ಜಾತ್ರಾ ಸುದ್ಧಿಗಳು : ಶ್ರೀಗವಿಮಠಕ್ಕೆ ಭಕ್ತರಿಂದ ದವಸಧಾನ್ಯ ಅರ್ಪಣೆ

 : ದಕ್ಷಿಣ ಭಾರತದ ಮಹಾಕುಂಭಮೇಳವೆಂದೇ ಹೆಸರಾದ ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ದಿನಗಣನೆ ಆರಂಭವಾಗಿದೆ.  ಜಾತ್ರಾ ನಿಮಿತ್ಯ ಮಹಾದಾಸೋಹಕ್ಕಾಗಿ ಶ್ರೀಗವಿಮಠಕ್ಕೆ  ಭಕ್ತರಿಂದ ದವಸಧಾನ್ಯ ಹಾಗೂ ರೊಟ್ಟಿಯ ಕಾಣಿಕೆಗಳು ಅರ್ಪಿತವಾಗುತ್ತಿವೆ. ಸುಂದರವಾಗಿ ಅಲಂಕಾರಗೊಳಿಸಿದ ಎತ್ತುಗಳನ್ನು ಬಂಡಿಗೆ ಹೂಡಿ ವಾದ್ಯಗಳೊಂದಿಗೆ, ಭಕ್ತಿಯ ಭಜನೆಯೊಂದಿಗೆ  ಶ್ರೀಗವಿಮಠಕ್ಕೆ ಬಂದು ದವಸಧಾನ್ಯ ಹಾಗೂ ರೊಟ್ಟಿಯ ಕಾಣಿಕೆಗಳನ್ನು ಸಮರ್ಪಿಸುವ ದೃಶ್ಯ ಶ್ರೀಗವಿಮಠದಲ್ಲಿ ಕಂಡು ಬಂದಿತು. ಇಂದು ಹುಲಿಗಿ  ಗ್ರಾಮದ ಭಕ್ತರಿಂದ ೬೫ ಚೀಲ ಭತ್ತ, ಅಗಳಕೇರಾ ಗ್ರಾಮದ ಭಕ್ತರಿಂದ ೧೯ ಚೀಲ ಭತ್ತ,  ಕಂಪಸಾಗರ ಗ್ರಾಮದ ಭಕ್ತರಿಂದ ೧೦ ಚೀಲ ಭತ್ತ, ಹಿರೇಕಾಸನಕಂಡಿ ಗ್ರಾಮದ ಭಕ್ತರಿಂದ ೪೯ ಚೀಲ ಭತ್ತ, ೨೪ ಪಾಕೇಟ್ ಮೆಕ್ಕೆ ಜೋಳ, ೪ ಪಾಕೇಟ್ ಸಜ್ಜಿ, ಕೊಡದಾಳ ಗ್ರಾಮದ ಭಕ್ತರಿಂದ ೭ ಪಾಕೇಟ್ ದವಸದಾನ್ಯ, ಶ್ರೀಗವಿಮಠದ ಮಹಾದಾಸೋಹಕ್ಕೆ ಸಮರ್ಪಿತವಾದವು. ದಾನಿಗಳಿಗೆ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳು ಆಶಿರ್ವದಿಸಿದ್ದಾರೆ.

Leave a Reply