ಕು.ಸೋನಿಯಾ ಮೂಥಾ ಪ್ರಥಮ ರ‍್ಯಾಂಕ್

            
ಕೊಪ್ಪಳ: ನಗರದ ಶ್ರೀಮತಿ ಶಾರದಮ್ಮ ವ್ಹಿ. ಕೊತಬಾಳ ಬಿ.ಬಿ.ಎಂ, ಬಿ.ಕಾಂ ಹಾಗೂ ಬಿ.ಸಿ.ಎ ಕಾಲೇಜಿಗೆ ಈ ವರ್ಷ ಪ್ರಥಮ ರ‍್ಯಾಂಕ್ ಲಭಿಸಿರುತ್ತದೆ.  ಬಿ.ಸಿ.ಎ ವಿಭಾಗದಲ್ಲಿ   ಓದುತ್ತಿದ್ದ ಕು.ಸೋನಿಯಾ ಮೂಥಾ ಇವರು  ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇದರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳ ಬಿ.ಸಿ.ಎ ವಿದ್ಯಾರ್ಥಿಗಳಿಗಿಂತ ಅತಿ ಹೆಚ್ಚು  ಅಂಕಗಳಿಸಿ ಅಂದರೆ ೩೩೫೦ ಅಂಕಗಳಿಗೆ ೨೯೦೬ ಅಂಕಗಳನ್ನು ಪಡೆದು ಶೇಕಡಾ ೮೬.೭೫ ಪ್ರತಿಶತ ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.      
 ಕು.ಸೋನಿಯಾ ಮೂಥಾ ೨೦೧೪ನೇ ಸಾಲಿನ ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ  ಬಿ.ಸಿ.ಎ ಪರೀಕ್ಷೆ ಬರೆದಿದ್ದಳು. ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್  ತಂದು ಕೊಟ್ಟ ಶ್ರೇಯಸ್ಸು ಶ್ರೀಮತಿ ಶಾರದಮ್ಮ ವ್ಹಿ. ಕೊತಬಾಳ  ಕಾಲೇಜಿಗೆ ಸಲ್ಲುತ್ತದೆ.
ಕು.ಸೋನಿಯಾ ಮೂಥಾ  ಇವರ ಈ ಸಾಧನೆಗೆ ಪೂಜ್ಯ ಶ್ರೀ ಮ.ನಿ.ಪ್ಪ.ಸ್ವ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವಾದಿಸಿದ್ದಾರೆ. ಜೊತೆಗೆ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾಂiiದರ್ಶಿಗಳಾದ ಶ್ರೀ ಎಸ್.ಮಲ್ಲಿಕಾರ್ಜುನ, ಕಾಲೇಜಿನ ಅಧ್ಯಕ್ಷರಾದ ಶ್ರೀ ಸಂಜಯ ಕೊತಬಾಳ, ಕಾಲೇಜಿನ ಪ್ರಾಚಾರ‍್ಯರು ಸಿ.ವಿ ರಾಜರಾಜೇಶ್ವರ ರಾವ್  ಹಾಗೂ ಸಿಬ್ಬಂಧಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply