You are here
Home > Koppal News > ಹಂಪಿ ವಿಶ್ವವಿದ್ಯಾಲಯವನ್ನು ರಕ್ಷಿಸಬೇಕು

ಹಂಪಿ ವಿಶ್ವವಿದ್ಯಾಲಯವನ್ನು ರಕ್ಷಿಸಬೇಕು

ಕೊಪ್ಪಳ : ಹಂಪಿ ವಿಶ್ವವಿದ್ಯಾಲಯದ ಜಮೀನನ್ನು ವಿಜಯನಗರ ಪುನರುತ್ಥಾನ ಟ್ರಸ್ಟ್ ಗೆ ನೀಡಿರುವುದನ್ನು ವಿರೋಧಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಾಹಿತ್ಯ ಭವನದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರರರಿಗೆ ಮನವಿ ಅರ್ಪಿಸಿದರು. ಭೂ ಮಾಪಿಯಾಕ್ಕೆ ಜಮೀನನ್ನು ನೀಡುವುದನ್ನು ತಡೆಗಟ್ಟಬೇಕು ಹಂಪಿ ವಿಶ್ವವಿದ್ಯಾಲಯವನ್ನು ರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೂ ಮೊದಲು ವಿವಿದ ಸಂಘಟನೆಗಳವರು ಸೇರಿಕೊಂಡು ಜನಾರ್ಧನ ರೆಡ್ಡಿಯ ಪ್ರತಿಕೃತಿ ದಹನ ಮಾಡಿದರು. ಅಭಿವೃದ್ದಿಯ ಹೆಸರಿನಲ್ಲಿ ಸರಕಾರ ವಿಶ್ವವಿದ್ಯಾಲಯಕ್ಕೆ ನೀಡಿರುವ ಜಮೀನನ್ನು ಭೂಮಾಪಿಯಾದವರಿಗೆ ನೀಡುತ್ತಿದೆ. ಹಂಪಿ ವಿಶ್ವವಿದ್ಯಾಲಯ ಕನ್ನಡಿಗರ ಹೆಮ್ಮೆಯ ,ಅಭಿಮಾನದ ಸಂಕೇತ ಇದನ್ನು ಉಳಿಸಿ ಬೆಳೆಸಬೇಕೇ ಹೊರತು ಇರುವ ಜಮೀನನ್ನು ಬೇರೆಯವರಿಗೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ, ಪತ್ರಕರ್ತ, ಹೋರಾಟಗಾರ ವಿಠ್ಠಪ್ಪ ಗೊರಂಟ್ಲಿ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಎಲ್ ಜೆ,ಭರದ್ವಾಜ, ಗಾಳೆಪ್ಪ ಮುಂಗೋಲಿ, ಸೇರಿದಂತೆ ಜಿಲ್ಲೆಯ ವಿವಿದ ಪ್ರಗತಿಪರ ಸಂಘಟನೆಗಳವರು ಭಾಗವಹಿಸಿದ್ದರು.

Leave a Reply

Top