You are here
Home > Koppal News > ಸುಭಾಷ್‌ಚಂದ್ರಬೋಸ್ ಎಲ್.ಪಿ.ಇವರಿಗೆ ಸಿ.ಪಿ.ಐ.ಎಂ.ಎಲ್. ಬೆಂಬಲ

ಸುಭಾಷ್‌ಚಂದ್ರಬೋಸ್ ಎಲ್.ಪಿ.ಇವರಿಗೆ ಸಿ.ಪಿ.ಐ.ಎಂ.ಎಲ್. ಬೆಂಬಲ

ದಿ  ೨೦-೬-೨೦೧೪ ರಂದು ನಡೆಯುವ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯಲ್ಲಿ ಎಡಪಕ್ಷಗಳು ಮತ್ತು ಪ್ರಜಾಸತ್ತಾತ್ಮಕವಾದಿಗಳು ಸುಭಾಷಚಂದ್ರಬೋಸ್‌ರವರನ್ನು ಬೆಂಬಲಿಸಬೇಕು. ಶಿಕ್ಷಕರ ಚುನಾವಣೆಯಲ್ಲಿ ಕಪ್ಪು ಹಣದ ರಾಜಕಾರಣಿಗಳು ಸ್ಪರ್ಧಿಸಿರುವುದರಿಂದ ಶಿಕ್ಷಕರ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿದೆ. ಆದ್ದರಿಂದ ನಿಜವಾದ ಶಿಕ್ಷಕರಿಗೆ ಮತನೀಡುವ ಮೂಲಕ ಕಾರ್ಪೊರೇಟ್ ಬಂಡವಾಳಶಾಹಿ ಅಭ್ಯರ್ಥಿಗಳನ್ನು ಸೋಲಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಸಿ.ಪಿ.ಐ.ಎಂ.ಎಲ್. ಪಕ್ಷದ ಕಾರ್ಯದರ್ಶಿ ಭಾರದ್ವಾಜ್ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಎಂ.ಎಲ್.ಸಿ. ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವುದು ಆಸೆ, ಆಮೀಷಗಳನ್ನೊಡ್ಡುತ್ತಿರುವುದು ಬಹಿರಂಗಗೊಂಡಿದೆ. ಎಡಪಂಥೀಯ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳು ಇರುವ ಶಿಕ್ಷಕ ಮತದಾರರು ಸುಭಾಷಚಂದ್ರಬೋಸ್‌ರವರನ್ನು ಬೆಂಬಲಿಸಿ ಇನ್ನೀತರ ವರ್ಗಗಳ ಶಿಕ್ಷಕರಿಗೆ ಕಾರ್ಪೋರೇಟ್ ಅಭ್ಯರ್ಥಿಗಳಿಂದ ಆಗುವ ಅನಾಹುತಗಳನ್ನು ತಿಳಿಸಿ ನಿಜವಾಗಿ ಶಿಕ್ಷಕರಿಗಾಗಿ ದುಡಿಯುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು  ಹೈದ್ರಾಬಾದ್ ಕರ್ನಾಟಕ ಆರು ಜಿಲ್ಲೆಗಳ ಶಿಕ್ಷಕ ಮತದಾರರಲ್ಲಿ ಸುಭಾಷಚಂದ್ರಬೋಸ್‌ರವರಿಗೆ ಪ್ರಥಮ ಪ್ರಾಶಸ್ತ್ಯ ಮತನೀಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Top