ರೈತರ ಸರಣಿ ಆತ್ಮಹತ್ಯಯನ್ನು ತಡೆಗಟ್ಟಲು ಆಗ್ರಹಿಸಿ ಪ್ರತಿಭಟನೆ.

ಕೊಪ್ಪಳದಲ್ಲಿ ರಾಜ್ಯಾದ್ಯಂತ ರೈತರ ಸರಣಿ ಆತ್ಮಹತ್ಯ ನಿಲ್ಲಲಿ ಎಂದು ರೈತ-ಕೃಷಿಕಾರ್ಮಿಕ ಸಂಘಟನೆ (ಆರ್.ಕೆ.ಎಸ್) ಕೊಪ್ಪಳ ಜಿಲ್ಲಾ ಘಟಕದಿಂದ ಪ್ರತಿಭಟನೆಯನ್ನು ಅಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸಂಘಟನಾಕಾರರಾದ ಮಾರುತಿ ಎನ್ ಹೊಸಮನಿಯವರು ಮಾತನಾಡುತ್ತ, ಕರ್ನಾಟಕದಾದ್ಯಂತ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಪ್ರತಿಯೊಬ್ಬ ಪ್ರಜ್ಞಾವಂತ ಮನುಷ್ಯನ ಮನಸ್ಸು ಚಿಂತನೆಗೆ ಹಚ್ಚುವಂತೆ, ಬರುವ ದಿನಗಳಲ್ಲಿ ರೈತರ ಪರಿಸ್ಥಿತಿ ಏನಾಗಬಹುದು ಎಂದು ಆತಂಕ ಪಡುವಂತೆ ಈ ರೈತರ ಆತ್ಮಹತ್ಯೆಗಳು ಮುಂದುವರೆದಿವೆ. ನಾಡಿನ ಜನರಿಗೆ ಅನ್ನ ನಿಡುತ್ತಿರುವ ರೈತ ಇಂದು ನೇಣಿಗೆ ಶರಣಾಗುತ್ತಿದ್ದಾರೆ ಎಂದರೆ ಇದಕ್ಕಿಂತ ದುಸ್ಥಿತಿ ಮತ್ತೋಂದಿಲ್ಲ. ಎಂದು ನುಡಿದರು
ಮುಂದುವರೆದು ಮಾತಾನಾಡುತ್ತಾ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳು ನಮ್ಮ ರೈತರನ್ನು ಚಿಂತೆಗೀಡು ಮಾಡಿವೆ. ವಿಶ್ವ ಮಾರುಕಟ್ಟೆಯ ತಾಳಕ್ಕೆ ನಮ್ಮ ರೈತರು ಕುಣಿಯುವಂತಾಗಿದೆ. ಔಷದ, ಗೊಬ್ಬರ ಕಂಪನಿಗಳು ಹಾಗೂ ಇವುಗಳನ್ನು ನಿಯಂತ್ರಣ ಮಾಡಬೇಕಾದ ನಮ್ಮ ಸರ್ಕಾರಗಳು ನಮ್ಮ ರೈತರ ಜೀವನ ಅಭದ್ರಗೊಳಿವೆ. ರೈತರಿಗೆ ಕೃಷಿಯಲ್ಲಿ ಹೂಡಿಕೆ ಹೆಚ್ಚಾಗಿದೆ. ಅದರಿಂದ ಬರುವ ಇಳುವರಿ ಕಡಿಮೆಯಾಗಿದೆ. ಬಂದ ಇಳುವರಿಗೆ ಸರಿಯಾದ ಬೆಲೆಯಿಲ್ಲ. ಹೀಗಾಗಿ ಸ್ವಾಭಿಮಾನಿಗಳಾದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವದು ಖೆಧಕರ ಸಂಗತಿ ಎಂದು ವಿಷಾಧಿಸಿದರು.
 ಇನ್ನೋರ್ವ ಸಂಘನಾಕಾರರಾದ ಸಿದ್ದಲಿಂಗರೆಡ್ಡಿಯವರು ಮಾತನಾಡುತ್ತಾ, ರತರ ಆತ್ಮಹತ್ಯೆಗಳು ನಿರಂತರ ನಡೆಯುತ್ತಿರುವ ಈ ಸಂದರ್ಭದಲ್ಲಿ ಜವಾಬ್ದಾರಿಯುತ ಸರ್ಕಾರ ಸುಮ್ಮನೆ ಕೂಡಬಾರದು. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಖಚಿತ ನಿಲುವುಗಳನ್ನು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ರೈತರ ಬಗ್ಗೆ ಉಡಾಫೆಯಾಗಿ ಮಾತನಾಡುತ್ತಿರುವುದು ಖಂಡನಾರ್ಹ.
ಮುಖ್ಯವಾಗಿ ಇಂದು ಸಂಕಷ್ಟಕೀಡಾದ ಕಬ್ಬು ಬೆಳೆಗಾರರ ಬೆನ್ನಿಗೆ ಸರ್ಕಾರ ನಿಲ್ಲಬೇಕಾಗಿದೆ. ಮಳೆಯಾಗದ ಪ್ರದೇಶದಲ್ಲಿ ಬರಗಾಲ ಕಾಮಗಾರಿ ಕೈಗೊಳ್ಳಬೇಕಾಗಿದೆ. ಬಡರೈತರ ಸಾಲಮನ್ನಾ ಮಾಡುವುದಲ್ಲದೇ ಬಡ್ಡಿರಹಿತ ಸಾಲನೀಡಿ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತ್ತಾಯಿಸಿದರು.
 ಈ ಪ್ರತಿಭಟನಾ ಪ್ರದರ್ಶನದಲ್ಲಿ ರೈತರಾದ ಬಾಬುಸಾಬ, ಗಂಗಾಧರ, ಶೇಖಮ್ಮ, ರಾಚಯ್ಯ, ರಾಜಸಾಬ್, ಗವಿಸಿದ್ದಪ್ಪ, ಮನುಂತಪ್ಪ, ಬುಡ್ಡಪ್ಪ, ಮತ್ತಿತರರು ಭಾಗವಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಈ ಕೆಳಗಿನ ಬೆಡಿಕೆಯನ್ನು ಹಿಡೆರಿಸಲು ಮನವಿ ಪತ್ರವನ್ನು ಕೊಡಲಾಯಿತು.
ಬೇಡಿಕೆಗಳು:

೧.    ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಆಸರೆ ನೀಡಬೇಕು. ಬದುಕನ್ನು ಕಟ್ಟಿಕೊಳ್ಳಲು ಆ ಕುಟುಂಬಕ್ಕೆ  ಎಲ್ಲಾ ಆರ್ಥಿಕ ಸಹಾಯಮಾಡಬೇಕು.
೨.    ಈ ಕೂಡಲೇ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣವನ್ನು ಕಾರ್ಖಾನೆಯ ಮಾಲಿಕರಿಂದ ವಸೂಲು ಮಾಡಿ ರೈತರಿಗೆ ನೀಡಬೇಕು.

೩.    ಕಟಾವಿಗೆ ಬಂದ ಕಬ್ಬನ್ನು ಸರ್ಕಾರ ತಕ್ಷಣವೇ ರೈತರಿಂದ ಖರೀದಿಸಿ ಅವರಿಗೆ ಬೆಂಬಲ ಬೆಲೆನೀಡಬೇಕು

೪.    ಕೃಷಿಯ ಆಘಾತಕ್ಕೊಳಗಾಗಿರುವ ರೈತ ಸಮುದಾಯಕ್ಕೆ ಆತ್ಮ ವಿಶ್ವಾಸ ನೀಡುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು

೫.    ಎಲ್ಲಾ ಬಡ ಹಾಗೂ ಮಧ್ಯಮ ರೈತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು ಹಾಗೂ ಖಾಸಗಿ ಸಾಲದ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. (ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಮನ್ನಾ ಮಾಡುವ ಸರ್ಕಾರಗಳಿಗೆ ರೈತರ ಕೆಲವು ನೂರು ಕೋಟಿಗಳನ್ನು ಮನ್ನಾಮಾಡುವುದು ಖಂಡಿತಾ ಹೆಚ್ಚಲ್ಲ)

೬.    ಮುಂದಿನ ಕೃಷಿಗೆ  ಬಡ್ಡಿ ರಹಿತ ಸಾಲ ಕೊಡಬೇಕು.

೭.    ಕೃಷಿಗೆ ಅಗತ್ಯವಾದ ಬೀಜ ಗೊಬ್ಬರ ಇತ್ಯಾದಿಗಳಿಗೆ ಸಬ್ಸಿಡಿ ಕೊಡಬೇಕು.

೮.    ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆ ನೀಡಬೇಕು. ಹಾಗೂ ವಿಳಂಬಮಾಡದೆ ಖರೀದಿ ಕೇಂದ್ರಗಳನ್ನು ತೆರೆದು ಖರೀದಿಸಬೇಕು.

೯.    ಆಹಾರ ಧಾನ್ಯಗಳ ಸಗಟು ಮತ್ತು ಚಿಲ್ಲರೆ ವ್ಯಾಪರವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು.
೧೦.    ರೈತರನ್ನು  ಇಂತಹ ದುಸ್ಥಿತಿಗೆ ತಳ್ಳಿರುವ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ಕೈಬಿಡಬೇಕು.

೧೧.    ಮಳೆಯಾಗದ ಜಿಲ್ಲೆಗಳಲ್ಲಿ ಬರಗಾಲ ಕಾಮಗಾರಿ ಕೈಗೊಳ್ಳಬೇಕು

೧೨.    ರೈತರ ಬಗ್ಗೆ ಹಗುರವಾಗಿ ಮಾತನಾಡುವ ಮತ್ತು ನಿಷ್ಕಾಳಜಿಯ ಮಂತ್ರಿಗಳಿಗೆ ಗಂಭೀರ ಎಚ್ಚರಿಕೆ ಕೊಡಬೇಕು ಅವರು ತಿದ್ದಿಕೊಳ್ಳದಿದ್ದರೆ ಅವರನ್ನು ಸಂಪುಟದಿಂದ ತೆಗೆದುಹಾಕಬೇಕು.

೧೩.    ಅಕಾಲಿಕ ಆಲಿಕಲ್ಲು ಮಳೆಗೆ ನಷ್ಟ ಅನುಭವಿಸಿದ ರೈತರಿಗೆ ಈ ಕೂಡಲೇ ಪರಿಹಾರ ನೀಡಬೇಕು.ಸಿದ್ದಲಿಂಗರೆಡ್ಡಿ

Please follow and like us:

Leave a Reply