fbpx

ಶತಮಾನೋತ್ಸವದ ಉರುಸ್ ಆಚರಣೆ ನಿಮಿತ್ತ ಕೊಪ್ಪಳದಲ್ಲಿಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ

 ಕೊಪ್ಪಳ.ಮಾ,೧೬: ೧೯ ಶತಮಾನದ ಅಜೀಮ್ ಇಸ್ಲಾಮಿ ಸ್ಕಾಲರ್ ಇಮಾಮ್ ಅಹೇಲೆ ಸುನ್ನತ್ ಮಜದೂ ದೀನ್-ವ-ಮಿಲ್ಲತ್ ಶೇಖ್-ಉಲ್-ಇಸ್ಲಾಂ ಇಮಾಮ್ ಮೊಹಮ್ಮದ್ ಅನ್ವಾರುಲ್ಲಾ ಫಾರುಕಿ ಅಲೈರೆಹಮತಿಕಾ ರವರ ಶತಮಾನೋತ್ಸವದ ಉರಸ್ ಅಂಗವಾಗಿ ವಿಶ್ವಾಧ್ಯಂತ ಸಮೀನಾರ್ ಸೇರಿದಂತೆ ಭವ್ಯ ಮೆರವಣಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ದ ನಿಮಿತ್ಯ ಕೊಪ್ಪಳದಲ್ಲಿ ದಿ.೧೭ರ ಮಂಗಳವಾರ ರಾತ್ರಿ ೮.೩೦ಕ್ಕೆ ನಗರಸಭೆಬಳಿ ಇರುವ ಹಳೇ ಈದ್ಗಾ ಮೈದಾನದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
     ಹೈದರಾಬಾದಿನ ಶೆಖ್-ಉಲ್-ಜಾಮೀಯಾ ನಿಜಾಮೀಯಾ ದ ಹಜರತ್ ಮುಫ್ತಿ ಖಲೀಲ್ ಅಹಮ್ಮದ ಸಾಹೇಬ ರವರ ದಿವ್ಯ ಸಾನಿಧ್ಯದಲ್ಲಿ ಅಲ್ ಹಾಜ್ ಮೌಲಾನಾ ಸೂಫಿ ಮಹಮ್ಮದ್ ಬಕ್ಷಿ ಸಾಹೇಬ್ ತಸ್ಕಿನ ಕೊಪ್ಪಳ ರವರ ಅಧ್ಯಕ್ಷತೆಯಲ್ಲಿ ಜರುಗುವ ಈ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಈ ಟಿವಿ ಉರ್ದು ವಾರ್ತೆ ಚಾನಲ್ ನ ಪ್ರವಚನಕಾರ ಮುಫ್ತಿ ಸಯ್ಯದ್ ಜೀಯಾ ಉದೀನ್ ನಕ್ಷಬಂದಿ ಹೈದರಾಬಾದ್, ಕಲಬುರ್ಗಿಯ ಮುಫ್ತಿ ಸಯ್ಯದ್ ಅಬ್ದುಲ್ ರಶೀದ್ ಸಾಹೇಬ್ ಖಾದ್ರಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಜಲೀಸೆ ತಹ ಫುಜ್ ಇಮಾನ್ ತಂಜಿಂ ಉಲ್ ಮಾಯೆ ಇಕ್ರಾಮ್ ಕೊಪ್ಪಳ ಹಾಗೂ ಕಾರ್ಯಕ್ರಮ ಸಂಘಟಕ ಮುಫ್ತಿ ನಜೀರ್ ಅಹಮ್ಮದ್ ಖಾದ್ರಿ ರವರು ಪ್ರಕಟಣೆಯಲ್ಲಿ ತಿಳಿಸಿ ಸರ್ವ ಸಮಾಜ ಬಾಂಧವರನ್ನು ಸ್ವಾಗತಿಸಿದ್ದಾರೆ.
Please follow and like us:
error

Leave a Reply

error: Content is protected !!