ರವಿವಾರದಂದು ಕೊಪ್ಪಳ ಜಿಲ್ಲಾ ಆರನೆಯ ಚುಟುಕು ಸಾಹಿತ್ಯ ಸಮ್ಮೇಳನ.

ಕೊಪ್ಪಳ – ದಿನಾಂಕ ೨೬-೦೭-೨೦೧೫ ರಂದು ರವಿವಾರ ಬೆಳಿಗ್ಗೆ  ೧೦ ಗಂಟೆಗೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಕೊಪ್ಪಳ ತಾಲೂಕಿನ  ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ಆರನೆಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಕೊಪ್ಪಳ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮತ್ತು ರಾಮಕೃಷ್ಣ ವಿವೇಕಾನಂದ  ಆಶ್ರಮದ ಅಧ್ಯಕ್ಷರಾದ ಚೈತನ್ಯಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು  ವಹಿಸಲಿದ್ದಾರೆ.
ಕಲಬುರ್ಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ  ಪ್ರ್ರಾಧ್ಯಾಪಕರಾದ ಡಾ. ಎಸ್ ಎಂ. ಹಿರೇಮಠ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಆಗಮಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಕೊಪ್ಪಳದ ಹಿರಿಯ ಸಾಹಿತಿ  ಈಶ್ವರ ಹತ್ತಿ ಆಯ್ಕೆ ಆಗಿದ್ದಾರೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
    ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿ ಕೊಪ್ಪಳದ ಹಿರಿಯ ಸಾಹಿತಿ ಎಂ.ಎಸ್ ಸವದತ್ತಿ ಆಗಮಿಸಲಿದ್ದಾರೆ. ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ  ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್ ಅರಸ್ ಅವರು ವಿಮಲಾ ಇನಾಮದಾರ ಅವರ ‘ಸಿರಿ ಸಂಪದ’ ಕೃತಿಯನ್ನು ಹಾಗೂ ಕೌಸ್ತುಭ ಪತ್ರಿಕೆ ಸಂಪಾದಕರಾದ ರತ್ನಾ ಹಾಲಪ್ಪಗೌಡ ಅವರು ‘ಚಿಗುರು ಚಿನ್ನ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ಅವರು ಡಾ. ಪಾರ್ವತಿ ಪೂಜಾರ ಅವರ ‘ಶಬ್ದಕ್ಕೆ ನಾಚಿದೊಡೆಂತಯ್ಯ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ನೇಹ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಾ. ಮಹಾಂತೇಶ ಮಲ್ಲನಗೌಡರ ಅವರು ಎ.ಈ ಮುನಿರಾಜು ಅವರ ‘ಪಾಪು (ಪಕ್ಕಾ ಅಪರಂಜಿ)’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಬೆಂಗಳೂರಿನ ಸಹಕಾರ ಇಲಾಖೆಯ ಅಪರ ನಿಬಂಧಕರಾದ  ಎಂ.ಡಿ. ಮಠಪತಿ, ಕೊಪ್ಪಳ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಶಿವಮೂರ್ತಿ, ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಎಸ್.ಆರ್. ನವಲಿಹಿರೇಮಠ, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಪಾನಘಂಟಿ, ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ ಮುನಿಯಪ ಹುಬ್ಬಳ್ಳಿ, ಗುತ್ತಿಗೆದಾರರ ಸಂಘದ ಜಿಲ್ಲಾಅಧ್ಯಕ್ಷರಾದ  ಸುರೇಶ ಭೂಮರಡ್ಡಿ, ಬಳ್ಳಾರಿಯ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ವಿ.ಎಂ.ರಾಜಶೇಖರ, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ಕುಷ್ಟಗಿಯ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್. ಕೆ. ಪಾಟೀಲ,ರೋಟರಿ ಕ್ಲಬ್ ಅಧ್ಯಕ್ಷರಾದ  ಚಂದ್ರಶೇಖರ ಗುರನಗೌಡ ಹಲಗೇರಿ, ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ. ಸಾಧಿಕ್ ಅಲಿ, ರಾಯಚೂರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ, ಆಹೇರಿಯ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಬಂಡೆಪ್ಪ ಜಿ. ತೇಲಿ, ಹಿರಿಯರಾದ ರಾಘವೇಂದ್ರಾಚಾರ್ಯ ಜೋಶಿ, ಸುರೇಶ ರಾಜಲಕ್ಷ್ಮೀ, ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ ೨:೩೦ ಗಂಟೆಗೆ ಸಮ್ಮೇಳನಾಧ್ಯಕ್ಷರ ಕೃತಿಗಳ ಕುರಿತು ವಿಚಾರ ಸಂಕಿರಣ  ಹಮ್ಮಿಕೊಳ್ಳಲಾಗಿದೆ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚನ್ನಪ್ಪ ಸಂಗೋಳಗಿ, ರೋಟರಿ ಕ್ಲಬ್‌ನ ನಿಕಟಪೂರ್ವ  ಅಧ್ಯಕ್ಷರಾದ ಈರಣ್ಣ ಕಮತರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವೀರಣ್ಣ ನಿಂಗೋಜಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಆಕಳವಾಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್.ಪಾಟೀಲ, ಕದಳಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ರೋಟರಿ ಕ್ಲಬ್  ಮಾಜಿ ಗರ್ವನರ ಡಾ|| ಕೆ.ಜಿ.ಕುಲಕರ್ಣಿ, ಸಾಹಿತಿಗಳಾದ ವಿ.ಬಿ.ರಡ್ಡೇರ, ಖ್ಯಾತ ವೈದ್ಯರಾದ ಡಾ|| ಎಂ.ಬಿ. ರಾಂಪೂರ, ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕರಾದ ಶಂಕರಗೌಡ ಹಿರೇಗೌಡರ, ಸರಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬೀರಪ್ಪ ಅಂಡಗಿ ಚಿಲವಾಡಗಿ, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಪನ್ಯಾಸಕರಾದ ಡಾ. ಸುಮತಿ ಹಿರೇಮಠ ಅವರು ಸಮ್ಮೇಳನಾಧ್ಯಕ್ಷರಾದ ಈಶ್ವರ ಹತ್ತಿ ಅವರ ‘ಮಹಾದಾಸೋಹಿ ಶರಣಬಸವೇಶ ಕಾವ್ಯಂ’, ಗಂಗಾವತಿಯ ಕೆ.ಎಸ್.ಸಿ. ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಕೋಲ್ಕಾರ ಅವರು ‘ಗುನ್ನಾಳೇಶನ ವಚನಗಳು’, ಗಂಗಾವತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕರಾದ ಡಾ. ಜಾಜಿ ದೇವೆಂದ್ರಪ್ಪ ಅವರು ‘ಕವೀಶ್ವರನ ತ್ರಿದಗಳು,’ ಕೊಪ್ಪಳದ ಹಿರಿಯ ಸಾಹಿತಿಗಳಾದ ಎ.ಎಂ ಮದರಿ ಅವರು ‘ಕೊಪಣಾಚಲದ ಶ್ರೀಗವಿಸಿದ್ಧೇಶ್ವರ ನಾಟಕ’, ಹೊಸಪೇಟಿ ಆಕಾಶವಾಣಿ ಪ್ರಸಾರ ನಿರ್ವಾಹಕರಾದ ಮಂಜುನಾಥ ಡೊಳ್ಳಿನ ಅವರು ‘ಅಳ್ಳೊಳ್ಳಿ ಬಂತು ಕಳ್ಳೊಳ್ಳಿ’, ಶ್ರೀರಾಮನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಮ್ತಾಜಬೇಗಂ ಅವರು ‘ದೇವಿ ಹಾಗೂ ಇತರೆ ಕಥೆಗಳು’ ಕುರಿತು ಮಾತನಾಡಲಿದ್ದಾರೆ.
    ಸಾಯಂಕಾಲ ೬:೦೦ ಘಂಟೆಗೆ ಕವಿಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಕೆ. ಬಿ. ಬ್ಯಾಳಿ ವಹಿಸಲಿದ್ದಾರೆ. ಉಪನ್ಯಾಸಕರಾದ ಕೆ.ಎಂ.ಲಿಂಗರಾಜ, ಡಿ.ಎಂ ಬಡಿಗೇರ, ಭಾಲ್ಕಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಮುಕ್ತುಂಬಿ, ಹಿರೇಸಿಂದೋಗಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಯಲ್ಲಪ್ಪ ಮಾದಿನೂರ, ಕೊಪಣ ಸಹಕಾರಿ ಸೌಹಾರ್ದ ಸಂಘದ ಅಧ್ಯಕ್ಷರಾದ ಪಂಪಾಪತಿ ಹುಬ್ಬಳ್ಳಿ, ಮಹಿಳಾ ಲೋಕ ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಸಾವಿತ್ರಿ ಮುಜುಂದಾರ, ಜಿಲ್ಲಾ ಕ.ಸಾ.ಪ ಮಾಜಿ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಅಂಗಡಿ, ಸಾಹಿತಿಗಳಾದ ಶರಣಬಸವರಾಜ ಬಿಸರಳ್ಳಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. 
    ಶಿ.ಕಾ.ಬಡಿಗೇರ, ಅಕ್ಬರ್ ಸಿ. ಕಾಲಿಮಿರ್ಚಿ, ಸಿರಾಜ ಬಿಸರಳ್ಳಿ, ಶಂಕ್ರಯ್ಯ ಅಬ್ಬಿಗೇರಿಮಠ, ಮಾರುತೇಶ ಹಟ್ಟಿ, ಶರಣಗೌಡ ಯರದೊಡ್ಡಿ, ಸುರೇಶ ಕಂಬಳಿ, ಸರೋಜಾ ಬಾಕಳೆ, ಪರಮೇಶಗೌಡ ಪಾಟೀಲ, ಶಾಂತಾದೇವಿ ಹಿರೇಮಠ, ಮಹೆಬೂಬ ಮುಲ್ಲಾ, ಸರ್ವಮಂಗಳ ಜಿ.ಹಲಗೇರಿ, ಅಂಬಿಕಾ ನಾರಾಯಣಗೌಡ ಮಾಲಿಪಾಟೀಲ, ಶರಣಪ್ಪ ಉಮಚಗಿ, ಆರ್.ಎಸ್. ಸರಗಣಾಚಾರ, ಹನುಮೇಶ ಗಮಗೇರಿ, ಮಹೇಶ ಬಳ್ಳಾರಿ, ಮಾಲಾ ಬಡಿಗೇರ, ಡಾ. ಸಿದ್ಧಲಿಂಗಪ್ಪ ಕೊಟ್ನೇಕಲ್, ಅನಸೂಯಾ ಜಾಗೀರದಾರ, ಸೋಮನಾಥಯ್ಯ ಕೆ. ಹಣವಾಳ, ಕರಿಸಿದ್ದನಗೌಡ ಮಾಲಿಪಾಟೀಲ ಕವನ ವಾಚಿಸಲಿದ್ದಾರೆ.
    ಸಂಜೆ: ೭:೧೫ ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಕುಕನೂರಿನ ಹಿರಿಯ ಸಾಹಿತಿಗಳಾದ ರವಿತೇಜ ಅಬ್ಬಿಗೇರಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಸರಕಾರಿ ನೌಕರರ ಗೃಹನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಅಭಿನೇತ್ರಿ ಕಲಾ ಬಳಗದ ಅಧ್ಯಕ್ಷರಾದ ಇಂದಿರಾ ಭಾವಿಕಟ್ಟಿ, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎ.ಪಾಲಾಕ್ಷಗೌಡ, ಬಾಲಚಂದ್ರಯ್ಯ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಡಾ|| ಆರ್.ಎಂ. ಪಾಟೀಲ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಈರಪ್ಪ ಬಿಸನಳ್ಳಿ, ಬಿ.ವಿರೂಪಾಕ್ಷಿ, ರೋಣದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಂ.ಬಿ.ದಾನರಡ್ಡಿ, ವಿರಂಚಿ ಕಲಾ ಬಳಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಪಾಟೀಲ, ಲೆಕ್ಕಪರಿಶೋಧನಾಧಿಕಾರಿಯಾದ ಲಕ್ಷ್ಮೀಶ ಬಡಿಗೇರ, ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ, ಲೆಕ್ಕ ಅಧೀಕ್ಷಕರಾದ ಬಿ.ಎ.ಆಡೂರ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿಕೊಂಡಿದ್ದಾರೆ.
Please follow and like us:

Leave a Reply