ಕಲೆಯ ಪ್ರೋತ್ಸಾಹವೇ ಸಂಸ್ಕೃತಿಯ ಉಳಿವಿಗೆ ಹಾದಿ – ಜಡಿಯವರ.

ಕೊಪ್ಪಳ ಸೆ. ೨೦. ಕಲೆಯ ಪ್ರೋತ್ಸಾಹದಿಂದ ಈ ನಾಡಿನ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಳ್ಳಲು ಸಾಧ್ಯ, ಇಲ್ಲವಾದಲ್ಲಿ ನಶಿಸಿಹೋಗುವದು ಎಂದು ನಿವೃತ್ತ ಪ್ರಾಂಶುಪಾಲ ಸಿ. ವಿ. ಜಡಿಯವರ ಹೇಳಿದರು. ಅವರು ಕಿನ್ನಾಳ ರಸ್ತೆಯ ಶ್ರೀ ಏಕದಂತ ಮಿತ್ರಮಂಡಳಿ ವತಿಯಿಂದ ಗಣೇಶ ಪ್ರತಿಷ್ಠಾಪನೆಯ ನಿಮಿತ್ಯ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಇತ್ತೀಚೆಗೆ ವೀರ ಮರಣವನ್ನು ಅಪ್ಪಿದ ಮಲ್ಲಪ್ಪ ಚನ್ನಳ್ಳಿರವರ ಪತ್ನಿಯನ್ನು ಸನ್ಮಾನಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಸಾಹಿತ್ಯ ಸಂಗೀತ ಕಲೆಗಳನ್ನು ಇಂಥಹ ಕಾರ್ಯಕ್ರಮಗಳ ಮೂಲಕ ಉಳಿಸಿವದು, ಸುತ್ತಲಿನ ಜನರನ್ನು ಒಂದೆಡೆ ಸೇರಿಸಿ ಮನರಂಜನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿಸಿಕೊಡುವದು ಅತ್ಯಂತ ಉತ್ತಮ ಹಾಘೂ ಶ್ರೇಷ್ಠ ಕೆಲಸ ಎಂದರು. ವೀರಯೋ
ಕಾರ್ಯಕ್ರಮದ ಮುಖ್ಯ ಸಂಘಟಕ ಮಂಜುನಾಥ ಡಂಬಳ ಸ್ವಾಗತಿಸಿದರು, ಮಂಜುನಾಥ ಜಿ. ಗೊಂಡಬಾಳ ಮತ್ತು ದೇವಪ್ಪ ಕಟ್ಟಿಮನಿ ಜಂಟಿಯಾಗಿ ನಿರೂಪಿಸಿದರು, ರಾಜು ಪುರಾಣಿಕಮಠ ವಂದಿಸಿದರು.

ಧ ಮಲ್ಲಪ್ಪ ಚನ್ನಳ್ಳಿಯವರ ಪತ್ನಿ ಜಯಶ್ರೀಯವರನ್ನು ಸನ್ಮಾನಿಸಿ ಟೀಚರ್‍ಸ್ ಕಾಲೋನಿ ನಿವಾಸಿ ಜಯಲಕ್ಷ್ಮೀ ರಮೇಶರಡ್ಡಿರವರು ೫೦೦೧ ರೂಪಾಯಿಗಳ ಧನಸಹಾಯವನ್ನು ಸಂಘದ ಪರವಾಗಿ ನೀಡಿದರು.  ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಸ್. ಬಿ. ರಾಜೂರ, ಪ್ರಾಚಾರ್ಯ ವೀರಪ್ಪ ಮಂಡಸೊಪ್ಪಿ, ನಿವೃತ್ತ ಪೋಲಿಸ್ ಅಧಿಕಾರಿ ಲಿಂಗಪ್ಪ ಯಳಬೆಂಚಿ, ಯಂಕಪ್ಪ ಬಾರಕೇರ, ಬಸವರಾಜ ಸವಡಿ, ಪ್ರಭುಗೌಡ ಪಾಟೀಲ, ಎಂ. ಕೆ. ಹಿರೇಮಠ, ಎಸ್. ಎನ್. ತಿಮ್ಮನಗೌಡ್ರ, ಎಂ. ಬಿ. ಪಾಟೀಲ, ಆರ್. ಎಸ್. ಮುತ್ತಾಳಗೌಡ್ರ, ಬಸವರಾಜ ವಣಗೇರಿ, ನಾಗರಾಜ ಬಾರಕೇರ, ಮತ್ತಿತರರು ಉಪಸ್ಥಿತರಿದ್ದರು.

Please follow and like us:
error