ಅ.೦೩ ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ಕೊಪ್ಪಳ,ಸೆ.೨೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಅ.೦೩ ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವನ್ನು ಬೆಳಿಗ್ಗೆ ೧೦.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. 
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತ ಪುರುಷ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್, ಕಬ್ಬಡ್ಡಿ, ಖೋಖೋ, ಫುಟ್ಬಾಲ್, ವ್ಹಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನ್ನಿಸ್, ಹ್ಯಾಂಡ್‌ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಭಾಗವಹಿಸಲು ಅರ್ಹರಿರುತ್ತಾರೆ. ತಾಲೂಕು ಮಟ್ಟದಲ್ಲಿ ಸಂಘಟಿಸದೇ ಇರುವ ಸ್ಪದೇಗಳಲ್ಲಿ ಭಾಗವಹಿಸುವ ಗುಂಪು ಕ್ರೀಡೆಗಳಲ್ಲಿ  ಒಂದು ತಂಡಕ್ಕೆ ಅವಕಾಶವಿದ್ದು. ಅವರು ಆಯಾ ತಾಲೂಕ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿಗಳಿಂದ ಅನುಮತಿ ದೃಡೀಕರಣದೊಂದಿಗೆ ಭಾಗವಹಿಸಲು ಅರ್ಹರಾಗಿರುತ್ತಾರೆ. ಅಂದರೆ ತಾಲೂಕಿನಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿರುತ್ತದೆ. ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳಿಗೆ ಮಾತ್ರ ಅವಕಾಶವಿರುತ್ತದೆ. ಒಂದು ವೇಳೆ ಬೇರೆ ಜಿಲ್ಲೆಯಿಂದ ಬಂದು ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳು ಎಂದು ಭಾಗವಹಿಸಿದ್ದು ತಕರಾರು ಕಂಡು ಬಂದರೆ ಅಂತಹ ತಂಡಕ್ಕೆ ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಹಾಗೂ ಆ ತಂಡದ ಹೆಸರನ್ನು ತೆಗೆಸಲಾಗುವುದು. ಹಾಗೂ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆಯನ್ನು ನೀಡಲಾಗುವುದಿಲ್ಲ.
ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ತಾಲ್ಲೂಕು ಸ್ಥಾನದಿಂದ ಕೊಪ್ಪಳಕ್ಕೆ ಹೋಗಿ ಬರುವ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆಯನ್ನು ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿ.ಎನ್.ಘಾಡಿ, ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ ಸಿ.ಎ.ಪಾಟೀಲ್, ಇಲಾಖೆಯ ಹಿರಿಯ ವ್ಹಾಲಿಬಾಲ್ ತರಬೇತುದಾರರು ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಹಾಗೂ ಎ.ಎನ್.ಯತಿರಾಜ್ ಖೋಖೋ ತರಬೇತುದಾರರು, ಯುಸೇಕ್ರೀಇ ಕೊಪ್ಪಳ ಇವರ ದೂರವಾಣಿ ಸಂಖ್ಯೆ:೯೪೪೮೬೩೩೧೪೬ ಇವರನ್ನು ಸಂಪರ್ಕಿಸಬಹುದಾಗಿದೆ.
ಅ.೦೪ ರಂದು ಮಹಿಳಾ ಕ್ರೀಡಾ ಕ್ರೀಡಾಕೂಟ
ಕೊಪ್ಪಳ,ಸೆ.೨೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಅ.೦೪ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಮಹಿಳಾ ಕ್ರೀಡಾಕೂಟವನ್ನು ಬೆಳಿಗ್ಗೆ ೧೦.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. 
ಅಥ್ಲೆಟಿಕ್ಸ್, ಕಬ್ಬಡ್ಡಿ, ಖೋಖೋ, ವ್ಹಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಹಾಕಿ, ಥ್ರೋಬಾಲ್, ಹ್ಯಾಂಡಬಾಲ್, ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ತಾಲ್ಲೂಕು ಸ್ಥಾನದಿಂದ ಕೊಪ್ಪಳಕ್ಕೆ ಹೋಗಿ ಬರುವ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆಯನ್ನು ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿ.ಎನ್.ಘಾಡಿ, ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ ಅಥವಾ ಸಿ.ಎ.ಪಾಟೀಲ್, ಇಲಾಖೆಯ ಹಿರಿಯ ವ್ಹಾಲಿಬಾಲ್ ತರಬೇತುದಾರರು ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಹಾಗೂ ಎ.ಎನ್.ಯತಿರಾಜ್ ಖೋಖೋ ತರಬೇತುದಾರರು, ಯುಸೇಕ್ರೀಇ ಕೊಪ್ಪಳ ಇವರ ದೂರವಾಣಿ ಸಂಖ್ಯೆ:೯೪೪೮೬೩೩೧೪೬ ಇವರನ್ನು ಸಂಪರ್ಕಿಸಬಹುದಾಗಿದೆ
Please follow and like us:

Related posts

Leave a Comment