You are here
Home > Koppal News > ಲೂಟಿ, ಭ್ರಷ್ಟಾಚಾರವೇ ಕಾಂಗ್ರೆಸ್ ಮತ್ತು ಬಿಜೆಪಿ ಕೊಡುಗೆ :ಮೋತಿಲಾಲ್

ಲೂಟಿ, ಭ್ರಷ್ಟಾಚಾರವೇ ಕಾಂಗ್ರೆಸ್ ಮತ್ತು ಬಿಜೆಪಿ ಕೊಡುಗೆ :ಮೋತಿಲಾಲ್

ಕೊಪ್ಪಳ, ಏ.೩೦: ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಬಾರಿ ಭ್ರಷ್ಟಾಚಾರ ಲೂಟಿ ನಡೆಸಿರುವುದೇ ಜನತೆಗೆ ನೀಡಿದ ಕೊಡುಗೆಯಾಗಿದೆ ಎಂದು ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್ ಕಿಡಿಕಾರಿದರು.
ಅವರು ಮಂಗಳವಾರ ತಾಲೂಕಿನ ಹೀರೆ ಕಾಸನಕಂಡಿ ಗ್ರಾಮದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಇಗಾಗಲೇ ಹಲವು ಸಚಿವರು, ಶಾಸಕರು ಜೈಲಿಗೆ ಹೋಗಿಬಂದಿದ್ದಾರೆ ಅದೇ ರೀತಿ ಇನ್ನು ಕೋಟ್ ಕಟಕಟೆಯ

ಲ್ಲಿ ನಿಂತವರು ಇದ್ದಾರೆ. ಜನತೆ ಇನ್ನಾದರು ಎಚ್ಛೆತ್ತು ಯೋಗ್ಯ ಅಭ್ಯರ್ಥಿ ಅದು ನಮ್ಮ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಕವಲೂರಗೌಡ್ರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಅವರಿಗೆ ತಮ್ಮ ಮಿಸಲಾಗಿರಲಿ ಎಂದು ಅವರಿಲ್ಲಿ ಮನವಿ ನೀಡಿದರು.

ನಂತರ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ ಮಾತನಾಡಿ, ಜನತೆ ಜಾತಿ ಭೇದ ಮಾಡದೇ ಜ್ಯಾತ್ಯಾತೀತವಾಗಿ ಜೆಡಿಎಸ್‌ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ಸಿ.ಹೆಚ್. ರಮೇಶ, ತಾಲೂಕ ಘಟಕದ ಕಾರ್ಯದರ್ಶಿ ಕಳಕನಗೌಡ ಹಲಗೇರಿ, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಜೆಡಿಎಸ್ ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ,  ಪಕ್ಷದ ಎಸ್‌ಸಿ ಘಟಕದ ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ರಮೇಶ ಹದ್ಲಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Top