You are here
Home > Koppal News > ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಸಂತ್ರಸ್ಥರಿಗೆ ಪರಿಹಾರ ನೀಡಲು ಸಿಪಿಐಎಂ ಆಗ್ರಹ

ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಸಂತ್ರಸ್ಥರಿಗೆ ಪರಿಹಾರ ನೀಡಲು ಸಿಪಿಐಎಂ ಆಗ್ರಹ

ಹೊಸಪೇಟೆ: ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ದಲಿತ ಕೂಲಿಗಳಿಬ್ಬರ ತಲೆ ಕತ್ತರಿಸಿ, ಕಗ್ಗೊಲೆ ಮಾಡಿದ ಕೊಲೆಗಾರರನ್ನು, ಉನ್ನತ ತನಿಖೆಯ ಮೂಲಕ ಕಠಿಣ ಶಿಕ್ಷೆ ನೀಡಬೇಕೆಂದು ಮತ್ತು ಕೊಲೆಯಾದ ಪ್ರತಿ ಕುಟುಂಬಕ್ಕೆ ೧೦ ಲಕ್ಷ ರೂಪಾಯಿ, ೫ ಎಕರೆ ಭೂಮಿ ಮತ್ತು ಸರಕಾರಿ ಉದ್ಯೋಗ ಕೊಡಬೇಕಾಗಿ ಒತ್ತಾಯಿಸಿ ಸಿಪಿಐಎಂ ಪಕ್ಷವು ಬುಧವಾರ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಿತು.
ನಗರದ ಶ್ರಮಿಕ ಭವನದಿಂದ ಪ್ರತಿಭಟನೆ ಮೆರವಣಿಗೆ ನಂತರ ತಾಲೂಕು ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿ  ಸಿಪಿಐಎಂ ಮುಖಂಡ ಆರ್. ಭಾಸ್ಕರರೆಡ್ಡಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಬಾಳೆ ತೋಟದಲ್ಲಿ  ಇದೇ ಮಾರ್ಚ ೧೯ರಂದು ದಲಿತ ಕೂಲಿಕಾರರಾದ ದೇಶವಳ್ಳಿ ಕೃಷ್ಣಯ್ಯ ಮತ್ತು ಕಂದಹಳ್ಳಿ  ನಂಜಯ್ಯ ಇವರುಗಳ ತಲೆಕತ್ತರಿಸಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ದೇವಸ್ಥಾನದ ಪೂಜಾರಿ ಹಾಗೂ ಮಾನಸಿಕ ಅಸ್ವಸ್ಥನಾದ ಮಹದೇವ ಎಂಬಾತನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ಕಾರಣಕ್ಕಾಗಿ ಈತನೊಬ್ಬನ್ನೇ ಪೊಲೀಸರು ಬಂಧಿಸಿ ಕೈತೊಳೆದುಕೊಂಡಿದ್ದಾರೆ. ಕೂಲಿಕಾರರ ಏಜೆಂಟ್ ಆದ ನಾಗರಾಜ್ ಎಂಬಾತನು, ಕೂಲಿ ಕೆಲಸಕ್ಕಾಗಿ ಕೃಷ್ಣಯ್ಯ ಮತ್ತು ನಂಜಯ್ಯ ಇವರನ್ನು ಕರೆದುಕೊಂಡು ಬಾಳೇ  ತೋಟದಲ್ಲಿ ಕೆಲಸಕ್ಕೆ ಹಚ್ಚಿ ಬೇರೆ ಕಡೆ ಹೋಗಿದ್ದಾನೆ. ತೋಟಕ್ಕೆ ಬಂದ ನಾಗರಾಜನ ಅಣ್ಣ ಪೂಜಾರಿ ಮಹಾದೇವ, ಕೂಲಿಕಾರರಿಗೆ ಬೇರೋಂದು ಕೆಲಸ ಮಾಡಲು ಹೇಳಿದ್ದಾನೆ. ಅದಕ್ಕೆ ಕೂಲಿಕಾರರು ಒಪ್ಪದಿದ್ದಾಗ, ಮಾತಿಗೆ ಮಾತು ಜಗಳವಾಗಿ ಕೂಲಿಕಾರಿಬ್ಬರನ್ನು ನಾನೇ ಹೊಂದಿದ್ದೇನೆ. ಎಂದು ಹೇಳಿಕೆನೀಡಿದ್ದಾನೆ. ಪೊಲೀಸರು ಇದನ್ನೆ ಸತ್ಯವೆಂಬಂತೆ ಪರಿಗಣಿಸಿ ಕೇಸ್ ರಿಜಿಸ್ಟರ್ ಮಾಡಿಕೊಂಡು ವರದಿ ಮಾಡಿದ್ದಾರೆ. ದಲಿತ ಕೂಲಿಕಾರರ ಇಂತಹ ಭೀಕರ ಕೊಲೆಯನ್ನು ಯಾವುದೋ  ಸಣ್ಣ ಪ್ರಕರಣವೆಂಬಂತೆ ಪರಿಗಣಿಸಿ, ಈ ಘಟನೆಗೆ ಮೂಲ ಕಾರಣಗಳು ಏನೆಂಬುದನ್ನು ಪತ್ತೆ ಹಚ್ಚದೆ, ಇಡೀ ಪ್ರಕರಣವನ್ನು ತಪ್ಪಿಗೆಸೆಯಲು ಪ್ರಯತ್ನಿಸಿರುವುದನ್ನು ಖಂಡನಾರ್ಹವಾಗಿದೆ ಎಂದರು. ಸಿಪಿಐ ಮುಖಂಡ ಎಂ. ಜಂಬಯ್ಯ ನಾಯಕ ಮಾತನಾಡಿ, ಸಿಪಿಐಎಂ ಮತ್ತು ದಲಿತ ಹಕ್ಕುಗಳ ಸಮಿತಿಯ ನಿಯೋಗವೊಂದು ಘಟನೆ ನಡೆದ ಸ್ಥಳಕ್ಕೆ ಬೆಟ್ಟಿಕೊಟ್ಟಾಗ ಅಲ್ಲಿನ ಜನರ ಅಭಿಪ್ರಾಯಗಳು ದಿಗ್‌ಭ್ರಮೆಯನ್ನುಂಟು ಮಾಡುತ್ತದೆ. ಕೊಲೆಯನ್ನು ತಾನೇ ಮಾಡಿರುವುದಾಗಿ ಹೇಳುವ ಮಹದೇವ ಒಬ್ಬ ದೇವಸ್ಥಾನದ ಪೂಜಾರಿ. ಆತ ದೇವರಿಗೆ  ಈ ದಲಿತರಿಬ್ಬರನ್ನೂ ನರಬಲಿ ಕೊಟ್ಟಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ, ಹಾಗೇನಾದೂ ಆಗಿದ್ದರೆ ಒಬ್ಬ ವ್ಯಕ್ತಿಯಿಂದ ಇಬ್ಬ ತಲೆಯನ್ನು ಒಂದೇ ಸ್ಥಳದಲ್ಲಿ ಕತ್ತರಿಸಲು ಸಾಧ್ಯವೇ? ಈ ರೀತಿ ತಲೆ ಕತ್ತರಿಸುವಾಗ ಕೃಷ್ಣಯ್ಯನಾಗಲೀ, ನಂಜಯ್ಯನಾಗಲೀ, ಯಾವುದೇ ಪ್ರತಿರೋಧ ಮಾಡಲಿಲ್ಲವೇ? ಪ್ರತಿರೋಧ ಮಾಡಿದ್ದರೆ ಬೀಸಿದ ಮಚ್ಚುಕತ್ತಿ ದೇಹದ ಬೇರೆ ಭಾಗಕ್ಕೆ ಬೀಳುತ್ತಿರಲಿಲ್ಲವೆ? ಒಬ್ಬನ ತಲೆಯನ್ನು ಕತ್ತರಿಸುವಾಗ ಇನ್ನೊಬ್ಬ ತಡೆಯಬಹುದಿತ್ತು. ಇಲ್ಲವೇ ಹೆದರಿ ಓಡಿ ಹೋಗಬಹುದಿತ್ತು. ಇಂತಹ ಸುಳಿವು ಕಂಡು ಅಲ್ಲಿ ಕಂಡು ಬರುತ್ತಿಲ್ಲ ಮತ್ತು ಪೊಲೀಸರ ಹೇಳಿಕೆಯಲ್ಲೂ ಕಂಡು ಬರುತ್ತಿಲ್ಲ. ಇದೆಲ್ಲವನ್ನು ಗಮನಿಸಿದಾಗ, ಒಬ್ಬ ವ್ಯಕ್ತಿಯೇ, ಒಂದೇ ಸ್ಥಳದಲ್ಲಿ ಇಬ್ಬರನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಆರೋಪಿ ಮಹದೇವ ಜೊತೆ ಮತ್ತಷ್ಟು ಜನ ಸೇರಿಕೊಂಡು ಈ ಕೊಲೆ ನಡೆಸಿರಬೇಕು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೊಲೆ ನಡೆದ ಸ್ಥಳಕ್ಕೆ  ಪೊಲೀಸ್ ಠಾಣೆಗೆ ಇರುವ ಅಂತರವೆಂದರೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಇಂತಹ ಭೀಕರ ಕೃತ್ಯ ನಡೆದಿರುವುದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಜನಭಯ ಭೀತರಾಗಿದ್ದಾರೆ. ಮತ್ತು ನೂರಾರು ಜನ ಗ್ರಾಮಗಳನ್ನು ತೊರೆದು ಹೋಗಿರುವುದು ಕಂಡು ಬರುತ್ತದೆ.ಆದ್ದರಿಂದ ಇಡೀ ಪ್ರಕರಣವನ್ನು ರಾಜ್ಯ ಸರಕಾರದ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ, ಇದರ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವವನ್ನು ಎ. ಕರುಣಾನಿಧಿ, ಎನ್.ಯಲ್ಲಾಲಿಂಗ, ಕೆ.ರಮೇಶ್ ಮತ್ತಿತರರು ವಹಿಸಿದ್ದರು.  

Leave a Reply

Top