Breaking News
Home / Koppal News / ಬಸವಕೇಂದ್ರ ಹಾಗೂ ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆ

ಬಸವಕೇಂದ್ರ ಹಾಗೂ ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆ

 ಗಂಗಾವತಿ ೩೦: ದಿ ೦೧-೦೫-೨೦೧೫ ರಂದು ಬಸವಕೇಂದ್ರದಿಂದ ಶರಣ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಜೊತೆಗೆ ಬಸವಕೇಂದ್ರ, ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆಯನ್ನು ಬಸವಣ್ಣ ಸರ್ಕಲ್‌ನಲ್ಲಿರುವ ಶ್ರೀ ಮಹಾಲಕ್ಷ್ಮಿ ಕಾಂಪ್ಲೆಕ್ಸ್, ಎರಡನೇ ಮಹಡಿ (ಬೆಣ್ಣೆ ದೋಸೆ ಹೋಟೆಲ್ ಮೇಲ್ಗಡೆ)ಬಸವಣ್ಣ ಸರ್ಕಲ್, ಗಂಗಾವತಿಯಲ್ಲಿ ಬೆಳಿಗ್ಗೆ ೮.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.  ಉದ್ಘಾಟನೆಯನ್ನು ಕೆ. ವೆಂಕಟೇಶ, ನಗರಸಭಾ ಆಧ್ಯಕ್ಷರು ನಡೆಸಲಿದ್ದು, ಅಧ್ಯಕ್ಷತೆಯನ್ನು ಕೆ.ಬಸವರಾಜ, ಅಧ್ಯಕ್ಷರು, ಬಸವಕೇಂದ್ರ ಹಾಗೂ ಅನುಭಾವವನ್ನು   ತಿಪ್ಪೇರುದ್ರಸ್ವಾಮಿ ವಕೀಲರು, ಗಂಗಾವತಿ ಇವರು ನಿರ್ವಹಿಸಲಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಜರುಗಿದ ಹಲವು ಮಹನೀಯರ ಜಯಂತಿಯನ್ನು ನೆನೆಯುತ್ತಾ ಏಪ್ರಿಲ್ ತಿಂಗಳು“April Fool C¯Áè! Spiritual April”  (ಏಪ್ರಿಲ್ ಮೂರ್ಖರ ಮಾಸವಲ್ಲ, ಮೂರ್ಖರನ್ನು ಜಾಣರನ್ನಾಗಿಸಿದ ಮಹಾತ್ಮರು ಜನ್ಮವೆತ್ತಿದ, ಸಂದೇಶ ನೀಡಿದ ಮಾಸ) ಎಂದು ಒಂದು ವಿಶಿಷ್ಠವಾದ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ.
ಕಾರಣ ಕಾರ್ಯಕ್ರಮವು ಸರಿಯಾಗಿ ಮುಂಜಾನೆ ೦೮.೦೦ ಗಂಟೆಗೆ ಪ್ರಾರಂಭವಾಗಿ ಬೆಳಿಗ್ಗೆ ೧೧.೦೦ ಗಂಟೆಗೆ ಮುಕ್ತಾಯವಾಗುತ್ತದೆ. ದಯವಿಟ್ಟು ಸರ್ವರೂ ಈ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ೫ ನಿಮಿಷ ಮುಂಚಿತವಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಬಸವಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎ.ಕೆ.ಮಹೇಶಕುಮಾರರವರು ತಿಳಿಸಿದ್ದಾರೆ.

About admin

Leave a Reply

Scroll To Top