fbpx

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ)ರಾಜ್ಯ ಸಂಘಟನಾಸ ಮಿತಿಯಿಂದ ಪ್ರತಿಭಟನಾ ಧರಣಿ.

ಕೊಪ್ಪಳ-21- ಕರ್ನಾಟಕ ರಾಜ್ಯ ದಲಿತ  ಸಂಘರ್ಷ ಸಮಿತಿ (ರಿ) ರಾಜ್ಯ ಸಂಘಟನಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ದಲಿತರ ಹಕ್ಕುಗಳ ಅನುಷ್ಠಾನಕ್ಕಾಗಿ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣ ಹಮ್ಮಕೊಳ್ಳಲಾಗಿತು. ಮತ್ತೊಂದು ಸ್ವಾತಂತ್ರ್ಯದಿನ ಬಂದಿದೆ. ೧೯೪೭ ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಬಾಬಾಸಾಹೇಬ ಅಂಬೇಡ್ಕರ್ ದೂರದೃಷ್ಟಿಯನ್ನು ಅಡಿಪಾಯವಾಗಿ ಹೊಂದಿರುವ ಸಂವಿಧಾನವನ್ನು ನಮಗೆ ರೂಪಿಸಿಕೊಂಡೆವು. ರಾಜಕೀಯ ಸ್ವಾತಂತ್ರ್ಯವೆನ್ನೋ ಈ ಆರುವರೆ ದಶ
ಬೇಡಿಕೆ : ೧. ಮಾಡಿರುವ ಕಾಯ್ದೆಗೆ ನಿಯಮಗಳನ್ನು ರೂಪಿಸಬೇಕು. ದಲಿತರಾಗಿ ಯೋಜನೆ ರೂಪಿಸುವುದು, ಅವರಿಗಾಗಿ ಆರ್ಥಿಕ ಸಂಪನ್ಮೂಲ ಹಂಚಿಕೆ ಮಾಡುವುದು ಹಾಗೂ ಬಳಸುವುದಕ್ಕೆ ಸಂಬಂಧಿಸಿ ಸರ್ಕಾರವು ೨೭ ಡಿಸೆಂಬರ ೨೦೧೩ ರಲ್ಲೇ ಬೆಳಗಾವಿ ಅಧಿವೇಶನದಲ್ಲಿ ಎಸ್.ಸಿಎಸ್.ಟಿ ಕಾಯ್ದೆ ಬಿಲ್ ಮಂಡಿಸಿ, ಅಧಿನಿಯಮ ಜಾರಿ ಮಾಡಿತು. ಕಾಯ್ದೆಯನ್ನು ಮಾಡಿತು. ಆದರೆ ಯಾವುದೇ ಕಾಯ್ದೆಯು ಜಾರಿಯಾಗಬೇಕು ಎಂದರೆ, ಅದನ್ನು ಜಾರಿ ಮಾಡುವ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುವ ನಿಯಮಗಳು ರಚನೆ ಯಾಗಬೇಕು. ೨೦೧೩ರಲ್ಲಿ ಆಗಿರುವ ಕಾಯ್ದೆಗೆ ಇದುವರೆಗೆ ನಿಯಮಗಳನ್ನು ರಚಿಸಲಾಗಿಲ್ಲ.
ಈ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕೂಡಲೇ ನಿಯಮಗಳನ್ನು ರಚಿಸಬೇಕೆಂದು ಒತ್ತಾಯಿಸುತ್ತೇವೆ.
೨. ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆಯ ಬಜೆಟ್ ಹಣವನ್ನು ೩೩ ಇಲಾಖೆಗಳಿಗೆ ಹಂಚಿಕೆ ಮಾಡುವುದರಿಂದ ಬಹುತೇಕ ಇಲಾಖೆಗಳಿಂದ ಸರಿಯಾಗಿ ಬಳಕೆಯಾಗದೆ ವರ್ಷದ ಕೊನೆಯಲ್ಲಿ ವಾಪಸಾಗುವದರಿಂದ ಸರಿಯಾಗಿ ಯೋಜನೆ ಜಾರಿಗೊಳಿಸಲು ಏಕಗವಾಕ್ಷಿ ಯೋಜನೆ ಮಾಡಬೇಕು.
೩. ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಮಾದಿಗರ ಮನೆಗಳಿಗೆ ನುಗ್ಗಿ ಹಲ್ಲೆ, ದೌರ್ಜನ್ಯ ನಡೆಸಲಾಗಿದೆ. ಮತ್ತು ಕ್ಷೌರ ಮಾಡುವ ವಿಚಾರದಲ್ಲಿ ಮಾದಿಗರ ಮೇಲೆ ದೌರ್ಜನ್ಯ ನಡೆದ ನಂತರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಆಗ ಪೋಲೀಸ್ ಬಂದೋ ಬಸ್ತ ನೀಡಲಾಗಿತು. ಮಾದಿಗರ ರಕ್ಷಣೆಗೆ ಪೋಲೀಸ್ ವಾಹನಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದನ್ನು ನೋಡಿ ದೌರ್ಜನ್ಯಕೋರರು ಮತ್ತಷ್ಟು ಕೆರಳಿದರು. ಅಕ್ರಮಕೂಟ ಕಟ್ಟಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಮಾದಿಗರ ಕೇರಿಗೆ ನುಗ್ಗಿ ಪಶುಗಳಂತೆ ವರ್ತಿಸಿ ಮನೆಗಳಿಗೆ ಬೆಂಕಿ ಹಚ್ಚಿ ಸಿಕ್ಕಸಿಕ್ಕವರನ್ನು ಮನಕ್ಕೆ ಬಂದತೆ ಹೊಡೆದರು. ಆಗ ಅಲ್ಲಿಗೆ ಬಂದ ಪೋಸರನ್ನು ಸಹ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದರು. ಈ ಸಂಬಂಧ ಪೋಲಿಸರೇ ೯೬ ಜನರ ಮೇಲೆ ದೂರು ದಾಖಲಿಸಿಕೊಂಡರು. ಈ ಘಟನೆಯಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದ್ದ ವೀರೇಶ ಗುಡಿಸಲ ಈತನು ಜುಲೈ ೧೦ ರಂದು ಕೊಪ್ಪಳ ನ್ಯಾಯಲಯಕ್ಕೆ ಬಂದು ಸಾಕ್ಷಿ ಹೇಳಬೇಕಿತ್ತು. ಆದರೆ ವಾಸ್ತವವಾಗಿ ಆತ ಓದಲು ಮಾತ್ರ ತಿಳಿದಿದ್ದ. ಬರೆಯುವುದನ್ನು ಕಲಿತಿರಲಿಲ್ಲ. ಸಾಕ್ಷಿ ನಿರ್ಭಯವಾಗಿ ಸತ್ಯ ಹೇಳುತ್ತಾನೆ ಎಂದು ಮನಗಂಡು ಆತನನ್ನು ಅಪಹರಿಸಿ, ಆತನ ಜೇಬಿನಲ್ಲಿ ಚೀಟಿಯೊಂದನ್ನು ಬರೆದಿಟ್ಟು ವ್ಯವಸ್ಥಿತವಾಗಿ ಕೊಲೆ ಮಾಡಿ ರೈಲ್ವೆ ಹಳ್ಳಿಗಳ ಮೇಲೆ ಬಿಸಾಕಿ ಹೋಗಲಾಗಿದೆ. ಈ ಪ್ರಕರಣವನ್ನು ಸಿ.ಐ.ಡಿ. ತನಿಖೆಗೆ ಕೂಡಲೇ ಒಪ್ಪಿಸಲೇಬೇಕು.
೪. ಗಂಗಾವತಿ ತಾಲೂಕಿನ ಹೊಸಗುಡ್ಡದ ದಲಿತ ಮಹಿಳೆ ಹನುಮವ್ವಳನ್ನು ಅಪಹರಿಸಿ ವಿವಸ್ತ್ರಗೊಳಿಸಿ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಕೊಂದು ಹಾಕಿ ಶವವನ್ನು ಸುಟ್ಟು ಹಾಕಿ ಬೂದಿ ಮಾಡಿದ್ದಾರೆ. ಈ ಪ್ರಕರಣವನ್ನು ಕೂಡಲೇ ಸಿ.ಐ.ಡಿ. ತನಿಖೆಗೆ ಒಪ್ಪಿಸಬೇಕು.
೫. ದೌರ್ಜನ್ಯ ತಡೆಗೆ ಕಠಿಣ ಕ್ರಮ: ದಲಿತರ ಮೇಲಿನ ದೌeನ್ಯಗಳು ಮುಂದುವರೆದಿವೆ. ಗ್ರಾಮೀಣ ಭಾಗದಲ್ಲಿ ಸ್ವಾಭಿಮಾನ ಜೀವನ ನಡೆಸಲು ಬಯಸುವ ಪ.ಜಾತಿ/ಪ.ಪಂಗಡ ದವರ ಮೇಲೆ ಹಲ್ಲೆ, ದಬ್ಬಾಳಿಕೆ, ಕೊಲೆ, ಸಾಮಾಜಿಕ ಪ್ರಕರಣಗಳು ಸಂಭವಿಸುತ್ತಿವೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಸಂತೆಮರನಹಳ್ಳಿಯಲ್ಲಿ ಇಬ್ಬರು ದಲಿತರ ಭೀಕರ ಕೊಲೆ ನಡೆಯಿತು. ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ದಲಿತರ ಕೊಲೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.
೬. ಬಾಗಲಕೋಟಿ ಜಿಲ್ಲೆ ಮುದೋಳ ತಾಲೂಕಿನ ಮಿರ್ಚಿ ಗ್ರಾಮದಲ್ಲಿ ಮರ್ಯಾದೆ ಹತ್ಯೆಗೆ ಒಳಗಾದ ದಲಿತ ಯುವಕ ಅನಿಲ್ ಮೇತ್ರಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು.
೭. ಅಂತರ್ಜಾತಿ ವಿವಾಹವಾದವರ ಮೇಲೆ ಕೂಡ ದೌರ್ಜನ್ಯಗಳು ನಡೆದಿವೆ. ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂತರ್‌ಜಾತಿ ವಿವಾಹವಾದವರನ್ನು ಕೊಲೆ ಮಾಡಿದ ಪ್ರಕರಣ ಸಂಭವಿಸಿದೆ. ಇಂಥ ಎಲ್ಲಾ ದೌರ್ಜನ್ಯಗಳ ಬಗ್ಗೆ ಪ್ರಬಲ ಇಚ್ಛಾಶಕ್ತಿ ಯನ್ನು ತೋರಿ, ನೊಂದವರಿಗೆ ಸಾಂತ್ವನ ಹೇಳಿ, ಅವರಿಗೆ ನ್ಯಾಯ ದೊರಕಿಸಿ ಕೊಟ್ಟು ದೌರ್ಜನ್ಯಕೋರರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಪಡಿಸುತ್ತೇವೆ.
೮.  ೧೦-೧೫ ವರ್ಷಗಳಿಂದ ದಲಿತರಿಗೆ ಸಿಗಬೇಕಾದ ಸರ್ಕಾರಿ ಹುದ್ದೆಗಳು ಸರಿಯಾಗಿ ಭರ್ತಿಯಾಗದೇ ಉಳಿದಿರುವ ಖಾಲಿ ಬ್ಯಾಕ್‌ಲಾಗ್ ಹುದ್ದೆಗಳು ಕೂಡಲೇ ಭರ್ತಿ ಮಾಡಬೇಕು.
೯. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು.
೧೦. ಕೇಂದ್ರ ಸರ್ಕಾರದಲ್ಲಿ ಗ್ಯಾಸ ಏಜನ್ಸಿ ಮತ್ತು ಪೆಟ್ರೋಲ್ ಬಂಕ್ ಲೈಸನ್ಸ ವಿತರಣೆಯಲ್ಲಿ ಮೀಸಲಾತಿ ನೀಡಿರುವ ಹಾಗೆ ಅಬಕಾರಿ ಇಲಾಖೆ ಲೈಸೆನ್ಸನಲ್ಲಿಯೂ ಮೀಸಲಾತಿ ನೀಡಬೇಕು.
೧೧. ಎಸ್.ಸಿ.ಪಿ.ಟಿ.ಎಸ್.ಪಿ. ಎಸ್.ಸಿ.ಎಸ.ಟಿ ಯೋಜನೆಯಲ್ಲಿರುವ ೭.ಡಿ  ಕಲಂನ್ನು ರದ್ದು ಮಾಡಬೇಕು.
೧೨. ಶಾಸಕರ ನೇತೃತ್ವದ ಫಲಾನುಭವಿಗಳ ಆಯ್ಕೆ ಸಮಿತಿ ರದ್ದು ಮಾಡಬೇಕು. ಯಾವುದೇ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಅವಕಾಸ ಮಾಡಿಕೊಡಬೇಕು.
೧೩. ಪಿ.ಡಬ್ಲೂ.ಡಿ ಇಲಾಖೆಯಲ್ಲಿ ಎಲ್ಲಾ ರೀತಿಯ ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕು.
೧೪. ಪ್ರತಿ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಸರ್ಕಾರ ಜಮೀನು ನಿಗದಿಗೊಳಿಸಬೇಕು
೧೫. ಸ್ತ್ರೀ-ಶಕ್ತಿ ಸಂಘಗಳಿಂದ ಮಾತ್ರ ಪ್ರಮಾಣ ಪತ್ರ ಪಡೆಯಬೇಕು ವೈಯಕ್ತಿಕವಾಗಿ ಪಡೆಯಬಾರದು ಮತ್ತು ಜಂಟಿ ಖಾತೆಗೆ ಹಣ ವರ್ಗಾಹಿಸಬೇಕು.
೧೬. ಪ್ರತಿ ಹಳ್ಳಿಗಳಲ್ಲಿ ಬೌದ್ಧ ಮಂದಿರ, ಅಂಬೇಡ್ಕರ ಭವನಗಳಿಗೆ ಜಾಗ ನಿಗದಿಗೊಳಿಸಬೇಕು.
೧೭. ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರತಿ ೩ ತಿಂಗಳಿಗೊಮ್ಮೆ ಆಯಾ ಜಿಲ್ಲಾ    SP-ಆಅ ನೇತೃತ್ವದಲ್ಲಿ ಸಭೆ ಕರೆಯಬೇಕು.
೧೮. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರು ಫಾರಂ ೫೦,೫೩ ಹಾಕಿದವರಿಗೆ ಕೂಡಲೇ ಭೂಮಿ ಮಂಜೂರು ಮಾಡಬೇಕು. ಅರ್ಜಿ ಹಾಕದೇ ಇರುವವರಿಗೆ ಅರ್ಜಿ ಹಾಕಲು ಕಾಲಾವಕಾಶ ಮಾಡಿಕೊಡಬೇಕು.
೧೯. ಪ್ರತಿ ಹಳ್ಳಿಯಲ್ಲಿ ರೈತು ಆತ್ಮಹತ್ಯ ಮಾಡಿಕೊಂಡಿರುವುದರಿಂದ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಎಲ್ಲಾ ಹಳ್ಳಿಯಲ್ಲಿ ಗ್ರಾಮ ವಾಸ್ತವ ಮಾಡಬೇಕು.

ಈ ರೀತಿ ಮೇಲಿನ ಎಲ್ಲಾ ಬೇಡಿಕೆಗಳನ್ನು ಇಡೇರಿಸಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ದಲಿತ  ಸಂಘರ್ಷ ಸಮಿತಿ (ರಿ) ರಾಜ್ಯ ಸಂಘಟನಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ದಲಿತರ ಹಕ್ಕುಗಳ ಅನುಷ್ಠಾನಕ್ಕಾಗಿ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ  ಶರಣಪ್ಪ ಲೇಬಗೇರಿ ರಾಜ್ಯ ಸಂಘಟನಾ ಸಂಚಾಲಕರು, ಹನುಮಂತಪ್ಪ ವಕೀಲರು ಜಿಲ್ಲಾ ಸಂಛಾಲಕರು, ಸಂಘಟನಾ ಸಂಚಾಲಕರಾದ ಮುದುಕಪ್ಪ ಕೋಳಿ, ಶಿವಪ್ಪ ರಮನಳ್ಳಿ, ಪರಶುಋಆಮ ಮಲ್ಲಗೆವಾಡ, ಹನುಮಂತಪ್ಪ ಇಂಡಿ, ಸುರೇಶ ನೀರಲಗಿ, ಮಂಜುನಾಥ ತೊಟಗಂಟಿ ವಕೀಲರು, ವೀರಮ್ಮ ಚನ್ನದಾಸರ ಹಾಸಗಲ್ಲ್ ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕರು, ತಾಲೂಕ ಸಂಚಾಲಕರಾದ ವೆಂಕಟೇಶ ಭೂವಿ, ಶೇಖರಪ್ಪ ತಳಕಲ್ಲ, ಫಕೀರಪ್ಪ ಪೂಜಾರ, ವಿರುಪಾಕ್ಷಪ್ಪ ಚನ್ನದಾಸರ ಃಆಸಗಲ್, ನಿಂಗಪ್ಪ ದೊಡ್ಡಮನಿ ಕಾಮನುರ, ಕೆಂಚಪ್ಪ ಹಾಲಳ್ಳಿ, ರಾಮಣ್ಣ ಲೆಬಘೇರಿ, ವೀರುಪಣ್ಣ ಅರಿಸಿನಕೇರಿ ಮುಂತಾದವರು ಉಪಸ್ಥಿತರಿದ್ದರು.

ಕಗಳಲ್ಲಿ ದೊರಕಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಆ ದೇಶದಲ್ಲಿ ಬಹುಜನರಿಗೆ ದೊರಕಿಲ್ಲ. ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರು, ಬಡವರು, ಮಕ್ಕಳು, ಮಹಿಳೆಯರು ಇನ್ನೂ ಭೀತಿಯಲ್ಲಿ ಬದುಕುತ್ತಿದ್ದಾರೆ. ತಮ್ಮ ಬದುಕನ್ನು ಗೌರವದಿಂದ ನಡೆಸುವದು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಆಗಷ್ಟ ೧೫ ರಂದು ಸ್ವಾತಂತ್ರ್ಯ ದಿನ ಆಚರಣೆ ಮಾಡುವ ಹೊತ್ತಿನಲ್ಲಿ ನಾವು ಆತ್ಮಾವಲೋಕನಕ್ಕೆ ಮೂಂದಾಗಬೇಕಿದೆ. ನಮ್ಮ ಸಮಾಜದಿಂದ ಅನ್ಯಾಯ, ಅಸಮಾನತೆ, ತಾರತಮ್ಯ, ಶೋಷಣೆಯನ್ನು ತೊಡೆದು ಹಾಕಬೇಕಿದೆ.ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಶ್ರೀಸಿದ್ದರಾಮಯ್ಯ ಸರ್ಕಾರ ಅನೇಕ ಮಹತ್ವದ ವಿಷಯಗಳಲ್ಲಿ ಗಟ್ಟಿ ನಿರ್ಧಾರವನ್ನು ಕೈಗೊಂಡಿದೆ. ಹತ್ತು ಹಲವು ಒತ್ತಡಗಳ ನಡುವೆಯೂ ಈ ಸರ್ಕಾರ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಎಲ್ಲಾ ದುರ್ಬಲರ iತ್ತು ಮಹಿಳೆಯರ ಹಿತವನ್ನು ಕಾಪಾಡುವಲ್ಲಿ ಹೆಚ್ಚಿನ ಉತ್ಸುಕತೆಯನ್ನು ತೋರಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ [ರಿ] ಈ ಸರ್ಕಾರವು ಇನ್ನೂ ಆಗಬೇಕಿರುವ ಕೆಲಸಗಳ ಕಡೆ ಗಮನಹರಿಸಬೇಕೆಂದು ಒತ್ತಾಯ.

Please follow and like us:
error

Leave a Reply

error: Content is protected !!