fbpx

ಡಾ|| ವೀರೇಂದ್ರ ಹೆಗ್ಗಡೆಯವರಿಗೆ ಪದ್ಮ ವಿಭೂಷಣ : ಸರ್ಕಾರಕ್ಕೆ ಅಭಿನಂದನೆಗಳು

ಕೊಪ್ಪಳ: ೬೬ನೇ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿದ್ದು ಸ್ವಾಗತಾರ್ಹ ಅವರು ಮಾಡಿದ ಜನಸೇವೆ ಅವಿಸ್ಮರಣಿಯವಾಗಿದೆ. 

          ಪೂಜ್ಯರು ೨೧ ನೇ ವರ್ಷದಲ್ಲಿ ಧರ್ಮಸ್ಥಳದ ೨೧ನೇ ಧರ್ಮಾಧಿಕಾರಿಯಾಗಿ ಜವಬ್ಧಾರಿ ವಹಿಸಿಕೊಂಡು ಆರೋಗ್ಯ,ಶಿಕ್ಷಣ, ಕಲೆ, ಸಾಹಿತ್ಯ, ಗ್ರಾಮೀಣ ಅಭಿವೃದ್ದಿ ಯೋಜನೆ, ರೂಟ್‌ಸೆಟ್ ಸಂಸ್ಥೆ, ಉಚಿತ ಸಾಮೂಹಿಕ ವಿವಾಹ, ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನ, ಆರ್ಯವೇದಕ್ಕೆ ವಿಶೇಷ ಪ್ರೋತ್ಸಾಹ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಗಳ ಅನುಸ್ಟಾನ ಇವು ಹೆಗ್ಗೆಡೆಯವರ ಕಲ್ಪನಾಲಹರಿಯಲ್ಲಿ ಮೂಡಿ ಬಂದ ವಿಶಿಷ್ಟಯೋಜನೆಗಳು ಕರ್ನಾಟಕ ರಾಜ್ಯದ ೨೫ ಜಿಲ್ಲೆಗಳಲ್ಲಿ ಗ್ರಾಮೀಣಾ ಅಭಿವೃದ್ದಿ ಯೋಜನೆ ಅಡಿಯಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಮಾಡಿ ವಿದ್ಯಾರ್ಥಿಗಳಿಗೆ ಮಾಸಿಕ ಶಿಶ್ಯವೇತನ, ಶಾಲಾ ಕಾಲೇಜುಗಳಿಗೆ sಪೀಠೋಪಕರಣಗಳು. ಹಿಂದು ರುದ್ರಭೂಮಿ, ಕಿರುನೀರು ಸರಬರಾಜು ಯೋಜನೆ, ಸಾರ್ವಜನಿಕ ಶೌಚಾಲಯ, ಪ್ರಕೃತಿವಿಕೋಪಕ್ಕೆ ಪರಿಹಾರ, ಮದ್ಯವರ್ಜನ ಶೀಬೀರಗಳು, ಕೃಷಿ ಅಬಿವೃದ್ದಿ ಹೊಸಬಾವಿ ನಿರ್ಮಾಣ ಇನ್ನೂ ಅನೇಕ ಖಾರ್ಯಕ್ರಮಗಳಿಗೆ ೬೮೮೭.೦೦ ಲಕ್ಷ ರೂ ಗಳ ಹಣವನ್ನು ಒದಗಿಸಿದ್ದಾರೆ. ಉತ್ತರ ಕರ್ನಾಟಕದ ಧಾರವಾಡದಲ್ಲಿ ಸುಸರ್ಜಿತವಾದ ಆಸ್ಪತ್ರೆ ನಿರ್ಮಿಸಿ ಈ ಭಾಗದ ಬಡ ಜನರಿಗೆ ಬಹಳಷ್ಟು ಅನೂಕೂಲ ಮಡಿಕೊಟ್ಟಿದ್ದು ಸಾವಿರಾರು ಬಡ ಜೀವಿಗಳನ್ನು ಉಳಿಸಿದ ದೇವರೆಂದರೆ ತಪ್ಪಾಗಲಾರದು. ಇವರಿಗೆ ಆ ಮಂಜುನಾಥ ಸ್ವಾಮಿಯು ಆರ್ಯ ಆರೋಗ್ಯ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇತ್ತಿಚೀಗೆ ಭಾರತ ಸರ್ಕಾರವು ೫೭೦ ರೂಡ್‌ಸೆಟ್ ಸಂಸ್ಥೆಗಳನ್ನು ಪ್ರಾರಂಭಿಸಿದ್ದು ಈ ಂಸ್ಥೆಗಳಿಗೆ ಕೇಂದ್ರ ಸರ್ಕಾರವು ಪೂಜ್ಯರಿಗೆ ಜವಬ್ಧಾರಿಯನ್ನು ಕೊಟ್ಟು ಈ ಎಲ್ಲಾ ಸಂಸ್ಥೆಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಧರ್ಮಸ್ಥಳದ ಕ್ಷೇತ್ರದಲ್ಲಿ ಬೆಳಿಗ್ಗೆ ೬.ಗಂಟೆಯಿಂದ ರಾತ್ರಿ ೧೨.೦೦ ಗಂಟೆಯವರಿಗೆ ಪ್ರತಿಯೊಬ್ಬ ಭಕ್ತಾಧಿಗಳಿಗೆ ಜಾತಿ, ಮತ, ಭೇದವಿಲ್ಲದೆ ಸಹಾನುಭೂತಿಯಿಂದ ಚರ್ಚಿಸಿ ಅವರ ಕಷ್ಟ ಸುಃಖಗಳ್ಲಲಿ ಸ್ಪಂದಿಸುತ್ತಾರೆ ಇಂತಹ ಪರಮ ಪೂಜ್ಯರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಭಕ್ತಾಧಿಗಳ ಪರವಾಗಿ  ಹನುಮಂತಪ್ಪ ಅಂಗಡಿಯವರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೂದಿ ಯವರನ್ನು ಹಾಗೂ ಅವರ ಸಂಪುಟ ಸಹದ್ಯೋಗಿಗಳಲ್ಲಿ  ವಿನಂತಿಸಿಕೊಂಡಿದ್ದಾರೆ.
Please follow and like us:
error

Leave a Reply

error: Content is protected !!