ವಾಲ್‌ಪೇಂಟರ್ ಕಾರ್ಮಿಕರು ಸಂಘಟಿತರಾಗಬೇಕು: ಭಾರದ್ವಾಜ್ ಲಿಬರೇಷನ್

ಗಂಗಾವತಿ೨೪: ನಗರದ ವೆಂಕಟೆಶ್ವರ ಟ್ರಾಲೀಸ್ ಸಭಾಂಗಣದಲ್ಲಿ ಪ್ರಗತಿಪರ ವಾಲ್‌ಪೇಂಟರ್ ಕಾರ್ಮಿಕರ ಸಂಘದ ಸಾಮಾನ್ಯ ಸಭೆ ನಡೆಯಿತು .
ಸಭೆಯ ಅಧ್ಯಕ್ಷತೆಯನ್ನು ಎಐಸಿಸಿಟಿಯು ರಾಜ್ಯಾಧ್ಯಕ್ಷ ಭಾರದ್ವಾಜ್ ವಹಿಸಿ ಮಾತನಾಡುತ್ತಾ, ವಾಲ್‌ಪೇಂಟರ್ ಕಾರ್ಮಿಕರು ಇಂದು ಸಂಘಟಿತರಾಗದೇ ಬದುಕಲಾಗದ ಅನಿವಾರ್ಯತೆಗೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಗತಿಪರ ವಾಲ್‌ಪೇಂಟರ್ ಕಾರ್ಮಿಕರ ಸಂಘದ ಹೆಸರಿನಲ್ಲಿ ಗಂಗಾವತಿಯ ವಾಲ್‌ಪೇಂಟರ್ ಕಾರ್ಮಿಕರು ಸಂಘಟಿತರಾಗಿರುವುದು ಸಂತಸ ತಂದಿದೆ ಎಂದರು. ಇದೆ ವೇಳೆ ಸಾಹಿತಿಗಳಾದ ಅಲ್ಲಾಗಿರಿರಾಜ್ ಮಾತನಾಡಿ, ಲೋಕಕ್ಕೆ ಬಣ್ಣದ ಮೆರುಗು ಕೊಡುವವರ ಬದುಕು, ಇಂದು ಬಣ್ಣ ಮಾಸಿದೆ, ಅದಕ್ಕಾಗಿ ಬಣ್ಣಗಾರರ ಬದುಕು ಹಸನಾಗಬೇಕಾದರೆ ಇಂದು ನಾವು ಒಂದುಗೂಡಬೇಕಾಗಿದೆ ಎಂದರು.
ರಾಘವೇಂದ್ರ ಮಾತನಾಡಿ ಹೊರರಾಜ್ಯದಿಂದ ಬರುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಥಳೀಯ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿ ಕಟ್ಟಡ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಕೂಡಲೇ ಸರ್ಕಾರ ಸರೋಜಿನಿ ಮಹಿಷಿಯವರ ವರದಿ ಜಾರಿಗೆ ತಂದು ಸ್ಥಳೀಯ ಕಾರ್ಮಿಕರ ಸಂಕಷ್ಟಗಳನ್ನು ಪರಿಹರಿಸಬೇಕೆಂದರು.
ಈ ಸಂದರ್ಭದಲ್ಲಿ ಪ್ರಗತಿಪರ ವಾಲ್‌ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷರಾದ

ಕೇಶವರಾವ್, ಉಪಾಧ್ಯಕ್ಷರಾದ ಇಬ್ರಾಹಿಂಸಾಬ್, ಕಾರ್ಯದರ್ಶಿಗಳಾದ ದೌಲ್‌ಸಾಬ್, ಮುಖಂಡರಾದ ಬಿ.ಮೋಹನ್, ಬಾಷಾ, ಹುಸೇನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Please follow and like us:
error