ಕೆ.ಹೆಚ್. ರಂಗನಾಥ ನಿಧನಕ್ಕೆ ಸಂತಾಪ

ಕೊಪ್ಪಳ : ದಿನಾಂಕ ೧೯-೧೦-೨೦೧೧ ರಂದು ಬೆಳಗ್ಗೆ ೧೦:೩೦ಕ್ಕೆ ಜಿಲ್ಲಾ ಕಾಂಗ್ರೆಸ ಕಾರ್ಯಲಯದಲ್ಲಿ ನಾಡು ಕಂಡ ಶ್ರೇಷ್ಠ ರಾಜಕಾರಣಿ ಮುತ್ಸದ್ದಿ, ಗಾಂಧಿವಾದಿ, ತತ್ವ ಸಿದ್ದಾಂತಗಳಿಗೆ ಬದ್ದರಾಗಿದ್ದ ಅಭಿವೃದ್ದಿಯ ಹರಿಕಾರ ಹಿರಿಯ ಕಾಂಗ್ರೆಸಿಗರಾದ ಮಾಜಿ ಸಚಿವರಾದ ಕೆ.ಹೆಚ್. ರಂಗನಾಥ ಇವರ ನಿಧನಕ್ಕೆ  ಜಿಲ್ಲಾ ಕಾಂಗ್ರೆಸ ಅಧ್ಯಕ್ಷರ ನೇತೃತ್ವದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಬಿ. ನಾಗರಳ್ಳಿ, ಮರ್ದಾನಲಿ ಅಡ್ಡೇವಾಲಿ, ಜುಲ್ಲು ಖಾದರಿ, ಜಾಕಿರ ಹುಸೇನ ಕಿಲ್ಲೇದಾರ, ಮಾನ್ವಿ ಪಾಷಾ, ಕಾಟನ್ ಪಾಷಾ, ಇಂದ್ರಾ ಬಾವಿಕಟ್ಟಿ, ಶಕುಂತಲಾ ಹುಡೇಜಲಿ, ಗವಿಸಿದ್ದಪ್ಪ ಕಂದಾರಿ, ಗವಿಸಿದ್ದಪ್ಪ ಮುದಗಲ್, ಕೃಷ್ಣಾ ಇಟ್ಟಂಗಿ, ವೀರುಪಾಕ್ಷಪ್ಪ ಕಟ್ಟಿಮನಿ ವಕೀಲರು, ಶಿವಾನಂದ ಹೊದ್ಲೂರ, ಮುನೀರ ಸಿದ್ದಿಕಿ, ದ್ಯಾಮಣ್ಣ ಚಿಲವಾಡಗಿ, ಸುರೇಶ ರಡ್ಡಿ, ಗೋಲಿ ಮಹಮ್ಮದ್, ಗೂಳಪ್ಪ ಹಲಗೇರಿ, ನಾಗರಾಜ ಬಳ್ಳಾರಿ, ವೈಜನಾತ ದಿವಟರ ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ ತಿಳಿಸಿದರು. 

Leave a Reply