ಕುದ್ರಿಮೋತಿಯಲ್ಲಿ ಯಲಬುರ್ಗಾ ತಾಲೂಕ ೧೦ನೇಯ ಕನ್ನಡ ಸಾಹಿತ್ಯ ಸಮ್ಮೇಳನ

 ಯಲಬುರ್ಗಾ : ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಡಿ.ಪಾಂಡುರಂಗ ವೇದಿಕೆಯಲ್ಲಿ ನಡೆಯುವ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾನಿಧ್ಯವನ್ನು ಕುದರಿಮೋತಿಯ ವಿಜಯ ಮಹಾಂತ ಮಹಾಸ್ವಾಮಿಗಳು  ವಹಿಸಿಕೊಳ್ಳಲಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿ ಉದ್ಘಾಟಿಸಲಿದ್ದಾರೆ, ಸಮ್ಮೇಳನಾಧ್ಯಕ್ಷ ಈರಪ್ಪ ಕಂಬಳಿ ಅಧ್ಯಕ್ಷತೆಯ ಭಾಷಣ ಮಾಡಲಿದ್ದಾರೆ. ಸಂಸದ ಸಂಗಣ್ಣ ಕರಡಿ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ, ವಿಪ ಸದಸ್ಯ ಹಾಲಪ್ಪ ಆಚಾರ ಸಮ್ಮೇಳನಾಧ್ಯಕ್ಷರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸೇರಿದಂತೆ ತಾಲೂಕಿನ ಹಿರಿಯ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.

Leave a Reply