೨೧ ರಂದು ಜಿಲ್ಲಾಮಟ್ಟದ ಕ್ರೀಡಾಕೂಕೂಟ.

ಕೊಪ್ಪಳ-20- ನಗರದ ಶ್ರೀಗವಿಸಿದ್ಧೇಶ್ವರ ಪದವಿಪೂರ್ವ ಕಾಲೇಜು ಹಾಗೂ ಉಪನಿದೇರ್ಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಕೂಟಗಳು ದಿನಾಂಕ ೨೧-೦೯-೨೦೧೫ ರಂದು ಸೋಮವಾರ  ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ಜರುಗಲಿವೆ. ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಗಳ ಕೃಪಾ ಆಶಿರ್ವಾದದಿಂದ ಜರುಗಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ  ಸಣ್ಣ ನೀರಾವರಿ ಸಚಿವರು ಆದ  ಸನ್ಮಾನ್ಯ ಶಿವರಾಜ ತಂಗಡಗಿ ಮಾಡಲಿದ್ದಾರೆ. ಜಿ.ಪಂ ಅಧ್ಯಕ್ಷ ಸನ್ಮಾನ್ಯ ಅಮರೇಶ ಕುಳಗಿ ಕ್ರೀಡಾ ಜ್ಯೋತಿ ಬೆಳಗಿಸಲಿದ್ದಾರೆ. ಧ್ವಜಾರೋಹಣವನ್ನು ಸಂಸದರಾದ ಸನ್ಮಾನ್ಯ ಸಂಗಣ್ಣ ಕರಡಿ ನೆರವೇರಿಸಲಿದ್ದಾರೆ.  ಆಧ್ಯಕ್ಷತೆಯನ್ನು ಶಾಸಕರಾದ ಸನ್ಮಾನ್ಯ ರಾಘವೇಂದ್ರ ಹಿಟ್ನಾಳ ವಹಿಸಲಿದ್ದಾರೆ. ಈ ಕಾರ್ಯಕ್ರ

ಮದಲಿ ಕೊಪ್ಪಳ  ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತುಕೊಪ್ಪಳ ಜಿಲ್ಲೆಯ  ಎಲ್ಲ ಶಾಸಕರುಗಳು ಭಾಗವಹಿಸಲಿದ್ದಾರೆ. ಇದೇ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಗವಿಸಿದ್ಧೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾಸಿದ್ದಲಿಂಗಪ್ಪ ಕೊಟ್ನೇಕತಿವರಿಗೆ ಸನ್ಮಾನ ನಡೆಯಲಿದೆ.

Please follow and like us:
error