ಬೇಡ, ವಾಲ್ಮೀಕಿ ಅಥವಾ ನಾಯಕ ಎಂದು ಯಾವುದಾದರು ಒಂದನ್ನು ನಮೂದಿಸಿ -ಗುಜ್ಜಲ ಶಿವರಾಮಪ್ಪ

 ಹೊಸಪೇಟೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಾತಿ ಜನಗಣತಿ ನಡೆಸಲಿದ್ದು, ನಾಯಕ ಸಮಾಜದ ಬಂಧುಗಳು ಬೇಡ, ವಾಲ್ಮೀಕಿ ಅಥವಾ ನಾಯಕ ಈ ಮೂರರಲ್ಲಿ ಯಾವುದಾದರೂ ಒಂದನ್ನು ದಾಖಲಿಸಬೇಕೆಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ಕಾರ್ಯದರ್ಶಿ ಗುಜ್ಜಲ ರಘು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ಕಿಚಿಡಿ ಶ್ರೀನಿವಾಸ, ಕಾರ್ಯದರ್ಶಿ ಪೂಜಾರಿ ವೆಂಕೋಬ ನಾಯಕ್ ಮನವಿ ಮಾಡಿಕೊಂಡಿದ್ದಾರೆ.
ರಾಜಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ಆದೇಶದ ಮೇರೆಗೆ ಜಾತಿ ಕಾಲಂ೬ರಲ್ಲಿ ಅನುಬಂಧ ೩ಸಿಯಲ್ಲಿ ನಾಯಕ ಕೋಡ್ ನಂ. ೩ಸಿ ೦೭೮, ವಾಲ್ಮೀಕಿ ಕೋಡ್ ನಂ. ೩ಸಿ ೯೯, ಅಥವಾ ಬೇಡ ೩ಸಿ ಕೋಡ್ ನಂ. ೩ಸಿ ೦೦೭ ಎಂದು ನಮೂದಿಸಬೇಕೆಂದು ವಾಲ್ಮೀಕಿ ನಾಯಕ ಸಮಾಜದ ಬಂಧುಗಳಲ್ಲಿ ಮನವಿ ಮಾಡಿದ್ದಾರೆ. 

Leave a Reply