ಪರಿಶಿಷ್ಠ ಪಂಗಡಗಳ ಬೇಡಿಕೆಗಳ ಇಡೇರಿಸದಿದ್ದರೆ ಉಗ್ರ ಹೋರಾಟ-ಮದಕರಿ ನಾಯಕ ಸೇನೆ

ಕೊಪ್ಪಳ: ನಗರದಲ್ಲಿ ಇಂದು ಕರ್ನಾಟಕ ಮದಕರಿ ನಾಯಕ ಸೇನೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿ ಪರಿಶಿಷ್ಠ ಪಂಗಡಕ್ಕೆ ಶೇ ೭.೫% ಮೀಸಲಾತಿ ನೀಡಬೇಕು, ಹಾಗೂ ಈಗಿರುವ ಜಾತಿಗಳನ್ನು ಹೊರತುಪಡಿಸಿ ಯಾವುದೇ ಜಾತಿಗಳನ್ನು ಸೇರಿಸಬಾರದು ಮತ್ತು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಸಮಾನ ಸೌಲಭ್ಯಗಳನ್ನು ನೀಡಬೇಕು. ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ನಿಡಬೇಕು. ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪ.ಪಂಗಡಗಳ ಅಭಿವೃದ್ಧಿ ನಿಗಮದ ಕಛೇರಿಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಬೇಕೆಂದು ಕರ್ನಾಟಕ ಮದಕರಿ ನಾಯಕ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ತಳವಾರ ಕೊಪ್ಪಳ ತಾಲುಕ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ಮಾತನಾಡಿ ಈ ಬೇಡಿಕೆಗಳು ಈಡೇರದಿದ್ದರೆ ಕರ್ನಾಟಕ ಮದಕರಿ ನಾಯಕ ಸೇನೆ ವತಿಯಿಂದ ರಾಜ್ಯಾಂದ್ಯಂತ ಉಗ್ರ ಹೋರಾಟ ಮಾಡಲಾಗುವದೆಂದು ತಿಳಿಸಿದರು. 
ಈ ಪ್ರತಿಭಟನಾ ರ‍್ಯಾಲಿ ಹಾಗೂ ಸಭೆಯಲ್ಲಿ ಕುಷ್ಠಗಿ ತಾಲುಕ ಪಂಚಾಯತ ಸದಸ್ಯ ಶಾಂತಪ್ಪ ಗುಜ್ಜಲ, ಹನಮನಾಳ ಗ್ರಾ,ಪಂ, ಮಾಜಿ ಅಧ್ಯಕ್ಷ ಕಲ್ಲಪ್ಪ ತಳವಾರ, ಕರ್ನಾಟಕ ಮದಕರಿ ನಾಯಕ ಸೇನೆ ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಮೆಣಸಗಿ, ಕೊಪ್ಪಳ ತಾಲೂಕ ಅಧ್ಯಕ್ಷ ಶಮಕರಗೌಡ ಪಾಟೀಲ, ಗಂಗಾವತಿ ತಾಲೂಕ ಅಧ್ಯಕ್ಷ ರಮೇಶ ನಾಯಕ ಜೋಗಿನ, ಯಕಲಬುರ್ಗಾ ತಾಲೂಕ ಗೌರವಾಧ್ಯಕ್ಷ ಹೀರಣಾಕ್ಷಗೌಡ ಪಾಟೀಲ, ಯಲಬುರ್ಗಾ ತಾಲುಕ ಅಧ್ಯಕ್ಷ ಗುಂಡನಗೌಡ ಪಾಟೀಲ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಕೊಪ್ಪಳ ತಾಲೂಕ ಅಧ್ಯಕ್ಷ ಕೋಟೇಶ ತಳವಾರ ಹಾಗೂ ಸಮಾಜದ ಮುಖಂಡರಾದ ಯಮನೂರಪ್ಪ ನಾಯಕ, ರುಕ್ಮಣ್ಣ ಶ್ಯಾವಿ, ಮಂಜುನಾಥ ಗೊಂಡಬಾಳ, ಹಾಗೂ ಜಿಲ್ಲೆಯ ಕರ್ನಾಟಕ ಮದಕರಿ ನಾಯಕ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Please follow and like us:

Related posts

Leave a Comment