ಹಡಪದ ಸಮಾಜದಿಂದ ಯಲಬುರ್ಗಾದಲ್ಲಿ ಶುಕ್ರವಾರ ರಂದು ಪ್ರತಿಭಟನೆ.

ಯಲಬುರ್ಗಾ – ಟಿ.ವಿ ೯ ಖಾಸಗಿ ಮಾದ್ಯಮದಲ್ಲಿನ ಶುಭಮಸ್ತು ಕಾರ್ಯಕ್ರಮದ ಜ್ಯೋತಿಷಿ ಸೋಮಯಾಜಿ ಜಾತಿ ನಿಂದನೆ ಮಾಡಿದ್ದು ಕ್ಷೌರಿಕ ವೃತ್ತಿಗೆ ಅಪಮಾನಿಸಿದ್ದಲ್ಲದೆ ಕ್ಷೌರಿಕರನ್ನು ಮನೆ ಒಳಗಡೆ ಸೇರಿಸಬಾರದೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು ಸಮಾಜದಲ್ಲಿ ಮೌಡ್ಯತೆಯನ್ನು ಬಿತ್ತುವ ಕೆಲಸ ಮಾಡಿದ್ದಲ್ಲದೆ ಕ್ಷೌರಿಕ ವೃತ್ತಿದಾರರಿಗೆ ಹಾಗೂ ಕ್ಷೌರಿಕ ಸಮುದಾಯದಯಕ್ಕೆ  ನಿಂದಿಸಿದ್ದಾರೆಂದು , ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಯಲಬುರ್ಗಾ ತಾಲೂಕಿನ ಹಡಪದ ಅಪ್ಪಣ್ಣ ಸಮಾಜದಿಂದ ೭/೮/೨೦೧೫ ರ ಶುಕ್ರವಾರರಂದು ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದಿಂದ ಟಿಪ್ಪು ಸುಲ್ತಾನ ಸರ್ಕಲ ,ಕನಕದಾಸ ಸರ್ಕಲ ಹಾಗೂ ಚನ್ನಮ್ಮ ಸರ್ಕಲ್ ಮೂಲಕ ತಹಶೀಲ ಕಛೇರಿಗೆ ತಲುಪಿ ನಂತರ ತಹಶೀಲದಾರರಿಗೆ ಮನವಿ ಸಲ್ಲಿಸಲಾಗುವುದು ಆದ್ದರಿಂದ ಯಲಬುರ್ಗಾ ತಾಲೂಕಿನ ೧೪೪ ಹಳ್ಳಿಗಳ ಸಮಸ್ತ ಹಡಪದ ಬಂದುಬಾಂದವರೆಲ್ಲರೂ ಶುಕ್ರವಾರ ಬೆಳಿಗ್ಗೆ ೯.೦೦ ಗಂಟೆಗೆ ಯಲಬುರ್ಗಾ ಪಟ್ಟಣದಲ್ಲಿ ಭಾಗವಹಿಸಬೇಕೆಂದು ಯಲಬುರ್ಗಾ ತಾಲೂಕ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ಶಾಸ್ತ್ರಿ ತಿಳಿಸಿದ್ದಾರ.
Please follow and like us:
error