೬ ರಂದು ೪೭ ನೇ ಬೆಳಕಿನೆಡೆಗೆ

ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ಅಮವಾಸ್ಯೆಯ ಅಂಗವಾಗಿ  ದಿನಾಂಕ ೦೬-೦೮-೨೦೧೩ ಮಂಗಳವಾರ ೪೭ ನೇ  ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು  ಶ್ರೀಮಠದ ಕೆರೆಯ ದಡದಲ್ಲಿ  ಸಾಯಂಕಾಕ ೬.೩೦ ಕ್ಕೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಕಾರಟಗಿಯ  ಅಮರೇಶ ಮೈಲಾಪುರ ಆಗಮಿಸುವರು. ಅಧ್ಯಕ್ಷತೆಯನ್ನು ಕುಕನೂರ ಶ್ರೀಗವಿಸಿದ್ಧೇಶ್ವರ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ  ಗವಿಸಿದ್ದಪ್ಪ ಚಲವಾದಿ ವಹಿಸುವರು.  ಶ್ರೀಮತಿ ಸುಜಾತ ಮಹೇಶ ಓಜನಳ್ಳಿ ಮಂಗಳೂರ ಇವರಿಂದ ಸಂಗೀತ ಸೇವೆಯಿದೆ.  ಕಾರ್ಯಕ್ರಮದ ಭಕ್ತಿ ಸೇವೆಯನ್ನು ಕೊಪ್ಪಳ  ಸಂಸದರ ಆಪ್ತ ಸಹಾಯಕರಾದ ಶ್ರೀನಿವಾಸ ಎನ್ ಜೋಷಿ ವಹಿಸಿರುತ್ತಾರೆ. ಇತ್ತೀಚಿಗೆ ಮಾಧ್ಯಮ ಕ್ಷೇತ್ರದಲ್ಲಿ  ಪ್ರಶಸ್ತಿ ಪಡೆದ ಸುವರ್ಣ ವಾಹಿನಿಯ   ದೊಡ್ಡೇಶ ಯಲಿಗಾರ ಅವರಿಗೆ ಸನ್ಮಾನವಿದೆ.  ಸದ್ಧಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಮಠ ತಿಳಿಸಿದೆ.
  
Please follow and like us:

Leave a Reply