ಕವಲೂರು ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಲಕ್ಷ್ಮವ್ವ ಗುಡಿ ಆಯ್ಕೆ.

 ಕೊಪ್ಪಳ,ಜೂ,೨೮: ತಾಲೂಕಿನ ಕವಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ
ಲಕ್ಷ್ಮವ್ವ ಗಂ.ಲಕ್ಷ್ಮಪ್ಪ ಗುಡಿ ಯವರು ಜಯ ಸಾಧಿಸುವದರ ಮೂಲಕ ನೂತನ ಗ್ರಾಮ ಪಂಚಾಯತಿ
ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇತ್ತಿಚಿಗೆ ಜರುಗಿದ ಗ್ರಾಮ ಪಂಚಾಯತಿ ಅಧ್ಯಕ್ಷ
ಉಪಾಧ್ಯಕ್ಷರ ಚುವಾವಣೆಯಲ್ಲಿ ಶ್ರೀಮತಿ ಲಕ್ಷ್ಮವ್ವ ಗಂ.ಲಕ್ಷ್ಮಪ್ಪ ಗುಡಿ ಯವರು ಜಯ
ಸಾಧಿಸಿದರೆ ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಪಂಚಾಯತಿ ವ್ಯಾಪ್ತಿಯ ಗುಡಿಗೇರಿ ಗ್ರಾಮದ
ಯಂಕಣ್ಣ ಹೊರಕನಳ್ಳಿ ರವರು ಆಯ್ಕೆಗೊಂಡಿದ್ದಾರೆ ಇವರಿಬ್ಬರು ಕಾಂಗ್ರೆಸ್ ಬೆಂಬಲಿತ
ಸದಸ್ಯರಾಗಿದ್ದಾರೆ. ಇವರ ಆಯ್ಕೆಗೆ ಶ್ರಮಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಕೆ.ಬಸವರಾಜ್ ಹಿಟ್ನಾಳ, ಮುಖಂಡ ಕೆ.ಎಂ.ಸಯ್ಯದ್ ಮತ್ತು ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ರವರಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳು ಅಭಿನಂದಿಸಿದ್ದಾರೆ.ಅಭಿವೃದ್ಧಿ ಕೆಲಸಕ್ಕೆ
ಹೆಚ್ಚಿನ ಆದ್ಯತೆ – ಲಕ್ಷ್ಮವ್ವ ಗುಡಿ ಗ್ರಾಮೀಣ ಜನರ ಬೇಕು
ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಗ್ರಾಮಸ್ಥರ
ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ
ಆದ್ಯತೆ ನೀಡಿ ಶ್ರಮಿಸುವುದಾಗಿ ಕವಲೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಶ್ರೀಮತಿ
ಲಕ್ಷ್ಮವ್ವ ಗಂ.ಲಕ್ಷ್ಮಪ್ಪ ಗುಡಿ ಹೇಳಿದರು.ಅವರು ಕವಲೂರು ಗ್ರಾ.ಪಂ ಗೆ ನೂತನ
ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು
ಮಾತನಾಡಿ ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನು
ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದ ಅವರು ಶಾಸಕ ಕೆ.ರ್ರ್‍ಆವೇಂದ್ರ ಹಿಟ್ನಾಳರವರ
ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.ಮುಂದುವರೆದು ಮಾತನಾಡಿದ ಅವರು ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಗೆಲುವಿಗೆ ಮಾರ್ಗದರ್ಶನ ನೀಡಿ ನಂತರ ಪಂಚಾಯತಿ ಅಧ್ಯಕ್ಷೆ ಸ್ಥಾನಕ್ಕೂ ಕೂಡಾ ಆಯ್ಕೆಯಾಗಲು ಕಾರಣಿರರ್ತರಾದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಬಸವರಾಜ್ ಹಿಟ್ನಾಳ ಹಾಗೂ ಪಕ್ಷದ ನಾಯಕ ಕೆ.ಎಂ.ಸಯ್ಯದ್ ರವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ದಿಸೆಯಲ್ಲಿ ಪಂಚಾಯತಿ ಕೊಂಡ್ಯೊಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಕವಲೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಶ್ರೀಮತಿ ಲಕ್ಷ್ಮವ್ವ ಲಕ್ಷ್ಮಪ್ಪ ಗುಡಿ ಅಭಿಪ್ರಾಯ ಪಟ್ಟರು.

Please follow and like us:
error