ಶಾಲಾ ಮಕ್ಕಳಿಗೆ ಬಿಸಿಊಟದ ತಟ್ಟೆ

 ಕೆನರಾ ಬ್ಯಾಂಕ ಕೊಪ್ಪಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹ್ಯಾಟಿ ಸಂಯುಕ್ತ ಆಶ್ರಯದಲ್ಲಿ ಸುಬ್ಬರಾವ್ ಪೈ ಜನ್ಮ ದಿನೊತ್ಸವ  ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹ್ಯಾಟಿಯಲ್ಲಿ ಹಮ್ಮಿಕೊಳ್ಳಗಿತ್ತು. ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಲೆಯ ಮುಖ್ಯ ಶಿಕ್ಷಕರಾದ  ಹನುಮಪ್ಪ ಮೂಲಿಮನಿ   ವಹಿಸಿದ್ದರು   ಕೆನರಾ ಬ್ಯಾಂಕ ವತಿಯಿಂದ ಶಾಖೆಯ  ಪ್ರಭಂದಕರಾದ ಕೆ.ವಿ.ಆರ್ ಮೂರ್ತಿ  ಅಥಿತಿ ಸ್ಥಾನವನ್ನು ವಹಿಸಿದ್ದರು ಮತ್ತು  ಶಾಲಾ ಮಕ್ಕಳಿಗೆ ಬಿಸಿಊಟದ ತಟ್ಟೆಯನ್ನು ವಿತರಿಸಿದರು  ಮತ್ತು ಕಾರ್ಯಕ್ರಮದ ಅತಿಥಿಸ್ಥಾನವನ್ನು  ಕ್ಷೇತ್ರ ಅಧಿಕಾರಿಗಳಾದ  ಚಂದ್ರಶೇಖರ  ಶೆಟ್ಟಿ ವಹಿಸಿಕೊಂಡಿದ್ದರು ಅತಿಥಿಗಳಾಗಿ  ವಿ.ಎಸ್. ದೇಶಪಾಂಡೆ, ಎಸ್.ಡಿ.ಎಮ್.ಸಿ. ಸದಸ್ಯರು ಮತ್ತು  ರಾಮನಗೌಡ ಪೋಲಿಸಪಾಟೀಲ, ದೇವಪ್ಪ ಬಾದರಬಂಡಿ, ಮತ್ತು ಗ್ರಾಮದ ಗಣ್ಯರು ಶಾಲಾ ಶಿಕ್ಷಕರು  ಉಪಸ್ಥಿತರಿದ್ದರು. ಎಮ್.ಬಿ. ಕನ್ನುರ ಸ್ವಾಗತಿಸಿದರು, ಸಿ.ಬಿ.ಅಲ್ಲಿಪೂರ ವಂದನಾರ್ಪಣೆ ಮಾಡಿದರು.

Leave a Reply