ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷದ ಮುಖಂಡರ ಮೇಲೆ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯ : ಸಿ.ಪಿ.ಐ.ಎಂ.ಎಲ್.

ಮುಖ್ಯ ವಾಹಿನಿಗೆ ಬರಲು ಸಿದ್ಧರಿರುವ ನೂರ್ ಶ್ರೀಧರ, ಸಿರಿಮನೆ ನಾಗರಾಜ್ ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷದ ಮುಖಂಡರ ಮೇಲೆ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು  ಒತ್ತಾಯ : ಸಿ.ಪಿ.ಐ.ಎಂ.ಎಲ್.
ಮುಖ್ಯಮಂತ್ರಿಗಳು ಮಾನ್ವಿಯ ಪತ್ರಿಕಾ ಗೋಷ್ಠಿಯಲ್ಲಿ ಶಸ್ತ್ರ ತ್ಯಜಿಸಿ ಮುಖ್ಯ ವಾಹಿನಿಗೆ ಬರಲು ಸಿದ್ಧರಿರುವ ನಕ್ಸಲರ ಬಗ್ಗೆ ಚರ್ಚಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಕಳೆದ ೬ ತಿಂಗಳಿನಿಂದ ಕ್ರಾಂತಿಕಾರಿ ಕಮ್ಯನಿಷ್ಟ ಪಕ್ಷದ ಮುಖಂಡರಾದ ನೂರ್ ಜುಲ್ಫೀಕರ್ ಮತ್ತು ಸಿರಿಮನೆ ನಾಗರಾಜು ರವರ ಮೇಲೆ ಇರುವ ಪ್ರಕರಣಗಳನ್ನು  ಹಿಂಪಡೆದು ಅವರಿಗೆ ಮುಖ್ಯ ವಾಹಿನಿಗೆ ಬಂದು ಬರಲು ಅನುಕೂಲ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಅವರುಗಳ ಮೇಲೆ ಇರುವ ಪ್ರಕರಣಗಳನ್ನು ವಾಪಸ್ಸು ಪಡೆದು ಅವರು ಮುಖ್ಯ ವಾಹಿನಿಗೆ ಬರಲು ಅನುಕೂಲ ಮಾಡಿಕೊಡಬೇಕೆಂದು ಸಿ.ಪಿ.ಐ.ಎಂ.ಎಲ್. ಲಿಬರೇಷನ್ ರಾಜ್ಯ ಉಸ್ತುವಾರಿ ವಿ.ಶಂಕರ ಮತ್ತು ಹೈದ್ರಾಬಾದ್ – ಕರ್ನಾಟಕ ಪ್ರಾಂತ ಕಾರ್ಯದರ್ಶಿ ಭಾರದ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷದ ಎಲ್ಲಾ ಸದಸ್ಯರು ಮುಖ್ಯ ವಾಹಿನಿಗೆ ಬಂದು ಜನರ ಮಧ್ಯೆ ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಸಂಘಟನೆ ಮುಖ್ಯ ನಾಯಕರುಗಳಾದ ನೂರ್ ಜುಲ್ಫೀಕರ್ ಮತ್ತು ಸಿರಿಮನೆ ನಾಗರಾಜ ಇವರುಗಳು ಮೇಲೆ ಇರುವ ಸುಳ್ಳು ಪ್ರಕರಣಗಳನ್ನು ಸರಕಾರ ಹಿಂಪಡೆಯದೇ ಇರುವುದರಿಂದ ಅವರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರಕಾರ ಅವರ ಮೇಲಿರುವ ಪ್ರಕರಣ ಹಿಂಪಡೆದು ಅವರುಗಳುಮುಖ್ಯ ವಾಹಿನಿಯಲ್ಲಿ ಬರಲು ಅನುಕೂಲ ಮಾಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷ ಮುಖ್ಯ ವಾಹಿನಿಗೆ ಬಂದು ಜನರ ಮಧ್ಯೆ ಕೆಲಸ ಮಾಡಲು ನಿರ್ಧರಿಸಿರುವುದು ಸಿ.ಪಿ.ಐ.ಎಂ.ಎಲ್. ಪಕ್ಷ ಸ್ವಾಗತಿಸುತ್ತದೆ ಎಂದು ಭಾರದ್ವಾಜ  ತಿಳಿಸಿದ್ದಾರೆ.

Leave a Reply