ಹುಲಗಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆ, ವಿಷಾಧ

ಕೊಪ್ಪಳ, ಸೆ. ೨೮: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹುಲಗಿ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕೋರಿ ಜಿಲ್ಲೆಯ ಕಲಾವಿದರು ಅರ್ಜಿ ಸಲ್ಲಿಸಿದ್ದರೂ ಶ್ರೀ ಹುಲಿಗೆಮ್ಮ ದೇವಸ್ಥಾನ ಮಂಡಳಿಯು ಸ್ಥಳೀಯ ಕಲಾವಿದರನ್ನು ಕಡೆಗಣಿಸಿ ಬೇರೆ ಜಿಲ್ಲೆಯ ಕಲಾವಿದರಿಗೆ ಮಣೆ ಹಾಕಿದೆ ಎಂದು ಕಿನ್ನಾಳ ಶ್ರೀ ಶಾರದಾ ಸಂಗೀತ ಶಾಲೆಯ ಶಿಕ್ಷಕ ಲಚ್ಚಣ್ಣ ಹೊರಪೇಟಿ ವಿಷಾಧಿಸಿದ್ದಾರೆ.
ಅವರೂ ಈ ಕುರಿತು ಪ್ರಕಟಣೆ ನೀಡಿ, ಹುಲಗಿ ದಸರಾ ಉತ್ಸವದಲ್ಲಿ ತಾಲೂಕಿನ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ನೀಡದೆ ವಂಚಿಸಲಾಗಿದೆ. ಜಿಲ್ಲೆಯಲ್ಲಿ ಕಲಾವಿದರಿದ್ದು, ಹೊರ ಜಿಲ್ಲೆಯ ಕಲಾವಿದರಿಗೆ ಪ್ರಾಶಸ್ತ್ಯ ನೀಡಿರುವುದು ಸರಿಯಾದ ಕ್ರಮವಲ್ಲ ಹಾಗೂ ಈ ರೀತಿ ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿದ್ದಾರಲ್ಲದೇ ಇದೇ ರೀತಿ ನಿರ್ಲಕ್ಷಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಕಲಾವಿದರು ಬೀದಿಗಿಳಿದು ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
Please follow and like us:
error