You are here
Home > Koppal News > ಸಂಗೊಳ್ಳಿ ರಾಯಣ್ಣನ ಪುಣ್ಯರಾಧನೆ ಮಕ್ಕಳಿಗೆ ಹಾಲು,ಹಣ್ಣು,ಬ್ರೇಡ್ ವಿತರಣೆ

ಸಂಗೊಳ್ಳಿ ರಾಯಣ್ಣನ ಪುಣ್ಯರಾಧನೆ ಮಕ್ಕಳಿಗೆ ಹಾಲು,ಹಣ್ಣು,ಬ್ರೇಡ್ ವಿತರಣೆ

 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯರಾದನೆಯ ನಿಮಿತ್ಯ ಜಿಲ್ಲಾ ಕನಕದಳ ಸೇವಾ ಸಮಿತಿಯಿಂದ ಭಾಗ್ಯನಗರದಲ್ಲಿರುವ ಸರ್ಕಾರಿ ಬಾಲ ಭವನದ ಮಕ್ಕಳಿಗೆ ಇಂದು ಮದ್ಯಾಹ್ನ ೧೨.೩೦ಕ್ಕೆ ಹಾಲು,ಹಣ್ಣು ಮತ್ತು ಬ್ರೇಡ್‌ಗಳನ್ನು ವಿತರಿಸಲಾಯಿತು. 
ಈ ಸಂದರ್ಭದಲ್ಲಿ ಕನಕದಳ ಸೇವಾಸಮಿತಿಯ ಜಿಲ್ಲಾಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ,ಹಾಲುಮತ ಸಮಾಜದ ತಾಲೂಕ ಅಧ್ಯಕ್ಷರಾದ ಜಡಿಯಪ್ಪ ಬಂಗಾಳಿ,ನಿವೃತ್ತ ವಾರ್ತಾಧಿಕಾರಿಗಳಾದ ಬಸವರಾಜ ಆಕಳವಾಡಿ,ಗವಿಸಿದ್ದೇಶ್ವರ ಪದವಿ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕರಾದ ಎಂ.ಎಂ.ಕಂಬಾಳಿಮಠ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ,ಅಂದಪ್ಪ ಚಿಲಗೊಡರ್ ಕಾಳಿದಾಸ ಯುವಕ ಸಂಘದ ಅಧ್ಯಕ್ಷರು,ಮುಖಂಡರಾದ ಅಂದಾನಸ್ವಾಮಿ ಭೂತಣ್ಣನವರ,ಮಂಜುನಾಥ ಹುಲ್ಲಹತ್ತಿ,ಶಿವಾನಂದ ಯಲ್ಲಮ್ಮನವರ,ಹನುಮಂತಪ್ಪ ಅರಸೀಕೇರಿ,ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ,ಶ್ರೀನಿವಾಸರಾವ್,ಭಿಮೇಶ ಬೇವಿನಹಳ್ಳಿ,ಬಾಲಮಂದಿರದ ಅಧಿಕ್ಷಕರಾದ ನಾಗಮ್ಮ ಬನ್ನಿಕೊಪ್ಪ ಮುಂತಾದವರು ಹಾಜರಿದ್ದರು.

Leave a Reply

Top