ಶಾಲಾ ಪ್ರಾರಂಭೋತ್ಸವ

ಕೊಪ್ಪಳ : ಸಮೀಪದ ಭಾಗ್ಯನಗರದ ಜ್ಞಾನ ಬಂಧು ವಸತಿ ಶಾಲೆಯಲ್ಲಿ  ೩೧  ರಂದು ಬೆಳಿಗ್ಗೆ ೯:೩೦ಕ್ಕೆ ಶಾಲಾ ಪ್ರಾರಂಭೋತ್ಸವವು ಜರುಗಿತು.  ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕೆ ರವರು ರಿಬ್ಬನ್ ಕತ್ತರಿಸಿ ಮಕ್ಕಳೊಂದಿಗೆ ಒಳಗೆ ಬಂದು ಸರಸ್ವತಿ ಪೂಜಾ ನೆರೆವೇರಿಸಿದರು.  ನಂತರ ಸಂಸ್ಥೆಯ ಅಧ್ಯಕ್ಷರು ಮಾತನಾಡಿ ಈ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂಬ ಹಾರೈಕೆ ನೀಡಿದರು.  ಉತ್ತಮ & ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಮ್ಮ ಶಾಲೆ ಶ್ರಮಿಸುತ್ತದೆ ಎಂದು ತಿಳಿಸಿದರು. ಶಾಲಾ ಪ್ರಾರಂಭೋತ್ಸವದಲ್ಲಿ, ಎಲ್ಲಾ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪಾಲಕರು & ವಿದ್ಯಾರ್ಥಿಗಳಿ ಸಿಹಿ ಹಂಚಲಾಯಿತು.     
Please follow and like us:
error