ಕಿಡದಾಳ ಗ್ರಾಮದಲ್ಲಿ ಗಿಣಿಗೇರಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಗಳ ಕಾರ್ಯಕ್ರಮ.

ಕೊಪ್ಪಳ-18-  ತಾಲೂಕಿನ ಕಿಡದಾಳ ಗ್ರಾಮದಲ್ಲಿ ಗಿಣಿಗೇರಿ ಕ್ಲಸ್ಟರ ಮಟ್ಟದ ಪ್ರತಿಭಾ
ಕಾರಂಜಿ ಸ್ಪರ್ದೆಗಳನ್ನು ಜಲವರ್ದಿನಿ ಬೊರವೆಲ್ ಅಧ್ಯಕ್ಷರಾದ ಹನುಮಂತಪ್ಪ ಬಿಡನಾಳ
ಉದ್ಘಾಟಿಸಿ ಮಾತನಾಡಿ ಓದಿರಿ ಓದಿರಿ ಓದಿರಿ  ಎಂದು ಮಕ್ಕಳ ಮೇಲೆ ಒತ್ತಡ ಹಾಕದೆ ಕೆಲವು
ಸಮಯ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳನ್ನು ಎಲೆ ಮರೆಯ ಕಾಯಂತಿರುವ ಬಾಲಪ್ರತಿಭೆಗಳನ್ನು
ಹೊರತನ್ನಿ ಎಂದು ಶಿಕ್ಷಕರಲ್ಲಿ ಪಾಲಕರಲ್ಲಿ ಮನವಿ ಮಾಡಿದರು.
    ಈ ಸಮಾರಂಭದಲ್ಲಿ
ಹನುಮಂತಪ್ಪ ಇಂದರಗಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಜವಬ್ದಾರಿ ಶಿಕ್ಷಕರು
ತಾರತಮ್ಯ ಮಾಡದೇ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಎಂದರು.ತೀರ್ಪುಗಾರರಿಗೆ ಹಾಗೂ
ಅತಿಥಿಗಳಿಗೆ ಪುಸ್ತಕ ಹಾಗೂ ಗುಲಾಬಿ ಹೂ ನೀಡುವ ಮೂಲಕ ಸ್ವಾಗತವನ್ನು ಮುಖ್ಯಶಿಕ್ಷಕ ಉಮೇಶ
ಸುರ್ವೆರವರು ಸ್ವಾಗತಿಸಿದರು.ನೀರೂಪಣೆಯನ್ನು ಕಾಳಪ್ಪ ನಾಯಕ, ಪ್ರಾರ್ಥನೆಯನ್ನು
ಪಕೀರಪ್ಪ ಶಿಕ್ಕರು ನಿರ್ವಹಿಸಿದರು.
    ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು
ಕನಕನಗೌಡ ಪಾಟೀಲ್ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಎಮ್.ಹೆಚ್.ಕುರಿ ಶಿಕ್ಷಣ ಸಂಯೋಜಕರು,
ನಾಗರಾಜ ಬೇವಿನಮರದ, ಬೇವಿನಾಳಗೌಡ, ರಾಮನಗೌಡ, ಗ್ರಾ,ಪಂ ಸದಸ್ಯರಾದ ಶಾರಮ್ಮ ಪಾಟೀಲ್,
ಮಲ್ಲಪ್ಪ ಬಳ್ಳಾರಿ, ರಮೇಶ ಬಳ್ಳಾರಿ, ಬಸಪ್ಪ ಪೂಜಾರ, ಗ್ರಾ.ಪಂ ಉಪಾಧ್ಯಕ್ಷ ಗ್ಯಾನಪ್ಪ ,
ಸೋಮಪ್ಪ ಗುರಿಕಾರ, ಯಮನಪ್ಪ ಹರಿಗೇರಿ, ರಮೇಶ ಮುಂಡರಗಿ, ಹುಲಗಪ್ಪ ದಂಡಿನವರ,
ಸಿ.ಆರ್.ಪಿ ಶರಣಪ್ಪ ಬಿಸನಾಳ ಇತರರು ಉಪಸ್ಥಿತರಿದ್ದರು.

Related posts

Leave a Comment