ಸಮ್ಮೇಳನದಲ್ಲಿ ಗಮನ ಸೆಳೆದ ಮಾದಿನೂರವರ ತತ್ವಪದ.

ಕೊಪ್ಪಳ-23- ನಗರದ ಸಾಹಿತ್ಯ ಭವನದಲ್ಲಿ ಹೈದ್ರಾಬಾದ್ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರ ಹಾಗೂ ಹೈದ್ರಾಬಾದ್ ಕರ್ನಾಟಕ ನಾಗರೀಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ರವಿವಾರ ನಡೆದ ಹೈದ್ರಾಬಾದ್ ಕರ್ನಾಟಕ ಸಾಂಸ್ಕೃತಿಕ ಕಲಾ ಉತ್ಸವ, ಯುವ ಸಾಹಿತ್ಯ ಸಮ್ಮೇಳನ ನೇರವೇರಿತು. ಈ ಬೃಹತ್ ಕಾರ್ಯಕ್ರಮದಲ್ಲಿ ಮಾದಿನೂರು ಸಂಗೀತ ಕಲಾವಿದ ರಾಮಣ್ಣ ಸಣ್ಣಮಲ್ಲಪ್ಪ ಅವಣ್ಣಿ ತಮ್ಮ ವಚನ ಸಾಹಿತ್ಯ, ತತ್ವಪದಗಗಳನ್ನು ಹಾಡುವ ಮೂಲಕ ಸಮ್ಮೇಳನದಲ್ಲಿ ನೆರೆದ ಪ್ರೇಕ್ಷಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಮ್ಮೇಳನಾಧ್ಯಕ್ಷರಾದ ಜಿಎಸ್. ಗೋನಾಳ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಬಾವಿಕಟ್ಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾನಘಂಟಿ, ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ, ಸಂಯೋಜಕ ಮಹೇಶ ಸುರ್ವೆ ಸೇರಿದಂತೆ ಅನೇಕರು ಹಾಜರಿದ್ದರು.

Leave a Reply