You are here
Home > Koppal News > ಜಿಲ್ಲೆಯ ವಿವಿಧೆಡೆ ಮಕ್ಕಳ ದಿನಾಚರಣೆ

ಜಿಲ್ಲೆಯ ವಿವಿಧೆಡೆ ಮಕ್ಕಳ ದಿನಾಚರಣೆ

ಸಿ.ಪಿ.ಎಸ್.ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಶಾಲೆಯ ವತಿಯಿಂದ ಪಂಡಿತ ಜವಾಹರಲಾಲ್ ನೆಹರೂರವರ ೧೨೫ನೇ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಅಲ್ತಾಫ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತಿನ ಉಪ ಪ್ರಧಾನಿಯಾದ ಅಪ್ಸಾನ,ಕ್ರೀಡಾಮಂತ್ರಿ ಗಿರೀಶ,ಭರಮವ್ವ,ಆರೋಗ್ಯ,ಮಂತ್ರಿ ಭೀಮವ್ವ,ಪೀಜಾಭಾನು,ಪ್ರವಾಸಮಂತ್ರಿ,ವಿರೇಶ,ಹುಲಿಗೇಮ್ಮ,ತನುಜಾ,ಕಾಳಮ್ಮ,ಮಹಾಂತೇಶ,ಲಿಂಗಪ್ಪ ಮುಂತಾದವರು ಹಾಜರಿದ್ದರು.ವಿದ್ಯಾರ್ಥಿನಿ ಕಿರ್ತನಾ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿಗಳಾದ ಹಿನಾಕೌಸರ ಸ್ವಾಗತಿಸಿ,ಕೌಸರಬಾನು ವಂದಿಸಿದರು.

ಕನಕದಾಸರ ಜಯಂತಿ ಹಾಗೂ ಪಂಡಿತ ಜವಾಹರಲಾಲ್ ನೆಹರು ದಿನಾಚರಣೆ

ಜೀನಿಯಸ್ ಪಬ್ಲಿಕ್ ಸ್ಕೂಲಿನಲ್ಲಿ ೫೨೮ನೇ ಶ್ರೀ ಕನಕದಾಸ ಜಯಂತಿ ಹಾಗೂ ಪಂಡಿತ ಜವಾಹರಲಾಲ್ ನೆಹರುರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸುಂದರ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಸ್ಥಾನವನ್ನು ವಹಿಸಿದ ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿಗಳು ಇವರು ಜವಾಹರಲಾಲ್ ನೆಹರುರವರ ಜೀವನದ ಕುರಿತು ಹಾಗೂ ಕನಕದಾಸರ ಕೀರ್ತನೆಗಳನ್ನು ಕುರಿತು ಮಕ್ಕಳಲ್ಲಿ ಪ್ರೇರಣೆ ನೀಡಿ ಮಾತನಾಡುತ್ತಿದ್ದರು. 
ಅತಿಥಿಗಳಾಗಿ ಆಗಮಿಸಿದ ನಾಗರಾಜ ಬೇವಿನಮರ, ಜಂದಿಸಾಬ್, ಶಿವಯ್ಯ ಹಿರೇಮಠ, ಹನುಮಂತಪ್ಪ ಚಂದ್ರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಕಾರ್ಯದರ್ಶಿಗಳಾದ ನಾಗರಾಜ ಚಿಲವಾಡ್ಗಿ ಭಕ್ತ ಕನಕದಾಸರ ಕೀರ್ತನೆಗಳನ್ನು ಹಾಗೂ ನೆಹರುರವರ ಜೀವನ ಚರಿತ್ರೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೨೧ನೇ ಶತಮಾನದಲ್ಲಿ ಜಾತಿ ಬೇದ ಮಾಡಬಾರದು ಕುಲಕುಲವೆಂದು ಏಕೆ ಹೊಡದಾಡದಿರಿ, ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ? ಎಂದು ಕನಕದಾಸರ ಕೀರ್ತನೆಯನ್ನು ನೆನದರು. 

ಮಕ್ಕಳಿಂದ ಛದ್ಮಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸಹಶಿಕ್ಷಕಿಯಾದ ಕುಮಾರಿ ನೇತ್ರಾ ಬಂಗಾರಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯರು ಮತ್ತು ಶಾಲೆಯ ಎಲ್ಲಾ ಸಹಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀಮತಿ ಹೇಮಾವತಿ ಪ್ರಕಾಶ ಇವರು ನಿರೂಪಣೆಯನ್ನು ಮಾಡಿದರು. ಶ್ರೀಮತಿ ವಿನೂತಾ ಸ್ವಾಗತಿಸಿದರು. ಶ್ರೀಮತಿ ನೇತ್ರಾವತಿ ಚನ್ನಯ್ಯ ವಂದಿಸಿದರು.

ಬನ್ನಿಕಟ್ಟಿ ಸರ್ಕಾರಿ ಪ್ರೌಡ ಶಾಲೆಯಲ್ಲಿ  ಮಕ್ಕಳ ದಿನಾಚರಣೆ 

ಸದೃಡ ಸಮಾಜ ನಿರ್ಮಿಸುಲು ಮಕ್ಕಳು ಪಣ ತೊಡಬೇಕು – ಪ್ರಾಣೇಶ
ಕೊಪ್ಪಳ- ೧೪ ಶಿಕ್ಷಕ, ಸಮಾಜ ಸಮುಧಾಯಗಳು, ಸಂವಾಹನ ಸರಿಯಾಗಿರಬೇಕು ಇಂದಿನ ಮಕ್ಕಳು ನಾಳೆಯ ನಮ್ಮ ನಾಡಿನ ಸದೃಡ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಅವರೊಂದಿಗೆ ನಾಗರಿಕರ ಸುಂದರ ಬದುಕನ್ನು ಕಟ್ಟಿಕೊಡಲು ಪ್ರಸ್ತುತ ಸಮಾಜದ ನಾಗರಿಕರು, ಶಿಕ್ಷಕರು, ಸಮುಧಾಯದವರು ಪಾಲಕರು, ಮಕ್ಕಳ ಹಕ್ಕನ್ನು ರಕ್ಷಿಸಬೇಕು ಬಾಲ್ಯದ ಬದುಕನ್ನು ಕೊಡಬೇಕು ಎಂದು ನಗರಸಭೆ ಸದಸ್ಯ ಪ್ರಾಣೇಶ ಮಹೇಂದ್ರಕರ್ ಹೇಳಿದರು.
ಅವರಿಂದು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಡಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಕೇಕ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ ಜನಸಾಮಾನ್ಯರಲ್ಲಿ ಮತ್ತು ಪಾಲಕರಲ್ಲಿ ಮಕ್ಕಳ ಬಗೆಗೆ ಕಾಳಜಿ ಮತ್ತು ಮಕ್ಕಳ ಹಕ್ಕುಗಳ ಬಗೆಗೆ ಜಾಗೃತಿಯನ್ನು ಉಂಟುಮಾಡುವದು ಮಕ್ಕಳ ಶಿಕ್ಷಣ ಮತ್ತು ಅವರ ಬಗ್ಗೆ ಕಾಳಜಿ ಮಾಡುವದರ ಬಗೆಗೆ ತಿಳಿಸುವದು ಒಂದು ರಾಷ್ಟ್ರದ ಪ್ರಗತಿಗೆ ಮಕ್ಕಳ ಪ್ರಗತಿಯ ಪ್ರತೀಕವೆಂದು ತಿಳುವಳಿಕೆಯನ್ನುಂಟು ಮಾಡುವದು ಮಕ್ಕಳ ನಿಷ್ಠಪಟ ನಿಷ್ಕಳಂಕ ಮನಸ್ಸು ಅಪೂರ್ವ ಪ್ರೇಮ, ಸೂಷ್ಮತೆ ಅರ್ಥ ಮಾಡಿಕೊಂಡು ಪಾಲಕರು  ಮಕ್ಕಳ ಬದುಕನ್ನು ಅಸನಗೊಳಿಸದ ಹೊರತು ಅವರ ಹಕ್ಕಿಗೆ ಚುತಿಬಾರದ ರೀತಿಯಲ್ಲಿ ಸಮಾಜ ನಡೆದುಕೊಂಡು ಸಂಪೂರ್ಣ ಸಮಾಜ ಸಮಸ್ಥಿತಿಯಲ್ಲಿ ಸ್ವಾಸ್ತ್ಯ ಸಮಾಜ ಸ್ಥಾಪಿಸಲು ಮಕ್ಕಳ ಹಕ್ಕು ರಕ್ಷಣೆ ಮಕ್ಕಳ ಬಾಲ್ಯದ ಸಂವೇದಗಳನ್ನು ಅರ್ಥೈಸಿಕೊಳ್ಳಲು ಮಕ್ಕಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವದು ಅಗತ್ಯವಾಗಿದೆ ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಎಂದು ಹೇಳಿದರು .
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ನೆಹರುವರು  ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದು ಮಕ್ಕಳಿಗಾಗಿ ಸಾಕಷ್ಟು ಪೂರಕ ಕಾರ್ಯಗಳನ್ನು ಮಾಡಿದ್ದಾರೆ ಮಕ್ಕಳಿಗಾಗಿ ಸ್ಥಾಪಿಸಿದ ಸಂಸ್ಥೆಗಳು ಎಲ್ಲಾ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಉಚಿತ ಉಪಹಾರ, ಹಾಗೂ ಹಾಲು ಎಲ್ಲಾ ಮಕ್ಕಳಿಗೆ ನೀಡುವ ಪ್ರಸ್ತಾಪ ಮಾಡಿ ಮಕ್ಕಳ ಮೇಲಿನ ಅಪಾರ ಮಮತೆಯನ್ನು ಮೆರೆದಿರುವ ಪ್ರಯುಕ್ತ ಅವರನ್ನು ಚಾಚಾ ನೇಹರು ಎಂದು ಕರೆಯುವ ಮೂಲಕ ರಾಷ್ಟ್ರದ್ಯಾದಂತ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ, ವಿಧ್ಯಾರ್ಥಿಗಳಾದ ಆಫ್ತಾಭ, ಖಾಲೀದ, ಅರುಣ ದೊಡ್ಡಮನಿ, ಎಂ.ವಿ.ಮಂಜೂಳಾ, ಶೈಲಜಾ, ರಾಮರಡ್ಡೆರ, ಗೋಪಾಲರಾವ್ ಗುಡಿ, ವೀರಯ್ಯ ಒಂಟಿಗೋಡಿಮಠ, ಉಪಸ್ಥಿತರಿದ್ದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯೊಪಧ್ಯಾಯರಾದ ತಾಹೇರ ಬೇಗಂ ವಹಿಸಿದ್ದರು, 
ಪ್ರಾರಂಭದಲ್ಲಿ ಕುಮಾರಿ ಜ್ಯೋತಿ ಸಂಘಡಿಗರಿಂದ ಪ್ರಾರ್ಥನೆ ಜರುಗಿದರೆ, ಕುಮಾರ ಲಕ್ಕಣ್ಣ ಸರ್ವರನ್ನು ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ವಿಧ್ಯಾರ್ಥಿನಿ ಕುಮಾರಿ ಮಹಾದೇವಿ ನೇರವೇರಿಸಿದಳು .
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳ ದಿನಾಚಾರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಆಟೋಟಗಲ್ಲಿ ಭಾಗವಹಿಸದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಹಿತು. 

​ಕೊಪ್ಪಳ:ನ14: ನಗರದ ವಾರ್ಡ ನಂ7 ದಿಡ್ಡಿಕೇರಿ ಓಣೀಯ ಸರಕಾರಿಹಿರಿಯಪ್ರಾಥಮಿಕ ಶಾಲೆಯಲ್ಲಿ ಪಂ ನೇಹರುರವರ 125ನೇ ಜಯಂತಿಯ ಅಂಗವಾಗಿ ಮಕ್ಕಳ ದಿನಾಚರಣೆ ಯನ್ನು ಆಚರಿಸಲಾಯಿತು.
                       ಈ ಕಾರ್ಯ ಕ್ರಮದ ವಿಶೇಷತೆ ಏನೇಂದರೆ ಮಕ್ಕಳೆ ಎಲ್ಲಾ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷತೆಯನ್ನು ಕುಮಾರಿ ಶೋಭಾ ವಹಿಸಿದ್ದು ಅತಿಥಿಗಳಾಗಿ ಸಮೀರ,ಅಮಾನ.ವಾಸಿಮ್,ಸಿಮಾ ಅಷಿ೵ಯಾ ಆಗಮಿಸಿದ್ದರು.ಮಕ್ಕಳು ನೇಹರುರವರ ಬಗ್ಗೆ ,ಅವರ ಸಾಧನೆಗಳ ಬಗ್ಗೆ ಮಾತನಾಡಿದರು. 
                     ಮುಖ್ಯಗುರುಗಳಾದ ಮೈಲಾರಗೌಡ ಹೊಸಮನಿ ಮಾತನಾಡಿ ಪಂ ಜವಾಹರಲಾಲ ಻ವರ ಜೀವನ ಮತ್ತು ಈದೇಶಕ್ಕೆ ಅವರು ನೀಡಿದ ಕಡುಗೆ  ಕೊಂಡಾಡಿದರು, ಆಧುನಿಕ ಭಾರತ ನಿರ್ಮಾಣದಲ್ಲಿ ನೆಹರೂರವರು ನೀಡಿದ ಪಂಚವಾರ್ಷಿಕ ಯೋಜನೇಗಳು ಮತ್ತು ಕ್ಐಗಾರಿಕೆಗಳಿಗೆ,ಆಣೆಕಟ್ಟುಗಳಿಗೆ ಅವರ ಕಡುಗೆ ಕೊಂಡಾಡಿದರು. ಆರ್ಷಿಯಾ ಸ್ವಾಗತಿಸಿದರೆ ,ತಸ್ಲೀಮ ವಂದಿಸಿದಳು ಸಮೀರ ಗ್ಔಷಪಾಷಾ ನೀರೂಪಿಸಿದರು.

Leave a Reply

Top