ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊಪ್ಪಳ ಸಮೀಪದ ಕೆಪಿಆರ್ ಪಟಿ೯ಲೈಜರ್ ಲಿಮಿಟೆಡ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ತಾಲೂಕಿನ ಕುಣಕೇರಿ ತಾಡಾದಲ್ಲಿ ಇತ್ತೀಚಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ರೋಗಗಳನ್ನು ತಡೆಯಲು ಮುಂಜಾಗತ ಕ್ರಮದ ಬಗ್ಗೆ ಕುರಿತು ಶಿಬಿರದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಸುಮಾರು ೬೦೦ಕ್ಕೂ ಹೆಚ್ಚು ರೋಗಿಗಳಿಗೆ ಇದೇ ಸಂದಭ೯ದಲ್ಲಿ ಉಚಿತ ಚಿಕಿತ್ಸೆ  ನೀಡಲಾಯಿತು. ಕೆಪಿಆರ್ ಕಂಪನಿಯ ಮುಖ್ಯಸ್ಥ ಕೆ. ವೆಂಕಟರಡ್ಡಿ, ಜನರಲ್ ಮ್ಯಾನೇಜರ ಎಂ. ಸತ್ಯನಾರಾಯಣ, ಮ್ಯಾನೇಜರ್ ಎಸ್. ಶ್ರೀನಿವಾಸರಡ್ಡಿ , ಪಿ. ಚಂದ್ರಶೇಖರ ರಡ್ಡಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪ್ರದಾನ ಕಾಯ೯ದಶಿ೯ ಡಾ. ಶ್ರೀನಿವಾಸ ಹ್ಯಾಟಿ, ವೈಸ್? ಚೇರ್‌ಮನ್ ಡಾ.ಸಿ. ಎಸ್ ಕರಮುಡಿ, ಡಾ. ಎಸ್,ಎಸ್, ಶಿರೂರಮಠ, ಖಜಾಂಚಿ ಸುಧೀರ ಅವರಾದಿ, ಶರಣಬಸನಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ, ಯಮನೂರಪ್ಪ, ಪರುಶರಾಮ್ ಸೇರಿದಂತೆ ಇತರ ಮುಖಂಡರು ಶಿಬಿರದಲ್ಲಿ ಉಪಸ್ಥಿತರಿದ್ದರು.

Related posts

Leave a Comment