ಯು.ಆರ್.ಅನಂತಮೂರ್ತಿ ಹಾಗೂ ಸರೋಜಮ್ಮ ಧುತ್ತರಗಿಯವರಿಗೆ ಶ್ರದ್ದಾಂಜಲಿ ಅರ್ಪಣೆ

ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಯು.ಆರ್.ಅನಂತಮೂರ್ತಿ ಹಾಗೂ ಸರೋಜಮ್ಮ ಧುತ್ತರಗಿಯವರಿಗೆ ಶ್ರದ್ದಾಂಜಲಿ ಅರ್ಪಣೆ
ಕೊಪ್ಪಳ,ಆ.೨೩: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ

ವರ್ಷವೂ ಸಹ ಜರುಗಲಿರುವ ಜಿಲ್ಲಾ ಉತ್ಸವದ ಆರಂಭದ ದಿನವಾದ ಆ.೨೩ ರ ಶನಿವಾರ ಸಂಜೆ ನಿನ್ನೆ ನಿಧನಹೊಂದಿದ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಯು.ಆರ್.ಅನಂತಮೂರ್ತಿ ಹಾಗೂ ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸರೋಜಮ್ಮ ಧುತ್ತರಗಿಯವರ ನಿಧನದಿಂದ ಅವರ ಶ್ರದ್ದಾಂಜಲಿ ಸಭೆಯಾಗಿ ಪರಿವರ್ತನೆಗೊಂಡಿತು.

ಡಾ|| ಯು.ಆರ್.ಅನಂತಮೂರ್ತಿಯವರ ಭಾವಚಿತ್ರಕ್ಕೆ ಇಲ್ಲಿನ ಹಿರಿಯ ಸಾಹಿತಿ ಡಾ|| ಮಹಾಂತೇಶ ಮಲ್ಲನಗೌಡ ಅವರು ಪುಷ್ಪನಮನ ಸಲ್ಲಿಸುವುದರ ಮೂಲಕ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಿದರೆ, ಅದೇ ರೀತಿ ಶ್ರೀಮತಿ ಸರೋಜಮ್ಮ ಧುತ್ತರಗಿಯವರ ಭಾವಚಿತ್ರಕ್ಕೆ ಬೆಂಗಳೂರಿನ ಮನೋಶಕ್ತಿ ಸೇವಾ ಸಮಾಜದ ಅಧ್ಯಕ್ಷೆ ಮಲ್ಲಿಕಾ ಪಿ.ರವರು ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ಉತ್ಸವ ಸಂಘಟಕರೆಲ್ಲರು ಸೇರಿ ಎರಡು ನಿಮಿಷ ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಇಂದಿನ ಜಿಲ್ಲಾ ಉತ್ಸವದ ಕಾರ್ಯಕ್ರಮವನ್ನು ನಾಳೆ ಆ.೨೪ ಮತ್ತು ೨೫ ಕ್ಕೆ ಮುಂದೂಡಲಾಯಿತು. 
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಸಂಚಾಲಕ ಮಹೇಶಬಾಬು ಸುರ್ವೆ, ಉಪಸಂಚಾಲಕ ಸಿದ್ದಪ್ಪ ಹಂಚಿನಾಳ, ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ, ರಾಜ್ಯಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಸುದಿನ ಪತ್ರಿಕೆ ಸ್ಥಾನಿಕ ಸಂಪಾದಕ ಹರೀಶ ಹೆಚ್.ಎಸ್, ವೇದಿಕೆಯ ರಾಜ್ಯ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ಕೋಟೆಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ವೈ.ಬಿ.ಜೂಡಿ ಅಲ್ಲದೇ ಕೆ.ಎಂ.ಸಿ. ನ್ಯೂಸ್ ಬೆಂಗಳೂರಿನ ಚೀಪ್ ಎಂ.ಜೆ.ಗಿರೀಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಮೇಶ ಸುರ್ವೆಯವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Reply