ರಾಜ್ಯಮಟ್ಟಕ್ಕೆ ಆಯ್ಕೆ.

ಗಂಗಾವತಿ ಅ.-12- ಕಳೆದ ಶುಕ್ರವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಗುಂಪಾ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೩೦೦೦ಮೀಟರ್ ಓಟದಲ್ಲಿ ವಿದ್ಯಾರ್ಥಿನಿ ಅಂಬಿಕಾ ಪ್ರಥಮ ಸ್ಥಾನ ಪಡೆದರೆ ೪೦೦ಮೀಟರ್ ಓಟದಲ್ಲಿ ಸುಮಿತ್ರಾ ಹಾಗೂ ೩೦೦೦ಮೀಟರ್ ನಡಿಗೆ ಸ್ಪರ್ದೆಯ
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಮೇಟಿಗೌಡ್ರು, ಎಸ್‌ಡಿಎಂಸಿ ಸದಸ್ಯರು, ಶಾಲಾ ಮುಖ್ಯ ಶಿಕ್ಷಕ ಎಸ್.ಮಲ್ಲಿಕಾರ್ಜುನ, ದೈಹಿಕ ಶಿಕ್ಷಣ ಶಿಕ್ಷಕಿ ಗಾಯತ್ರಿ ಪವಾರ್, ಶಿಕ್ಷಕರಾದ ಮಹೆಬೂಬ ಅಲಿ, ಸುಮಂಗಲಾ, ವೇದಾವತಿ, ಸುಮಂಗಲಾ ಕೆ, ಏಸ್ತೇರರಾಣಿ, ಸೂಗುರೇಶ, ರೇಖಾ, ಪ್ರಥಮ ದರ್ಜೆ ಸಹಾಯಕ ಸುದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಲ್ಲಿ ಪೂಜಾ ಕ್ರಮವಾಗಿ ದ್ವ್ವಿತೀಯ ಸ್ಥಾನ ಪಡೆಯುವ ಮೂಲಕ ಶಾಲೆಯ ಮೂವರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Leave a Reply