fbpx

ಕೇವಲ ಒಂದು ವರ್ಷದಲ್ಲಿ ೬೦೦೦ ಸಾವಿರ ರಕ್ತ ಬ್ಯಾಗ್ ಕೊಪ್ಪಳ ಬ್ಲಡ್ ಬ್ಯಾಂಕ್ ಸಾಧನೆ.

ಕೊಪ್ಪಳ – ೨೦೧೪-೧೫ ನೇ ಸಾಲೀನ ವಾರ್ಷಿಕ ಸಾಮಾನ್ಯ ಮಹಾಸಭೆ ಕೇವಲ ಒಂದು ವರ್ಷದ ಅವಧಿಯಲ್ಲಿ  ೬೦೦೦ ಸಾವಿರ ರಕ್ತ ಬ್ಯಾಗ್ ವಿತರಣೆ ಮಾಡುವ ಮೂಲಕ ಕೊಪ್ಪಳ ಬ್ಲಡ್ ಬ್ಯಾಂಕ್ ಶ್ಲಾಘನೀಯ ಸಾಧನೆ ಮಾಡಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ  ಸಭಾಪತಿ ರಾಜೀವಶೆಟ್ಟಿ  ಬಸ್ರೂರ ಬಣ್ಣಿಸಿದ್ದಾರೆ.ನಗರದ ಜಿಲ್ಲಾ  ಪಂಚಾಯಿತಿ ಜೆ.ಎಚ್. ಪಟೇಲ ಸಭಾಂಗಣದಲ್ಲಿ  ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಒಂದು ವರ್ಷದ ಅವಧಿಯಲ್ಲಿ  ಇಷ್ಟೊಂದು ಸಾಧನೆ ಮಾಡಿ, ರಾಜ್ಯಪಾಲರ ಪ್ರಶಸ್ತಿಯನ್ನು  ಗಳಿಸಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ  ರಾಜ್ಯದಲ್ಲಿಯೇ ಹೆಸರು ಮಾಡಲಿದೆ. ನಾನು ಕೂಡಾ ಈ ಬ್ಲಡ್ ಬ್ಯಾಂಕ್ ಸೇವೆ ಮತ್ತು ಗುಣಮಟ್ಟದ ಕುರಿತು ಕೇಳಿದ್ದು, ಅತ್ಯುತ್ತಮವಾಗಿದೆ. ಇಂಥ ಪ್ರದೇಶದಲ್ಲಿ  ಇಂಥದ್ದೊಂದು ಗುಣಾತ್ಮಕ ಬ್ಲಡ್ ಬ್ಯಾಂಕ್ ತಲೆ ಎತ್ತಿರುವುದು ಹಾಗೂ ಅದರಿಂದ ಜನರ ಜೀವಕ್ಕೆ ಅನುಕೂಲವಾಗುತ್ತಿರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಇದಕ್ಕಾಗಿ ಪರಿಶ್ರಮಿಸುತ್ತಿರುವ ಎಲ್ಲಾ ಪದಾಧಿಕಾರಿಗಳನ್ನು  ನಾನು ಅಭಿನಂದಿಸುತ್ತೇನೆ ಎಂದರು. ಇದಲ್ಲದೆ ಇನ್ನು  ನಾನಾ ಸಮಾಜ ಮುಖಿ ಕಾರ್ಯವನ್ನು  ಈಗಾಗಲೇ ಮಾಡುತ್ತಿರುವ ಕೊಪ್ಪಳ
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇನ್ನಷ್ಟು  ಸಮಾಜಮುಖಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವೆಂದರು. ಇದಕ್ಕಾಗಿ ಅಜೀವ ಸದಸ್ಯರು ಸತತವಾಗಿ ಇದರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಪ್ರಸ್ಥಾವಿಕವಾಗಿ ಮಾತನಾಡಿದ  ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಛೇರಮನ್ ಡಾ. ಕೆ. ಜಿ. ಕುಲಕರ್ಣಿ ಅವರು ಇಲ್ಲಿರುವ ಪದಾಧಿಕಾರಿಗಳು ಅತ್ಯಂತ ಕಾರ್ಯಶೀಲರಾಗಿದ್ದಾರೆ. ಹೀಗಾಗಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು. ನಾನು ಇಲ್ಲಿ ಉತ್ಸವ ಮೂರ್ತಿಯಾಗಿzನೆ ಹೊರತು ಎಲ್ಲವನ್ನು  ಕೆಳ ಹಂತದಲ್ಲಿ ಅವರೇ ಮಾಡುತ್ತಿದ್ದಾರೆ ಎಂದು ನಿರ್ದೇಶಕರ ಕಾರ್ಯವನ್ನು  ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ   ಡಿಎಚ್‌ಓ ಹಾಗೂ ಭಾರತೀಯ ರೆಡ್ ಕ್ರಾಸ ಸಂಸ್ಥೆಯ
 ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಅವರು ಅವರು ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಕೋಶಾಧ್ಯಕ್ಷ  ಸುಧೀರ್ ಅವರಾದಿ ಅವರು ಲೆಕ್ಕಪತ್ರ ಮಂಡನೆ ಮಾಡಿ, ಅನುಮೋದನೆ ಪಡೆದರು.  ನಿರ್ದೇಶಕ ಸೋಮರಡ್ಡಿ  ಅಳವಂಡಿ ಅವರು   ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಡಾ. ಚಂದ್ರಶೇಖರ ಕರಮುಡಿ ಅವರು ವಂದಿಸಿದರು. ಲಕ್ಷ್ಮೀಕಾಂತ ಗುಡಿ ಕೊನೆಯಲ್ಲಿ  ರಾಷ್ಟ್ರಗೀತೆ ಹಾಡಿದರು. ಪ್ರಾರಂಭದಲ್ಲಿ ಸಂಗೀತಾ ದೇಶಪಾಂಡೆ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು.  ಸಂಕಲ್ಪ ಅವರಾದಿ ವಂದೇ ಮಾತರಂ ಗೀತೆ ಹಾಡಿದರು. ನಿದೇರ್ಶಕರಾದ ಗೌರಮ್ಮ ದೇಸಾಯಿ ಹಾಗೂ ರಾಜೇಶ ಯಾವಗಲ್ ಅವರು ಕಾರ್ಯಕ್ರಮ ನಿರೂಪಿಸಿದರು. ೧೯ಕೆಪಿಎಲ್೨೨ ಕೊಪ್ಪಳ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ನಡೆದ  ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವಾರ್ಷಿಕ ಸಭೆಯನ್ನು  ಭಾರೆಸಂಸ್ಥೆ  ಸಭಾಪತಿ ರಾಜೀವ ಶೆಟ್ಟಿ ಉದ್ಘಾಟಿಸುತ್ತಿರುವುದು.

  ಉಪಾಧ್ಯಕ್ಷ  ಡಾ. ಶ್ರೀಕಾಂತ ಬಾಸೂರು ಅವರು ಮಾತನಾಡಿ,  ಬ್ಲಡ್ ಕಾರ್ಯಕ್ಕೆ ನಮ್ಮ ಆರೋಗ್ಯ  ಇಲಾಖೆಯ ಸಂಪೂರ್ಣ ಸಹಕಾರ ಇದೆ. ಕೊಪ್ಪಳದಲ್ಲಿನ ಬ್ಲಡ್ ಬ್ಯಾಂಕ್ ಗುಣಾತ್ಮಕ ಸೇವೆಯನ್ನು ಮಾಡುತ್ತಿದ್ದು, ಇದರಿಂದ ಅದೆಷ್ಟೇ ರೋಗಿಗಳಿಗೆ ಅನುಕೂಲವಾಗಿದೆ ಎಂದರು.

Please follow and like us:
error

Leave a Reply

error: Content is protected !!