ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅವಮಾನಕ್ಕೆ ಖಂಡನೆ

 ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಕೊಳುರ ಗ್ರಾಮದಲ್ಲಿರುವ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ವೀರರಾಣಿ ಕಿತ್ತೂರ ಚೆನ್ನಮ್ಮನ್ನವರ ಪ್ರತಿಮೆಗೆ ದಿ: ೧೭/೦೫/೨೦೧೫ ರಂದು ಚೆನ್ನಮ್ಮ ವೃತ್ತದಲ್ಲಿರುವ ಭಾವ ಚಿತ್ರಕ್ಕೆ ಕೆಲವು ದುಷ್ಠ ಶಕ್ತಿಗಳು ಅವಮಾನ ಮಾಡಿರುವುದನ್ನು ಖಂಡಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದಿಂದ  ಸದರಿ ಘಟನೆಯನ್ನು ತಿರ್ವವಾಗಿ ಖಂಡಿಸಿದ್ದು ಕೂಡಲೆ ಇದಕ್ಕೆ ಕಾರಣರಾದ ದುಷ್ಠ ವ್ಯಕ್ತಿಗಳನ್ನು ಬಂದಿಸಿ ಶಿಕ್ಷೆಗೊಳಪಡಿಸಬೇಕು. 
        ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು  ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ದೇವರಾಜ ಹಾಲಸಮುದ್ರ  ತಿಳಿಸಿದ್ದಾರೆ. ಮತ್ತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಳಕನಗೌಡ ಜಮ್ಮಾಪುರ, ವೀರಭದ್ರಗೌಡ ಸಮಾಜ ಮುಖಂಡರು ಶರಣಪ್ಪ ಹ್ಯಾಟಿ, ತಾಲೂಕ ಅಧ್ಯಕ್ಷರಾದ ಕರಿಯಪ್ಪ ಮೇಟಿ, ಬಸವಗೌಡ ತೊಂಡಿಹಾಳ, ಬಸಪ್ಪ ಕಂಪ್ಲಿ, ಶರಣಪ್ಪ ಶೀಲವಂತರ, ನಿಂಗೋಜಿ ಕ.ಸಾ.ಪ. ಅಧ್ಯಕ್ಷರು, ಬಸಣ್ಣ ಕುಷ್ಟಗಿ, ಇನ್ನು ಮುಂತಾದ ಸಮಾಜ ಮುಖಂಡರು ಈ ಸಂದರ್ಭದಲ್ಲಿ ಇದ್ದರು. 
Please follow and like us:
error