ಧರಣಿ ನಿರತ ವಿಕಲಚೇತನರಿಗೆ ತಕ್ಷಣ ರಿಯಾಯತಿ ಬಸ್ ಪಾಸ್ ವಿತರಿಸಿ: ಸಂಸದ ಶಿವರಾಮಗೌಡ

 ಕೊಪ್ಪಳದಲ್ಲಿ ಧರಣಿ ನಿರತ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರಿಗೆ ತಕ್ಷಣ ರಿಯಾಯತಿ ಬಸ್ ಪಾಸ್‌ಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಕೊಪ್ಪಳ ಲೋಕಸಭಾ ಸದಸ್ಯರಾದ  ಶಿವರಾಮಗೌಡರವರು ಮಾನ್ಯ ಸಾರಿಗೆ ಸಚಿವರಾದ  ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದವರು ಮನವಿ ಸಲ್ಲಿಸಿ, ೧೯೯೫ರ ಅಂಗವಿಕಲರ ಅಧಿನಿಯಮದನ್ವಯ ಬುದ್ದಿಮಾಂದ್ಯ, ಕುಷ್ಟರೋಗ ನಿವಾರಿತರು ಹಾಗೂ ದೃಷ್ಟಿದೋಷ ಇರುವವರು ವಿಕಲಚೇತನರೆಂದು ಗುರುತಿಸಲ್ಪಡುತ್ತಿದ್ದು, ಇವರಿಗೆ ರಿಯಾಯತಿ ಬಸ್ ಪಾಸ್‌ಗಳನ್ನು ಬೇರೆ ಜಿಲ್ಲೆಗಳಲ್ಲಿ ವಿತರಿಸುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಸದರಿ ವಿಕಲಚೇತನರಿಗೆ ರಿಯಾಯತಿ ಬಸ್ ಪಾಸ್‌ಗಳನ್ನು ವಿತರಿಸದೇ ತಾರತಮ್ಯ ಮಾಡುತ್ತಿದ್ದು, ಕೂಡಲೇ ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಕೋರಿರುತ್ತಾರೆ. ಸದರಿ ವಿಕಲಚೇತನರು ತಮಗೆ ರಿಯಾಯತಿ ಬಸ್ ಪಾಸ್ ವಿತರಿಸುವಂತೆ ಆಗ್ರಹಿಸಿ ಅನಿರ್ದಿಷ್ಠಾವಧಿ ಧರಣಿ ಕುಳಿತಿದ್ದು, ಈಗಾಗಲೇ ನಾಲ್ಕು ದಿನಗಳು ಕಳೆದಿದ್ದು, 
ಕಾರಣ, ಬುದ್ದಿಮಾಂದ್ಯ, ಕುಷ್ಟರೋಗ ನಿವಾರಿತರು ಹಾಗೂ ದೃಷ್ಟಿದೋಷ ಇರುವ ವಿಕಲಚೇತನರಿಗೆ ನಮ್ಮ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ರಿಯಾಯತಿ ಬಸ್ ಪಾಸ್‌ಗಳನ್ನು ವಿತರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ಶಿವರಾಮಗೌಡರು ಕೋರಿರುತ್ತಾರೆ.
Please follow and like us:
error