ಮಕ್ಕಳಿಗೆ ಅವರ ಬಾಲ್ಯ ಕೊಡಿ

 ಮಕ್ಕಳಿಗೆ ಅವರ ಬಾಲ್ಯ ಕೊಡಿ ಎಂಬ ಹೆಸರಿನ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಗರದ ವಾಲ್ಮಿಕಿಭವನದಲ್ಲಿ ದಿನಾಂಕ ೧೦-೪-೨೦೧೫ ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಗುಣಮಟ್ಟದ ಶಿಕ್ಷಣ , ಆಹಾರ ಭದ್ರತೆ ಹಿಂಸೆಗಳಿಂದ ರಕ್ಷಣೆ- ಮುಂತಾದ ಮಕ್ಕಳ ಹಕ್ಕುಗಳ ಕುರಿತು ವಿಸ್ತಾರ ಸಂಸ್ಥೆಯ CREA ªÀÄvÀÄÛ CBCE   ಯೋಜನೆಗಳು ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯ ೫೫ ಹಳ್ಳಿಗಳಲ್ಲಿ ಕಳೆದ ಅರು ತಿಂಗಳಿನಿಂದ ನಡೆಸಿದ ಮಕ್ಕಳ ಮತ್ತು ಶಿಕ್ಷಕರ ಅಭಿಪ್ರಾಯ ಸಂಗ್ರಹದ ಅಧ್ಯಯನ ವರದಿಯನ್ನು ಈ ದಿನ ಬಿಡುಗಡೆ ಮಾಡಲಾಯಿತು.  ವಿಠ್ಠಪ್ಪ ಗೋರಂಟ್ಲಿ ಪುಸ್ತಕ ಬಿಡುಗಡೆ ಮಾಡಿ, ವಿಸ್ತಾರ್ ಕಾರ್ಯಗಳನ್ನು ಶ್ಲಾಘಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರಜ್ನಾವಂತರೆಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.  ಈ ಕಾರ್ಯಕ್ರಮದಲ್ಲಿ ಶರಣಪ್ಪ ಮಕ್ಕಳ ಸಹಾಯವಾಣಿ, ಬಸಪ್ಪ SಎPU , ರಮೇಶ ಸಮೂಹ ಸಾಮರ್ಥ್ಯ ,  ಮಾರುತಿ ಬಾಲ ಕಾರ್ಮಿಕ ಇಲಾಖೆ, ಮಕ್ಕಳ ಪ್ರತಿನಿಧಿಗಳಾಗಿ ಶಕುಂತಲಾ-ಬಾಂಧವಿ ಶಾಲೆ, ಗವಿಸಿದ್ದಪ್ಪ ಕದ್ರಳ್ಳಿ ಶಾಲೆ, ಕಮಲಾಕ್ಷಿ ಯಲಮಗೇರಿ ಭಾಗವಹಿಸಿದ್ದರು. 
ಸಂಯೋಜಕ ಸುಂಕಪ್ಪ ಮೀಸಿ ಸ್ವಾಗತಿಸಿದರು. ಸುಧಾಕರ್ ವಿಸ್ತಾರ್ ಸಂಸ್ಥೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಿಯಪ್ಪ ವಿಸ್ತಾರ್ ಸಂಸ್ಥೆ ಕಾರ್ಯಕ್ರಮ ನಿರೂಪಿಸಿದರು. ನಾಜರ್ ಪಿ.ಎಸ್ ಹಾಜರಿದ್ದರು. 
Please follow and like us:
error

Related posts

Leave a Comment