮ ಗಂಟೆ ವರೆಗೆ ನಗರದ ಪಬ್ಲಿಕ್ ಗ್ರೌಂಡನಲ್ಲಿ ಜನ್ಮಾಂತರ ಖ್ಯಾತಿಯ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದ ಆದ್ಯಾತ್ಮಿಕ ಗುರು ಹಾಗೂ ಸಮ್ಮೊಹೀನಿ ತಜ್ಷರಾದ ಶ್ರೀ ರಾಮಚಂದ್ರ ಗುರೂಜಿ ಯವರಿಂದ  ಅಂತರ ಮನಸ್ಸಿನ ವಿಸ್ಮಯ ಶಕ್ತಿಗಳು ಎಂಬ ಆದ್ಯಾತ್ಮಿಕ ಉಚಿತ ಕಾರ್ಯಕ್ರಮ ಕೊಪ್ಪಳದಲ್ಲಿ ಏರ್ಪಡಿಸಲಾಗಿದೆ.  ಈ ಔದ್ಯೋಗೀಕ ಜಗತ್ತಿನಲ್ಲಿ ಜನ ಸಾಮನ್ಯರು ಅನೇಕ ರೀತಿಯ ಮಾನಸಿಕ  ಒತ್ತಡ ಮನೋದೈಹಿಕ ದೌರ್ಬಲ್ಯ ಅನುಭವಿಸುತ್ತಿದ್ದು ಈ ಒಂದು ಉತ್ತಡಗಳಿಂದ ಜನರ ಜೀವನದಲ್ಲಿ ಸ್ವಸ್ಥ ದೇಹ, ಸ್ವಸ್ತ ಮನಸ್ಸು ಚೈತನ್ಯ ತುಂಬಿರುವ ಜೀವನ ನಡೆಸಲು ಸರಳ ಮಾರ್ಗಗಳ ಮೂಲಕ ಜನರಲ್ಲಿ ಬದಲಾವಣೆ ಮೂಡಿಸುವ ಖ್ಯಾತ ಸಮ್ಮೊಹೀನಿ ತಜ್ಷರಾದ ಶ್ರೀ ರಾಮಚಂದ್ರ ಗುರೂಜಿ ಯವರಿಂದ ಜೀವನದ ಗೆಲುವಿಗಾಗಿ ಈ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಡಲಾಗುತ್ತದೆ  ಸಮಸ್ತ ಕೊಪ್ಪಳ ಜನತೆ ಈ ಒಂದು ಕರ್ಯಕ್ರಮಕ್ಕೆ ಭಾಗವಹಿಸಿ ಇದರ ಸದುಪಯೋಗವನ್ನು  ಪಡೆದುಕೊಳ್ಳಬೇಕು. 
ಹೆಚ್ಚಿನ ಮಾಹಿತಿಗಾಗಿ ೭೦೨೬೮೬೩೧೪೧, ೯೦೦೮೭೧೬೨೨೨
Please follow and like us:
error