ಕೊಪ್ಪಳದಲ್ಲಿ ಮಳೆ ಮನೆಗಳಿಗೆ ನುಗ್ಗಿದ ನೀರು : ನಗರಸಭೆಯಿಂದ ಪರಿಶೀಲನೆ

ನಗರದಲ್ಲಿ ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಮಳೆನೀರು ಮನೆಗಳಲ್ಲಿ ನುಗ್ಗಿ ಜನಜೀವನ ಅಸ್ತವ್ಯಸ್ತ ಹೊಂಡಂತಾಗಿದೆ. ಚರಂಡಿಗಳು ತುಂಬಿ ನೀರು ಮನೆಗಳಿಗೆ ನುಗ್ಗಿರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ನಗರಸಭೆಯ ಅಧಿಕಾರಿ ಮತ್ತು ಜನಪ್ರತಿನಿಧಿಗಳ ತಂಡ ಮನೆಗಳಿಗೆ ನೀರು ನುಗ್ಗಿರುವ ಪ್ರದೇಶಗಳಿಗೆ ಭೇಟಿಮಾಡಿ ಪರಿಶೀಲನೆ ನಡೆಸಿದರು.

   ನಗರದ ಕನಕಗಿರಿ ಓಣಿ, ಗೌರಿಅಂಗಳ ಓಣಿಗಳಲ್ಲಿ ವಾಸಿಸುವ ಜನರ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಸ್ಥಳಗಳಿಗೆ ನಗರಸಭೆಯ ಉಪಾಧ್ಯಕ್ಷ ಅಮಜದ್ ಪಟೇಲ್, ಪೌರಾಯುಕ್ತ ರಮೇಶ ಪಟ್ಟೇದ್ ನೇತೃತ್ವದ ನಗರಸಭೆಯ ತಂಡ ಸ್ಥಳಕ್ಕೆ ಭೇಟಿಮಾಡಿ ಜಿಟಿ ಜಿಟಿ ಮಳೆ ಲೆಕ್ಕಿಸದೆ ಮಳೆಯಲ್ಲಿಯೇ ಪರಿಶೀಲನೆ ನಡೆಸಿ ಮನೆಗಳಿಗೆ ನುಗ್ಗಿರುವ ನೀರು ಚರಂಡಿ ಮೂಲಕ ಕಳಿಸುವ ಕಾರ್ಯ ಹಾಗೂ ಸ್ವಚ್ಛಗೊಳಿಸುವ ಕಾರ್ಯ ನಡೆಸಿ ಜನರಿಗೆ ಧೈರ್ಯ ತುಂಬಿಸಿದರು.  ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮ ಸಹಾಯಕ್ಕೆ ನಗರಸಭೆ ಸಿದ್ದವಿದ್ದು ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಮಜದ್ ಪಟೇಲ್, ವೀರಣ್ಣ ಸಂಡೂರ್ ಮತ್ತು ಪೌರಾಯುಕ್ತ ರಮೇಶ ಪಟ್ಟೇದ್ ಜನತೆಗೆ ಭರವಸೆ ನೀಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆಮುಂದಾದರೂ.
Please follow and like us:
error